CSK vs KKR, IPL 2022: ಭವಿಷ್ಯದ ನಾಯಕನ ಬೊಂಬಾಟ್ ಕ್ಯಾಪ್ಟನ್ಸಿ: ಜಡೇಜಾಗೆ ಮೊದಲ ಪಂದ್ಯದಲ್ಲೇ ಹಿನ್ನಡೆ

Chennai vs Kolkata: ಇಬ್ಬರು ನೂತನ ನಾಯಕರ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ ಮೇಲುಗೈ ಸಾಧಿಸಿದರು. ಈ ಮೂಲಕ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಅಯ್ಯರ್​​ಗೆ ಕೆಕೆಆರ್ ನಾಯಕ ಪಟ್ಟದಲ್ಲಿ ಮೊದಲ ಯಶಸ್ಸು ದಕ್ಕಿದೆ.

CSK vs KKR, IPL 2022: ಭವಿಷ್ಯದ ನಾಯಕನ ಬೊಂಬಾಟ್ ಕ್ಯಾಪ್ಟನ್ಸಿ: ಜಡೇಜಾಗೆ ಮೊದಲ ಪಂದ್ಯದಲ್ಲೇ ಹಿನ್ನಡೆ
CSK vs KKR IPL 2022
Follow us
TV9 Web
| Updated By: Vinay Bhat

Updated on: Mar 27, 2022 | 7:10 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2022) ಚಾಲನೆ ದೊರಕಿದ್ದು ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಭರ್ಜರಿ ಗೆಲುವು ದಾಖಲಿಸಿದೆ. ಇಬ್ಬರು ನೂತನ ನಾಯಕರ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ ಮೇಲುಗೈ ಸಾಧಿಸಿದರು. ಈ ಮೂಲಕ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಅಯ್ಯರ್​​ಗೆ ಕೆಕೆಆರ್ ನಾಯಕ ಪಟ್ಟದಲ್ಲಿ ಮೊದಲ ಯಶಸ್ಸು ದಕ್ಕಿದೆ. ಇತ್ತ ಅಗ್ನಿ ಪರೀಕ್ಷೆಗೆ ಇಳಿದಿದ್ದ ರವೀಂದ್ರ ಜಡೇಜಾ ಅವರಿಗೆ ಭಾರೀ ಹಿನ್ನಡೆಯಾಗಿದೆ. ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅರ್ಧಶತಕದ ಹೊರತಾಗಿಯೂ ಸಿಎಸ್​ಕೆ ಸೋಲು ಕಂಡಿತು. ಇತ್ತ ಕೆಕೆಆರ್ ಪರ ಕಳಪೆ ಫಾರ್ಮ್​​ನಿಂದಾಗಿ ಭಾರತ ತಂಡದಿಂದ ಹೊರಬಿದ್ದಿದ್ದ ಅಜಿಂಕ್ಯಾ ರಹಾನೆ ಅತ್ಯುತ್ತಮ ಇನ್ನಿಂಗ್ಸ್​ ಆಡಿದರು.

ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್​​ನಲ್ಲೇ ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ ಅವರು ಉಮೇಶ್ ಯಾದವ್ ಬೌಲಿಂಗ್​​ನಲ್ಲಿ ಶೂನ್ಯಕ್ಕೆ ಔಟ್ ಆದರು. ಹಾಗೂ ಮತ್ತೋರ್ವ ಆರಂಭಿಕ ಆಟಗಾರ ಡಿವೋನ್ ಕಾನ್ವೆ ಕೂಡ 3 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಬಿನ್ ಉತ್ತಪ್ಪ 21 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಂಬಟಿ ರಾಯುಡು 17 ಎಸೆತಗಳಿಗೆ 15 ರನ್ ನೀಡಿ ಔಟ್ ಆದರು ಹಾಗೂ ತಂಡದ ಆಲ್‌ರೌಂಡರ್ ಶಿವಮ್ ದುಬೆ 6 ಎಸೆತಗಳಲ್ಲಿ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಹೀಗೆ ಚೆನ್ನೈ ಬೇಗನೇ ತನ್ನ ಮೊದಲ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ತಂಡಕ್ಕೆ ಆಸರೆಯಾದದ್ದು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಂಎಸ್ ಧೋನಿ. ಇವರಿಗೆ ನಾಯಕ ಜಡೇಜಾ ಕೂಡ ಉತ್ತಮ ಸಾಥ್ ನೀಡಿದರು. ತಾವು ಎದುರಿಸಿದ್ದ ಮೊದಲ 10 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದ ಧೋನಿ ಅಂತಿಮ 28 ಎಸೆತಗಳಲ್ಲಿ 48 ರನ್ ಬಾರಿಸಿದರು. ಇದು ಐಪಿಎಲ್‌ನಲ್ಲಿ ಧೋನಿ ಬ್ಯಾಟ್‌ನಿಂದ ಸಿಡಿದ 24ನೇ ಅರ್ಧಶತಕವಾಗಿದೆ. ಮಹಿ ಕೊನೆಯದಾಗಿ 2019ರಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಫಿಫ್ಟಿ ಗಳಿಸಿದ್ದರು. ಅಲ್ಲದೆ 40ರ ಹರೆಯದಲ್ಲೂ ಅದ್ಭುತ ಫಿಟ್‌ನೆಸ್ ಹಾಗೂ ಬ್ಯಾಟಿಂಗ್ ಕೌಶಲ್ಯ ಮೆರೆಯುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ಧೋನಿ ನೆಲಕಚ್ಚಿ ನಿಂತ ನಂತರ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 38 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ಇನ್ನು ಧೋನಿಗೆ ಸಾಥ್ ನೀಡಿದ ನಾಯಕ ಜಡೇಜಾ 28 ಎಸೆತಗಳಲ್ಲಿ ಅಜೇಯ 26 ರನ್‌ ಬಾರಿಸಿದರು. ಸಿಎಸ್​​ಕೆ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್​ ಗಳಿಸಿತು. ಕೆಕೆಆರ್ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದರು.

132 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​​ಗೆ ಆರಂಭಿಕರಾದ ಅಂಜಿಕ್ಯಾ ರಹಾನೆ ಹಾಗೂ ವೆಂಕಟೇಶ್​ ಅಯ್ಯರ್​ 43 ರನ್​ಗಳ ಜೊತೆಯಾಟ ನೀಡಿದರು. ಅಯ್ಯರ್​, ಬ್ರಾವೋಗೆ ವಿಕೆಟ್​ ಒಪ್ಪಿಸಿದರು. ಬಳಿಕ ನಿತಿಶ್​ ರಾಣಾ 21 ರನ್​ಗಳಿಸಲಷ್ಟೇ ಶಕ್ತರಾದರು. ಕೆಕೆಆರ್​ ತಂಡ 76ರನ್​ಗಳಿಸಿದ್ದಾಗ ಮತ್ತೆ ಬ್ರಾವೋಗೆ ನಿತಿಶ್​ ರಾಣಾ ಔಟ್​ ಆದರು. ಆರಂಭಿಕ ಆಟಗಾರನಾಗಿ ಬಂದಿದ್ದ ಅಜಿಂಕ್ಯಾ ರಹಾನೆ ಉತ್ತಮ್ಮ ಪ್ರದರ್ಶನ ನೀಡಿದರು 34 ಬಾಲ್​ಗಳಲ್ಲಿ 44 ರನ್​ಗಳಿಸಿ ರವೀಂದ್ರ ಜಡೇಜಾಗೆ ಕ್ಯಾಚ್​ ನೀಡಿ ಔಟ್​ ಆದರು.

ನಿತೀಶ್​ ರಾಣಾ ಔಟ್​ ಆಗುತ್ತಿದ್ದಂತೆ ಗೆಲುವಿಗೆ ಹೋರಾಟ ನಡೆಸಿದ ನಾಯಕ ಶ್ರೇಯಸ್​ ಅಯ್ಯರ್​ ತಾಳ್ಮೆ ಕಳೆದುಕೊಳ್ಳದೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಗೆ ಸಾಥ್​ ನೀಡಿದ ಸ್ಯಾಮ್​ ಬಿಲ್ಲಿಂಗ್ಸ್​ ಅದ್ಭುತ ಆಟವಾಡಿದರು. ಸ್ಯಾಮ್​ ಬಿಲ್ಲಿಂಗ್ಸ್ 22​ ಬಾಲ್​ಗೆ 25 ರನ್​ ಗಳಿಸಿ ಔಟ್​ ಆದರು. ಇನ್ನೂ ಶ್ರೇಯಸ್​ ಅಯ್ಯರ್​ ಔಟಾಗದೆ 19 ಬಾಲ್​ಗಳಲ್ಲಿ20 ರನ್​ಗಳಿಸಿದರು. ಅಂತಿಮವಾಗಿ ಕೆಕೆಆರ್ 18.3 ಓವರ್​ನಲ್ಲೇ 4 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 6 ವಿಕೆಟ್​​ಗಳ ಜಯ ಕಂಡಿತು. ಉಮೇಶ್ ಯಾದವ್ ಪಂದ್ಯಶ್ರೇಷ್ಠ ಬಾಜಿಕೊಂಡರು.

PBKS vs RCB Playing XI IPL 2022: ಆರ್​ಸಿಬಿ ತಂಡದ ಇಬ್ಬರು ಅಲಭ್ಯ: ಹೇಗಿರಲಿದೆ ಪ್ಲೇಯಿಂಗ್ 11

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್