AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂದ್ಯಾವಳಿಯ ಆಟಗಾರ ಕಿಂಗ್ ಕೊಹ್ಲಿ; ಈ ವಿಶ್ವಕಪ್‌ನ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ICC World Cup 2023 Award Winners List: ಇನ್ನು ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು 765 ರನ್ ಕಲೆಹಾಕಿದ ಕೊಹ್ಲಿ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯನ್ನು ಪಡೆದರೆ, ಫೈನಲ್ ಪಂದ್ಯದಲ್ಲಿ 137 ರನ್​ಗಳ ನಾಕ್ ಆಡಿದ ಹೆಡ್, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು.

ಪಂದ್ಯಾವಳಿಯ ಆಟಗಾರ ಕಿಂಗ್ ಕೊಹ್ಲಿ; ಈ ವಿಶ್ವಕಪ್‌ನ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
ವಿಶ್ವಕಪ್ ಪ್ರಶಸ್ತಿ ವಿಜೇತರ ಪಟ್ಟಿ
ಪೃಥ್ವಿಶಂಕರ
|

Updated on:Nov 20, 2023 | 7:37 AM

Share

ನವೆಂಬರ್ 19 ರ ಭಾನುವಾರದಂದು ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium in Ahmedabad) ನಡೆದ 2023 ರ ವಿಶ್ವಕಪ್ (ICC World Cup 2023) ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ (India Vs Australia) ತನ್ನ 10 ನೇ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಸೀಸ್ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಟ್ರಾವಿಸ್ ಹೆಡ್ ತನ್ನ ಶತಕದಮೂಲಕ ಕೋಟ್ಯಾಂತರ ಭಾರತೀಯರ ಅಭಿಮಾನಿಗಳ ಹೃದಯ ಒಡೆದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ (Virat Kohli) ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕಗಳ ಆಧಾರದ ಮೇಲೆ 240 ರನ್ ಕಲೆಹಾಕಿತು. ಆದರೆ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್​ಗೇರಿದ್ದ ಭಾರತದ ಅಜೇಯ ಓಟ ಆರು ವಿಕೆಟ್‌ಗಳ ಬೃಹತ್ ಸೋಲಿನೊಂದಿಗೆ ಕೊನೆಗೊಂಡಿತು. ಈ ವಿಶ್ವಕಪ್ ಅಂತ್ಯದೊಂದಿಗೆ ಪ್ರಶಸ್ತಿ ವಿಜೇತರ ಪಟ್ಟಿಯೂ ಹೊರಬಿದ್ದಿತು.

ವಿರಾಟ್​ಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿ

ಇನ್ನು ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು 765 ರನ್ ಕಲೆಹಾಕಿದ ಕೊಹ್ಲಿ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯನ್ನು ಪಡೆದರೆ, ಫೈನಲ್ ಪಂದ್ಯದಲ್ಲಿ 137 ರನ್​ಗಳ ನಾಕ್ ಆಡಿದ ಹೆಡ್, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಅರ್ಧಶತಕ ಸಿಡಿಸುವ ಮೂಲಕ ಅಭಿಯಾನವನ್ನು ಆರಂಭಿಸಿದ ಕೊಹ್ಲಿ 11 ಇನ್ನಿಂಗ್ಸ್‌ಗಳಲ್ಲಿ 9 ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದರು. ಇದರೊಂದಿಗೆ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳು ಮತ್ತು ಹೆಚ್ಚು ರನ್‌ಗಳ ಪ್ರಮುಖ ದಾಖಲೆಗಳನ್ನು ಕೊಹ್ಲಿ ಮುರಿದರು.

ಈ ವಿಶ್ವಕಪ್‌ನಲ್ಲಿ ಭಾರತದ ಆಟಗಾರರು ಲೀಡರ್‌ಬೋರ್ಡ್ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿರುವುದು ಟೀಂ ಇಂಡಿಯಾ ಅಭಿಮಾನಿಗಳಿಗೆ ಕೊಂಚ ಸಮಾಧಾನಕರ ಸಂಗತಿಯಾಗಿದೆ. ವಿರಾಟ್ ಕೊಹ್ಲಿ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೌಲಿಂಗ್ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಪ್ರಾಬಲ್ಯ ಮೆರೆದಿದ್ದಾರೆ. ಇಡೀ ಟೂರ್ನಿಯಲ್ಲಿ 765 ರನ್ ಸಿಡಿಸಿರುವ ಕೊಹ್ಲಿಯ ನಂತರ, ರೋಹಿತ್ ಶರ್ಮಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಅತ್ಯಧಿಕ ವಿಕೆಟ್ ಪಡೆದ ಶಮಿ

ಇಡೀ ಟೂರ್ನಮೆಂಟ್‌ನಲ್ಲಿ ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ, ಫೈನಲ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್‌ ಉರುಳಿಸುವುದರೊಂದಿಗೆ ಈ ವಿಶ್ವಕಪ್​ನಲ್ಲಿ ಅಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಅತ್ಯಂತ ದುಬಾರಿ ಬೌಲರ್ ಆಗಿ ಹೊರಹೊಮ್ಮಿದರು. ಈ ವಿಶ್ವಕಪ್​ನಲ್ಲಿ ಕೇವಲ 7 ಇನ್ನಿಂಗ್ಸ್‌ಗಳನ್ನಾಡಿದ ಶಮಿ 24 ವಿಕೆಟ್‌ಗಳೊಂದಿಗೆ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಇನ್ನು ಈ ವಿಶ್ವಕಪ್‌ನ ಯಾವ್ಯಾವ ಆಟಗಾರನಿಗೆ ಯಾವ್ಯಾವ ಪ್ರಶಸ್ತಿ ಸಿಕ್ಕಿತ್ತು ಎಂಬುದನ್ನು ನೋಡುವುದಾದರೆ..

ಪ್ರಶಸ್ತಿ ವಿಜೇತರ ಪಟ್ಟಿ:

  • ಪಂದ್ಯಾವಳಿಯ ಆಟಗಾರ – ವಿರಾಟ್ ಕೊಹ್ಲಿ (765 ರನ್, 1 ವಿಕೆಟ್, 5 ಕ್ಯಾಚ್)
  • ಫೈನಲ್‌ ಪಂದ್ಯದ ಪಂದ್ಯ ಶ್ರೇಷ್ಠ – ಟ್ರಾವಿಸ್ ಹೆಡ್ (137 ರನ್, 1 ಕ್ಯಾಚ್)
  • ಅತಿ ಹೆಚ್ಚು ರನ್ – ವಿರಾಟ್ ಕೊಹ್ಲಿ (11 ಇನ್ನಿಂಗ್ಸ್‌ಗಳಲ್ಲಿ 765 ರನ್)
  • ಒಂದು ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ – ಗ್ಲೆನ್ ಮ್ಯಾಕ್ಸ್‌ವೆಲ್ ( ಅಫ್ಘಾನಿಸ್ತಾನದ ವಿರುದ್ಧ ಅಜೇಯ 201 ರನ್)
  • ಅತ್ಯಧಿಕ ಶತಕ – ಕ್ವಿಂಟನ್ ಡಿ ಕಾಕ್ (4 ಶತಕಗಳು)
  • ಅತಿ ಹೆಚ್ಚು ಅರ್ಧಶತಕ – ವಿರಾಟ್ ಕೊಹ್ಲಿ (6 ಅರ್ಧಶತಕ)
  • ಅತಿ ಹೆಚ್ಚು ವಿಕೆಟ್‌ಗಳು – ಮೊಹಮ್ಮದ್ ಶಮಿ (7 ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್‌ಗಳು)
  • ಅತ್ಯುತ್ತಮ ಬೌಲಿಂಗ್ ಪ್ರದರ್ಶನ – ಮೊಹಮ್ಮದ್ ಶಮಿ ( ನ್ಯೂಜಿಲೆಂಡ್ ವಿರುದ್ಧ 57 ರನ್​ಗಳಿಗೆ 7 ವಿಕೆಟ್ ಉರುಳಿಸಿದ್ದು)
  • ಅತಿ ಹೆಚ್ಚು ಸಿಕ್ಸರ್‌ಗಳು – ರೋಹಿತ್ ಶರ್ಮಾ (31 ಸಿಕ್ಸರ್)
  • ಅತಿ ಹೆಚ್ಚು ಕ್ಯಾಚ್‌ಗಳು – ಡೇರಿಲ್ ಮಿಚೆಲ್ (11 ಕ್ಯಾಚ್‌ಗಳು)
  • ಅತಿ ಹೆಚ್ಚು ಉರುಳಿಸಿದ ವಿಕೆಟ್‌ಕೀಪರ್‌ – ಕ್ವಿಂಟನ್ ಡಿ ಕಾಕ್ (20 ವಿಕೆಟ್)
  • ಅತ್ಯಧಿಕ ಸ್ಟ್ರೈಕರ್ ರೇಟ್ – ಗ್ಲೆನ್ ಮ್ಯಾಕ್ಸ್‌ವೆಲ್ (150.37)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:34 am, Mon, 20 November 23

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!