India vs South Africa Women: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ: ಶಫಾಲಿ ಅರ್ಧಶತಕ

Women's World Cup 2022, India vs South Africa: ಇದು ಮಿಥಾಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರೆ ಸೆಮಿ ಫೈನಲ್​ಗೆ ಪ್ರವೇಶ ಪಡೆಯಲಿದೆ. ಸೋತರೆ ಟೂರ್ನಿಯಿಂದ ಹೊರ ಬೀಳುವುದು ಖಚಿತ. ಹೀಗಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

India vs South Africa Women: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ: ಶಫಾಲಿ ಅರ್ಧಶತಕ
INDW vs SAW Womens World Cup
Updated By: Vinay Bhat

Updated on: Mar 27, 2022 | 7:44 AM

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Womens World Cup 2022) ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು ಲೀಗ್ ಹಂತದ ಕೊನೇ ಪಂದ್ಯ ನಡೆಯುತ್ತಿದ್ದು ಭಾರತ ಮಹಿಳಾ ತಂಡ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ (India vs South Africa Women) ತಂಡ ಮುಖಾಮುಖಿ ಆಗುತ್ತಿದೆ. ಇದು ಮಿಥಾಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರೆ ಸೆಮಿ ಫೈನಲ್​ಗೆ ಪ್ರವೇಶ ಪಡೆಯಲಿದೆ. ಸೋತರೆ ಟೂರ್ನಿಯಿಂದ ಹೊರ ಬೀಳುವುದು ಖಚಿತ. ಹೀಗಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಜೊತೆಗೆ ಭರ್ಜರಿ ಆರಂಭವನ್ನು ಕೂಡ ಪಡೆದುಕೊಂಡಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಸೆಮಿ ಫೈನಲ್​ಗೇರಿದೆ. ಉಳಿದಿರುವ ಎರಡು ಸ್ಥಾನಕ್ಕಾಗಿ ಇದೀಗ ಪೈಪೋಟಿ ಏರ್ಪಟ್ಟಿದೆ. ಒಂದು ವೇಳೆ ಭಾರತ ಇಂದಿನ ಪಂದ್ಯ ಸೋಲದೆ, ಪಂದ್ಯ ರದ್ದುಗೊಂಡರೂ ನಾಕೌಟ್‌ಗೆ ತೇರ್ಗಡೆಯಾಗಲಿದೆ.

ಸದ್ಯ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದಿರುವ ಭಾರತ ಬೊಂಬಾಟ್ ಆರಂಭ ಪಡೆದುಕೊಂಡಿದೆ. ಓಪನರ್​ಗಳಾದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅದರಲ್ಲೂ ಶಫಾಲಿ ತಮ್ಮದೇ ಶೈಲಿಯ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ಮೊದಲ ವಿಕೆಟ್​​ಗೆ ಈ ಜೋಡಿ 91 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಗಿಯೇ ಆಡುತ್ತಿದ್ದ ಶಫಾಲಿ 53 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಜೂನ್ ಗೋಸ್ವಾಮಿ ಬದಲು ಮೇಘ್ನಾ ಸಿಂಗ್ ಮತ್ತು ಪೂನಂ ಯಾದವ್ ಜಾಗಕ್ಕೆ ದೀಪ್ತಿ ಶರ್ಮಾ ಬಂದಿದ್ದಾರೆ.

ಭಾರತ ಪ್ಲೇಯಿಂಗ್ XI:

ಸ್ಮೃತಿ ಮಂದನಾ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೆಹ್ ರಾಣಾ, ದೀಪ್ತಿ ಶರ್ಮಾ, ಮೆಘ್ನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI:

ಲಿಜ್ಜೆಲೆ ಲೀ, ಲೌರಾ ವೋಲ್ವರ್ಡ್‌, ಲಾರಾ ಗುಡಾಲ್, ಸುನೆ ಲೌಸ್ (ನಾಯಕಿ), ಮಿಗ್ನಾನ್‌ ಡು ಪ್ರೀಜ್, ಮರಿಜಾನೆ ಕ್ಯಾಪ್, ಚೋಲೆ ಟ್ರಯನ್, ತ್ರಿಶಾ ಚೆಟ್ಟಿ (ವಿಕೆಟ್ ಕೀಪರ್), ಶಬ್ನಿಮ್‌ ಇಸ್ಮಾಯಿಲ್, ಮಸಬೆಟ ಕ್ಲಾಸ್, ಅಯಾಬೊಂಗ ಕಾಕ.

ಕಳೆದ ಬಾರಿಯ ರನ್ನರ್ ಅಪ್ ಭಾರತಕ್ಕೆ ಈ ಆವೃತ್ತಿಯಲ್ಲಿ ಇದುವರೆಗೆ ನಿರೀಕ್ಷಿತ ಸಾಮರ್ಥ್ಯ ಪ್ರದರ್ಶನ ತೋರಲು ಸಾಧ್ಯವಾಗಿಲ್ಲ. ಆರು ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಗೆಲ್ಲಲು ತಂಡಕ್ಕೆ ಸಾಧ್ಯವಾಗಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಗೆದ್ದರೂ ಇದಕ್ಕೂ ಮೊದಲು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಇಂಗ್ಲೆಂಡ್ ಸುಲಭವಾಗಿ ಮಣಿದರೆ ಭಾರತದ ಕನಸು ನನಸಾಗಲಿದೆ.

CSK vs KKR, IPL 2022: ಭವಿಷ್ಯದ ನಾಯಕನ ಬೊಂಬಾಟ್ ಕ್ಯಾಪ್ಟನ್ಸಿ: ಜಡೇಜಾಗೆ ಮೊದಲ ಪಂದ್ಯದಲ್ಲೇ ಹಿನ್ನಡೆ