ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ನೂತನ ವಿಶ್ವ ದಾಖಲೆಯೊಂದು (World Record) ನಿರ್ಮಾಣವಾಗಿದೆ. ಮಹಿಳಾ ಆಟಗಾರ್ತಿಯಿಂದ ಈ ಸಾಧನೆ ಮೂಡಿಬಂದಿದ್ದು, ಈವರೆಗೆ ಪುರುಷರು ಸಹ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ದಾಖಲೆ ಮಾಡಿಲ್ಲ. ನೆದರ್‌ಲ್ಯಾಂಡ್ಸ್ ತಂಡದ 21 ವರ್ಷದ ವೇಗದ ಬೌಲರ್ ಫ್ರೆಡೆರಿಕ್ ಓವರ್‌ಡಿಕ್ (Frederique Overdijk) ಟಿ-20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಯೋಜಿಸಿದ ಯುರೋಪಿಯನ್ ಟಿ-20 ವಿಶ್ವಕಪ್ನ (Europe Qualifier T20I World Cup) ಫ್ರಾನ್ಸ್ ಹಾಗೂ ನೆದರ್‌ಲ್ಯಾಂಡ್ಸ್ ಮಹಿಳಾ ಕ್ವಾಲಿಫೈಯರ್ ಪಂದ್ಯದ ವೇಳೆ ಈ ದಾಖಲೆ ನಿರ್ಮಾಣವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡ ಫ್ರಾನ್ಸ್ ಸತತವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ಫ್ರೆಡೆರಿಕ್ ಓವರ್‌ಡಿಕ್ ಬೌಲಿಂಗ್ಗೆ ತರಗೆಲೆಯಂತೆ ಫ್ರಾನ್ಸ್ ವಿಕೆಟ್ಗಳು ಉರುಳಿದವು. ಪರಿಣಾಮ 17.3 ಓವರ್ನಲ್ಲಿ ಕೇವಲ 33 ರನ್ಗೆ ಫ್ರಾನ್ಸ್ ಆಲೌಟ್ ಆಯಿತು. ಫ್ರೆಡೆರಿಕ್ 4 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತಿ 3 ರನ್ ನೀಡಿ 7 ವಿಕೆಟ್ ಕಬಳಿಸಿದರು. 34 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ನೆದರ್ಲ್ಯಾಂಡ್ ಕೇವಲ 3.3 ಓವರ್ನಲ್ಲಿ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.
4 ಓವರ್‌ಗಳಲ್ಲಿ 7 ವಿಕೆಟ್ ಪಡೆದು ದಾಖಲೆ ಬರೆದ ಓವರ್‌ಡಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಈ ಹಿಂದೆ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 6 ವಿಕೆಟ್ ಪಡೆದ ವಿಶ್ವ ದಾಖಲೆ ಇತ್ತು. ಓವರ್‌ಡಿಕ್ 6 ಬ್ಯಾಟ್ಸ್‌ಮನ್‌ಗಳನ್ನ ಹಿಂದಿಕ್ಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಇದು ಇವರ 8ನೇ ಟಿ-20 ಅಂತರರಾಷ್ಟ್ರೀಯ ಪಂದ್ಯವಾಗಿದ್ದು, ಈ ಮೊದಲು ಅವರು 7 ಪಂದ್ಯಗಳಲ್ಲಿ ಕೇವಲ 4 ವಿಕೆಟ್ಗಳನ್ನಷ್ಟೆ ಕಿತ್ತಿದ್ದರು.
?7️⃣ Frédérique Overdijk, take a bow!
Volg alles live ➡️ https://t.co/ORUc4BKn0G#FRAvNED #CricketNL #ICCT20WCEQ #T20WorldCup pic.twitter.com/7Y0zEXemAx
— Cricket?Netherlands (@KNCBcricket) August 26, 2021
ಫ್ರೆಡೆರಿಕ್ ಮೊದಲು ನೇಪಾಳದ ಅಂಜಲಿ ಚಂದ್ ಟಿ20 ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದರು. ಡಿಸೆಂಬರ್ 2019ರಲ್ಲಿ, ಅವರು ಮಾಲ್ಡೀವ್ಸ್ ವಿರುದ್ಧ 2.1 ಓವರ್‌ಗಳಲ್ಲಿ ರನ್ ನೀಡಿ 6 ವಿಕೆಟ್ ಪಡೆದಿದ್ದರು. ಭಾರತದ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆಯನ್ನು ಜೂಲನ್ ಗೋಸ್ವಾಮಿ ಹೊಂದಿದ್ದಾರೆ. ವೇಗದ ಬೌಲರ್ ಜೂಲನ್ 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ 11 ರನ್ ನೀಡಿ 5 ವಿಕೆಟ್ ಪಡೆದಿದ್ದರು.
ಪುರುಷರ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ದಾಖಲೆ ಟೀಮ್ ಇಂಡಿಯಾದ ದೀಪಕ್ ಚಹಾರ್ ಹೆಸರಲ್ಲಿದೆ. ಇವರು 2013 ರಲ್ಲಿ ಬಾಂಗ್ಲಾದೇಶ ವಿರುದ್ಧ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.
Tokyo 2020 Paralympics: ಮಹಿಳಾ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಭಾರತದ ಭಾವಿನಾ
India vs England: ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಬೃಹತ್ ಮುನ್ನಡೆ: ಎರಡನೇ ದಿನದಾಟದ ಹೈಲೈಟ್ಸ್ ಇಲ್ಲಿದೆ
(ICC Womens T20 World Cup Europe Qualifier Netherlands bowler Frederique Overdijk posts world-record T20I)