IND vs NZ: ಮಿಚೆಲ್ ಶತಕ; 5 ವಿಕೆಟ್ ಪಡೆದ ಶಮಿ! 274 ರನ್ ಟಾರ್ಗೆಟ್

IND vs NZ, ICC World Cup 2023: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 274 ರನ್ ಕಲೆಹಾಕಿದೆ. ಕೊನೆಯಲ್ಲಿ ಭಾರತದ ಬೌಲರ್‌ಗಳು ಬಲಿಷ್ಠ ಪುನರಾಗಮನ ಮಾಡಿ ಕಿವೀಸ್ ತಂಡವನ್ನು 300 ರನ್‌ಗಳ ಗಡಿ ದಾಟಲು ಅವಕಾಶ ನೀಡಲಿಲ್ಲ.

IND vs NZ: ಮಿಚೆಲ್ ಶತಕ; 5 ವಿಕೆಟ್ ಪಡೆದ ಶಮಿ! 274 ರನ್ ಟಾರ್ಗೆಟ್
ಭಾರತ- ನ್ಯೂಜಿಲೆಂಡ್
Follow us
ಪೃಥ್ವಿಶಂಕರ
|

Updated on:Oct 22, 2023 | 6:37 PM

ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 274 ರನ್ ಕಲೆಹಾಕಿದೆ. ಕೊನೆಯಲ್ಲಿ ಭಾರತದ ಬೌಲರ್‌ಗಳು ಬಲಿಷ್ಠ ಪುನರಾಗಮನ ಮಾಡಿ ಕಿವೀಸ್ ತಂಡವನ್ನು 300 ರನ್‌ಗಳ ಗಡಿ ದಾಟಲು ಅವಕಾಶ ನೀಡಲಿಲ್ಲ. ನ್ಯೂಜಿಲೆಂಡ್ ತಂಡದ ಪರ ಡೆರಿಲ್ ಮಿಚೆಲ್ (Daryl Mitchell) ಅಜೇಯ ಶತಕ ಬಾರಿಸಿದರೆ, ಕರ್ನಾಟಕ ಮೂಲದ ರಚಿನ್ ರವೀಂದ್ರ (Rachin Ravindra) ಅರ್ಧಶತಕ ಸಿಡಿಸಿ ಮಿಂಚಿದರು. ಇಂದು ಭಾರತದ ಪರ ಮೊದಲ ಪಂದ್ಯ ಆಡುತ್ತಿರುವ ಮೊಹಮ್ಮದ್ ಶಮಿ (Mohammed Shami)  ಅತಿ ಹೆಚ್ಚು 5 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.

ಕಿವೀಸ್​ಗೆ ಆರಂಭಿಕ ಆಘಾತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡಕ್ಕೆ ವಿಶೇಷ ಆರಂಭ ಸಿಗಲಿಲ್ಲ. ಡೆವೊನ್ ಕಾನ್ವೆ ಖಾತೆಯನ್ನೂ ತೆರೆಯದೆ ಸಿರಾಜ್​ಗೆ ಬಲಿಯಾದರು. 17 ರನ್ ಗಳಿಸಿದ್ದಾಗ ವಿಲ್ ಯಂಗ್ ಕೂಡ ಶಮಿ ಎಸೆತದಲ್ಲಿ ಬೌಲ್ಡ್ ಆದರು. 19 ರನ್‌ಗಳಿಗೆ ಎರಡು ವಿಕೆಟ್‌ಗಳು ಪತನಗೊಂಡ ನಂತರ, ರಚಿನ್ ರವೀಂದ್ರ ಮತ್ತು ಡೆರಿಲ್ ಮಿಚೆಲ್ ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಪವರ್‌ಪ್ಲೇ ಅಂತ್ಯದ ನಂತರ ಕಿವೀಸ್ ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 34 ರನ್ ಆಗಿತ್ತು.

IND vs NZ: 5 ವಿಕೆಟ್ ಉರುಳಿಸಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್ ಶಮಿ..!

ರವೀಂದ್ರ ಅರ್ಧಶತಕ

ಆ ಬಳಿಕ ಉತ್ತಮ ಜೊತೆಯಾಟ ನಡೆಸಿದ ರವೀಂದ್ರ ಮತ್ತು ಮಿಚೆಲ್ ನ್ಯೂಜಿಲೆಂಡ್ ಸ್ಕೋರ್ ಅನ್ನು 13 ಓವರ್‌ಗಳಲ್ಲಿ 50 ಮತ್ತು 21 ಓವರ್‌ಗಳಲ್ಲಿ 100 ರನ್​ಗಳ ಗಡಿ ದಾಟಿಸಿದರು. ಇದೇ ವೇಳೆ ರವೀಂದ್ರ 56 ಎಸೆತಗಳಲ್ಲಿ ಮತ್ತು ಮಿಚೆಲ್ 60 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇವರಿಬ್ಬರು ಒಟ್ಟಾಗಿ ನ್ಯೂಜಿಲೆಂಡ್‌ನ ಸ್ಕೋರ್ ಅನ್ನು 150 ರನ್‌ಗಳ ಗಡಿ ದಾಟಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 159 ರನ್ ಜೊತೆಯಾಟ ನಡೆಸಿದರು. ನ್ಯೂಜಿಲೆಂಡ್‌ನ ಮೂರನೇ ವಿಕೆಟ್ 178 ರನ್‌ಗಳಿಗೆ ಪತನವಾಯಿತು. ರವೀಂದ್ರ 75 ರನ್ ಗಳಿಸಿ ಶಮಿಗೆ ಎರಡನೇ ಬಲಿಯಾದರು.

ಮಿಚೆಲ್ ಶತಕ

ಬಳಿಕ ಮಿಚೆಲ್, ನಾಯಕ ಲೇಥಮ್ ಜೊತೆಗೂಡಿ ನ್ಯೂಜಿಲೆಂಡ್ ಸ್ಕೋರ್ ಅನ್ನು 200ರ ಗಡಿ ದಾಟಿದರು. ಆದಾಗ್ಯೂ, ಕುಲ್ದೀಪ್ ಎಸೆತದಲ್ಲಿ ಲೇಥಮ್ ಔಟಾದರು. ಆದರೆ ದೃಢವಾಗಿ ನಿಂತ ಮಿಚೆಲ್, 100 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಕುಲ್ದೀಪ್ 23 ರನ್​ಗಳ ವೈಯಕ್ತಿಕ ಸ್ಕೋರ್​ನಲ್ಲಿ ಫಿಲಿಪ್ಸ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ಶಮಿಗೆ 5 ವಿಕೆಟ್

ಎಂಟು ರನ್ ಗಳಿಸಿದ್ದ ಚಾಪ್ಮನ್, ಬುಮ್ರಾಗೆ ಬಲಿಯಾದರು. ನ್ಯೂಜಿಲೆಂಡ್‌ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿ ಅವರನ್ನು ಶಮಿ ಬೌಲ್ಡ್ ಮಾಡಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಶಮಿ, 130 ರನ್‌ಗಳಿಸಿದ್ದ ಮಿಚೆಲ್ ಅವರನ್ನು ಔಟ್ ಮಾಡಿ ಪಂದ್ಯದ ಐದನೇ ವಿಕೆಟ್ ಪಡೆದರು. ಅಂತಿಮವಾಗಿ ಕಿವೀಸ್ ತಂಡ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 273 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಶಮಿ ಐದು ವಿಕೆಟ್‌ಗಳ ಹೊರತಾಗಿ ಕುಲ್ದೀಪ್ ಎರಡು, ಬುಮ್ರಾಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Sun, 22 October 23

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ