ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 19, 2023 ರಂದು ನಡೆಯಲಿದೆ. ಆಸ್ಟ್ರೇಲಿಯಾ ತಂಡ ಐದು ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಭಾರತ-ವೆಸ್ಟ್ ಇಂಡೀಸ್ ತಂಡ ತಲಾ 2 ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಪಾಕಿಸ್ತಾನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಲಾ ಒಂದು ಬಾರಿ ವಿಶ್ವಕಪ್ ಗೆದ್ದಿವೆ. ಇನ್ನು ಪ್ರತಿ ವಿಶ್ವಕಪ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಐಸಿಸಿಯಿಂದ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆ ಪ್ರಶಸ್ತಿಗಳಾವುವು ಎಂದು ತಿಳಿಯೋಣ…
ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಐಸಿಸಿ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು 1975 ರಿಂದ ಪ್ರಾರಂಭಿಸಲಾಯಿತು. ಈ ಬಾರಿ ವಿರಾಟ್ ಕೊಹ್ಲಿ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಗೆಲ್ಲುವ ರೇಸ್ ನಲ್ಲಿ ಮುಂದಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಆ್ಯಡಂ ಝಂಪಾ ಗೋಲ್ಡನ್ ಬಾಲ್ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದುವರೆಗಿನ ವಿಶ್ವಕಪ್ನಲ್ಲಿ ಗೋಲ್ಡನ್ ಬ್ಯಾಟ್ ಗೆದ್ದ ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ…
ವಿಶ್ವಕಪ್ | ಬ್ಯಾಟ್ಸ್‌ಮನ್ | ದೇಶ | ರನ್‌ಗಳು |
---|---|---|---|
1975 | ಗ್ಲೆನ್ ಟರ್ನರ್ | ನ್ಯೂಝಿಲೆಂಡ್ | 333 |
1979 | ಗಾರ್ಡನ್ ಗ್ರೀನೀಸ್ | ವೆಸ್ಟ್ ಇಂಡೀಸ್ | 253 |
1983 | ಡೇವಿಡ್ ಗೋವರ್ | ಇಂಗ್ಲೆಂಡ್ | 384 |
1987 | ಗ್ರಹಾಂ ಗೂಚ್ | ಇಂಗ್ಲೆಂಡ್ | 471 |
1992 | ಮಾರ್ಟಿನ್ ಕ್ರೋವ್ | ನ್ಯೂಝಿಲೆಂಡ್ | 456 |
1996 | ಸಚಿನ್ ತೆಂಡೂಲ್ಕರ್ | ಭಾರತ | 523 |
1999 | ರಾಹುಲ್ ದ್ರಾವಿಡ್ | ಭಾರತ | 461 |
2003 | ಸಚಿನ್ ತೆಂಡೂಲ್ಕರ್ | ಭಾರತ | 673 |
2007 | ಮ್ಯಾಥ್ಯೂ ಹೇಡನ್ | ಆಸ್ಟ್ರೇಲಿಯಾ | 659 |
2011 | ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 500 |
2015 | ಮಾರ್ಟಿನ್ ಗಪ್ಟಿಲ್ | ನ್ಯೂಝಿಲೆಂಡ್ | 547 |
2019 | ರೋಹಿತ್ ಶರ್ಮಾ | ಭಾರತ | 648 |
ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1975 ರಲ್ಲಿ ನೀಡಲಾಯಿತು. ಪ್ರಸ್ತುತ ಇದನ್ನು “ಐಸಿಸಿ ಗೋಲ್ಡನ್ ಬಾಲ್” ಎಂದು ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು ಪಡೆದ ಬೌಲರ್ಗಳ ಪಟ್ಟಿ ಈ ಕೆಳಗಿನಂತಿದೆ…
ವಿಶ್ವಕಪ್ | ಬೌಲರ್ | ದೇಶ | ವಿಕೆಟ್ |
---|---|---|---|
1975 | ಗ್ಯಾರಿ ಗಿಲ್ಮೋರ್ / ಬರ್ನಾರ್ಡ್ ಜೂಲಿಯನ್ | ಆಸ್ಟ್ರೇಲಿಯಾ/ ವೆಸ್ಟ್ ಇಂಡೀಸ್ | 11/11 |
1979 | ಮೈಕ್ ಹೆಡ್ರಿಕ್ | ಇಂಗ್ಲೆಂಡ್ | 10 |
1983 | ರೋಜರ್ ಬಿನ್ನಿ | ಭಾರತ | 18 |
1987 | ಕ್ರೇಗ್ ಮ್ಯಾಕ್‌ಡರ್ಮಾಟ್ | ಆಸ್ಟ್ರೇಲಿಯಾ | 18 |
1992 | ವಾಸಿಂ ಅಕ್ರಮ್ | ಪಾಕಿಸ್ತಾನ | 18 |
1996 | ಅನಿಲ್ ಕುಂಬ್ಳೆ | ಭಾರತ | 15 |
1999 | ಜೆಫ್ ಅಲಾಟ್ / ಶೇನ್ ವಾರ್ನ್ | ನ್ಯೂಝಿಲೆಂಡ್ / ಆಸ್ಟ್ರೇಲಿಯಾ | 20 / 20 |
2003 | ಚಾಮಿಂಡ ವಾಸ್ | ಶ್ರೀಲಂಕಾ | 23 |
2007 | ಗ್ಲೆನ್ ಮೆಕ್‌ಗ್ರಾತ್ | ಆಸ್ಟ್ರೇಲಿಯಾ | 26 |
2011 | ಝಹೀರ್ ಖಾನ್/ ಶಾಹಿದ್ ಅಫ್ರಿದಿ | ಭಾರತ/ ಪಾಕಿಸ್ತಾನ | 21/21 |
2015 | ಮಿಚೆಲ್ ಸ್ಟಾರ್ಕ್/ಟ್ರೆಂಟ್ ಬೌಲ್ಟ್ | ಆಸ್ಟ್ರೇಲಿಯಾ/ನ್ಯೂಝಿಲೆಂಡ್ | 22/22 |
2019 | ಮಿಚೆಲ್ ಸ್ಟಾರ್ಕ್ | ಆಸ್ಟ್ರೇಲಿಯಾ | 27 |
ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು. ಪ್ರಸ್ತುತ “ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್” ಎಂದು ಹೆಸರಿಸಲಾಗಿದೆ. ಈ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ..
ವರ್ಷ | ಆಟಗಾರ | ದೇಶ | ಪ್ರದರ್ಶನ |
---|---|---|---|
1992 | ಮಾರ್ಟಿನ್ ಕ್ರೋವ್ | ನ್ಯೂಝಿಲೆಂಡ್ | 456 ರನ್ |
1996 | ಸನತ್ ಜಯಸೂರ್ಯ | ಶ್ರೀಲಂಕಾ | 221 ರನ್ ಮತ್ತು 6 ವಿಕೆಟ್ |
1999 | ಲ್ಯಾನ್ಸ್ ಕ್ಲುಜ್ನರ್ | ದಕ್ಷಿಣ ಆಫ್ರಿಕಾ | 281 ರನ್ ಮತ್ತು 17 ವಿಕೆಟ್ |
2003 | ಸಚಿನ್ ತೆಂಡೂಲ್ಕರ್ | ಭಾರತ | 673 ರನ್ ಮತ್ತು 2 ವಿಕೆಟ್ |
2007 | ಗ್ಲೆನ್ ಮೆಕ್‌ಗ್ರಾತ್ | ಆಸ್ಟ್ರೇಲಿಯಾ | 26 ವಿಕೆಟ್‌ಗಳು |
2011 | ಯುವರಾಜ್ ಸಿಂಗ್ | ಭಾರತ | 362 ರನ್ ಮತ್ತು 15 ವಿಕೆಟ್ |
2015 | ಮಿಚೆಲ್ ಸ್ಟಾರ್ಕ್ | ಆಸ್ಟ್ರೇಲಿಯಾ | 22 ವಿಕೆಟ್ |
2019 | ಕೇನ್ ವಿಲಿಯಮ್ಸನ್ | ನ್ಯೂಝಿಲೆಂಡ್ | 578 ರನ್ ಮತ್ತು 2 ವಿಕೆಟ್ |
ವಿಶ್ವಕಪ್ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1975 ರಲ್ಲಿ ನೀಡಲಾಯಿತು. ಈ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ..
ವರ್ಷ | ಆಟಗಾರ | ಪ್ರದರ್ಶನ |
---|---|---|
1975 | ಕ್ಲೈವ್ ಲಾಯ್ಡ್ | 102 ರನ್‌ಗಳು |
1979 | ವಿವಿಯನ್ ರಿಟಾರ್ಡ್ಸ್ | 138* ರನ್‌ಗಳು |
1983 | ಮೊಹಿಂದರ್ ಅಮರನಾಥ್ | 3 ವಿಕೆಟ್ ಮತ್ತು 26 ರನ್ |
1987 | ಡೇವಿಡ್ ಬೂನ್ | 75 ರನ್‌ಗಳು |
1992 | ವಾಸಿಂ ಅಕ್ರಮ್ | 33 ರನ್ ಮತ್ತು 3 ವಿಕೆಟ್ |
1996 | ಅರವಿಂದ ಡಿಸಿಲ್ವಾ | 107* ರನ್ ಮತ್ತು 3 ವಿಕೆಟ್ |
1999 | ಶೇನ್ ವಾರ್ನ್ | 4 ವಿಕೆಟ್ |
2003 | ರಿಕಿ ಪಾಂಟಿಂಗ್ | 140* ರನ್ |
2007 | ಆ್ಯಡಂ ಗಿಲ್‌ಕ್ರಿಸ್ಟ್ | 149 ರನ್ |
2011 | ಮಹೇಂದ್ರ ಸಿಂಗ್ ಧೋನಿ | 91* ರನ್ |
2015 | ಜೇಮ್ಸ್ ಫಾಕ್ನರ್ | 3 ವಿಕೆಟ್ |
2019 | ಬೆನ್ ಸ್ಟೋಕ್ಸ್ | 84* ರನ್ |