ಕೊಹ್ಲಿ ಸಲಹೆಯನ್ನು ಕಡೆಗಣಿಸಿದ್ರಾ ನಾಯಕ ರೋಹಿತ್? ವೈರಲ್ ವಿಡಿಯೋದಲ್ಲಿ ಇರುವುದೇನು?
IND vs NZ, ICC World Cup 2023: ಕಿವೀಸ್ ಬ್ಯಾಟಿಂಗ್ ಮಾಡುವ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ನಡುವೆ ನಡೆದ ಮಾತುಕತೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಏಕದಿನ ವಿಶ್ವಕಪ್ನಲ್ಲಿ (ICC World Cup 2023) 2 ಅಜೇಯ ತಂಡಗಳಾದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ (India Vs New Zealand) ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 274 ರನ್‌ಗಳ ಟಾರ್ಗೆಟ್ ನೀಡಿದೆ. ಈ ಗುರಿ ಬೆನ್ನಟ್ಟಿರುವ ಭಾರತ ಕೂಡ ಉತ್ತಮ ಆರಂಭ ಪಡೆದುಕೊಂಡಿದೆ. ಆದರೆ ಇದಕ್ಕೂ ಮುನ್ನ ಕಿವೀಸ್ ಬ್ಯಾಟಿಂಗ್ ಮಾಡುವ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ನಡುವೆ ನಡೆದ ಮಾತುಕತೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಅವರ ಸಲಹೆಯನ್ನು ತಿರಸ್ಕರಿಸಿ ಮೊಂಡುತನ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹಿತ್-ವಿರಾಟ್ ನಡುವೆ ನಡೆದಿದ್ದೇನು?
ನ್ಯೂಜಿಲೆಂಡ್ ಇನ್ನಿಂಗ್ಸ್ನ 31ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಈ ವೇಳೆಗೆ ನ್ಯೂಜಿಲೆಂಡ್ ತನ್ನ ಆರಂಭಿಕ ಆಘಾತದಿಂದ ಹೊರಬಂದು, ರಚಿನ್ ರವೀಂದ್ರ ಹಾಗೂ ಡೆರೆಲ್ ಮಿಚೆಲ್ ಅವರ ಅರ್ಧಶತಕದ ನೆರವಿನಿಂದ ಶತಕದ ಜೊತೆಯಾಟ ನಡೆಸಿತ್ತು. ಆರಂಭದಲ್ಲೇ ಎರಡು ವಿಕೆಟ್ ಉರುಳಿಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ವೇಗಿಗಳು ಆನಂತರ ತಮ್ಮ ಲಯ ಕಳೆದುಕೊಂಡಿದ್ದರು. ಅಲ್ಲದೆ ತಂಡದ ಫೀಲ್ಡಿಂಗ್ ಕೂಡ ತೀರ ಕಳಪೆಯಾಗಿತ್ತು. ಆಟಗಾರರು ಇವರಿಬ್ಬರ ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದರು.
IND vs NZ: ಮಿಚೆಲ್ ಶತಕ; 5 ವಿಕೆಟ್ ಪಡೆದ ಶಮಿ! 274 ರನ್ ಟಾರ್ಗೆಟ್
ಇದೆಲ್ಲದರಿಂದ ಹತಾಶರಾಗಿದ್ದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಬಳಿ ಬಂದು ಏನನ್ನೋ ಹೇಳಲು ಆರಂಭಿಸಿದರು. ಆದರೆ ಕೊಹ್ಲಿ ಮಾತನ್ನು ರೋಹಿತ್ ಸರಸಾಗಟಾಗಿ ತಿರಸ್ಕರಿಸಿದಿರು. ಇದನ್ನು ನಾವು ವಿಡಿಯೋದಲ್ಲೂ ಕಾಣಬಹುದಾಗಿದೆ. ಆ ನಂತರವೂ ಕೊಹ್ಲಿ, ರೋಹಿತ್ ಬಳಿ ಚರ್ಚೆ ಮುಂದುವರೆಸಿದರು. ಬಳಿಕ ಕೊಹ್ಲಿ ಜೊತೆ ಕೆಲ ಸಮಯ ಮಾತನಾಡಿದ ರೋಹಿತ್, ವಿರಾಟ್ರನ್ನು ಕೊಂಚ ಶಾಂತಗೊಳಿದರು. ಆ ಬಳಿಕ ಕೊಹ್ಲಿ ಕೂಡ ಫೀಲ್ಡಿಂಗ್ ಮಾಡಲು ತಮ್ಮ ಜಾಗಕ್ಕೆ ಮರಳಿದರು. ವಿರಾಟ್ ಮತ್ತು ರೋಹಿತ್ ನಡುವೆ ನಡೆದ ಈ ಮಾತಿನ ಚಕಮಕಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Captain Rohit Sharma ignoring Virat Kohli’s fluke opinion on the field.
Take this crown my king ! @ImRo45 👑pic.twitter.com/jnk5xvwEl8
— 𝐇𝐲𝐝𝐫𝐨𝐠𝐞𝐧 𝕏 (@ImHydro45) October 22, 2023
ನ್ಯೂಜಿಲೆಂಡ್ ಇನ್ನಿಂಗ್ಸ್ ಹೀಗಿತ್ತು
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ರಚಿನ್ ರವೀಂದ್ರ ಮತ್ತು ಡ್ಯಾರೆಲ್ ಮಿಚೆಲ್ ನಡುವಿನ 159 ರನ್‌ಗಳ ದಾಖಲೆಯ ಜೊತೆಯಾಟದಿಂದಾಗಿ 274 ರನ್ ಕಲೆಹಾಕಿತು. ರಚಿನ್ ರವೀಂದ್ರ 75 ರನ್ ಗಳಿದರೆ, ಡ್ಯಾರೆಲ್ ಮಿಚೆಲ್ 130 ರನ್‌ಗಳ ಅತ್ಯಧಿಕ ರನ್ ದಾಖಲಿಸಿದರು. ಗ್ಲೆನ್ ಫಿಲಿಪ್ಸ್ 23 ರನ್ ಮತ್ತು ವಿಲ್ ಯಂಗ್ 17 ರನ್ ಕೊಡುಗೆ ನೀಡಿದರು. ಇತರರು ಎರಡಂಕಿ ಅಂಕಿಗಳನ್ನು ಸಹ ತಲುಪಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಶಮಿ ಟೀಂ ಇಂಡಿಯಾ ಪರ ಅತಿ ಹೆಚ್ಚು 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಕುಲ್ದೀಪ್ ಯಾದವ್ 2 ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ