ಕೀಪಿಂಗ್ ಕಮಾಲ್: ವಿಶ್ವಕಪ್ನಲ್ಲಿ ಕೆಎಲ್ ರಾಹುಲ್ ವಿಶೇಷ ದಾಖಲೆ
KL Rahul Records: ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಕೆಎಲ್ ರಾಹುಲ್ 9 ಇನಿಂಗ್ಸ್ಗಳಿಂದ 386 ರನ್ ಕಲೆಹಾಕಿದ್ದಾರೆ. ಈ ಮೂಲಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಜೊತೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಏಕದಿನ ವಿಶ್ವಕಪ್ನ ಫೈನಲ್ ಪಂದ್ಯಕ್ಕಾಗಿ ವೇದಿಕೆ ಸಿದ್ಧವಾಗಿದೆ. ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಫೈಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯುವ ಅತ್ಯುತ್ತಮ ಅವಕಾಶ ಕೆಎಲ್ ರಾಹುಲ್ (KL Rahul) ಮುಂದಿದೆ. ಆದರೆ ಈ ಬಾರಿ ಬ್ಯಾಟಿಂಗ್ನಿಂದ ಅಲ್ಲ, ಬದಲಾಗಿ ವಿಕೆಟ್ ಕೀಪಿಂಗ್ ಮೂಲಕ ಎಂಬುದು ವಿಶೇಷ.
ಅಂದರೆ ಈ ಬಾರಿಯ ವಿಶ್ವಕಪ್ನ 10 ಪಂದ್ಯಗಳಿಂದ ಕೆಎಲ್ ರಾಹುಲ್ 15 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಹಾಗೆಯೇ ಒಂದು ಸ್ಟಂಪಿಂಗ್ ಮಾಡಿದ್ದಾರೆ. ಈ ಮೂಲಕ 2015 ರ ಏಕದಿನ ವಿಶ್ವಕಪ್ನಲ್ಲಿ 15 ಕ್ಯಾಚ್ಗಳನ್ನು ಹಿಡಿದು ದಾಖಲೆ ಬರೆದಿದ್ದ ಧೋನಿಯ ರೆಕಾರ್ಡ್ ಅನ್ನು ಕೆಎಲ್ ರಾಹುಲ್ ಮುರಿದಿದ್ದಾರೆ.
ಅಷ್ಟೇ ಅಲ್ಲದೆ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಹಿಂದೆ ಒಟ್ಟು 16 ಬಲಿ ಪಡೆದಿದ್ದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಸರಿಗಟ್ಟಿದ್ದಾರೆ. 2003 ರ ವಿಶ್ವಕಪ್ನಲ್ಲಿ ದ್ರಾವಿಡ್ 15 ಕ್ಯಾಚ್+1 ಸ್ಟಂಪಿಂಗ್ ಮೂಲಕ ಮಿಂಚಿದ್ದರು. ಈ ಮೂಲಕ ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ಯಶಸ್ಸು ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದರು.
ಇದೀಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ 1 ಕ್ಯಾಚ್ ಅಥವಾ 1 ಸ್ಟಂಪಿಂಗ್ ಮಾಡಿದರೆ, ಏಕದಿನ ವಿಶ್ವಕಪ್ ಆವೃತ್ತಿಯೊಂದರ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ದಾಖಲೆ ಕೆಎಲ್ ರಾಹುಲ್ ಪಾಲಾಗಲಿದೆ.
ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಕೆಎಲ್ ರಾಹುಲ್ 9 ಇನಿಂಗ್ಸ್ಗಳಿಂದ 386 ರನ್ ಕಲೆಹಾಕಿದ್ದಾರೆ. ಈ ಮೂಲಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಜೊತೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಈ ಬಾರಿಯ ವಿಶ್ವಕಪ್ನ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ಗಳು:
- 20 – ಕ್ವಿಂಟನ್ ಡಿ ಕಾಕ್ (19 ಕ್ಯಾಚ್‌ಗಳು, 1 ಸ್ಟಂಪಿಂಗ್)
- 16 – ಕೆಎಲ್ ರಾಹುಲ್ (15 ಕ್ಯಾಚ್, 1 ಸ್ಟಂಪಿಂಗ್)
- 15 – ಸ್ಕಾಟ್ ಎಡ್ವರ್ಡ್ಸ್ (13 ಕ್ಯಾಚ್, 2 ಸ್ಟಂಪಿಂಗ್)
- 11 – ಜೋಸ್ ಬಟ್ಲರ್ (9 ಕ್ಯಾಚ್, 1 ಸ್ಟಂಪಿಂಗ್)
- 11 – ಜೋಶ್ ಇಂಗ್ಲಿಸ್ (9 ಕ್ಯಾಚ್, 2 ಸ್ಟಂಪಿಂಗ್).
ಇದನ್ನೂ ಓದಿ: Virat Kohli: ಸಚಿನ್ ಅವರ 3 ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ವಿಶ್ವಕಪ್ ಆವೃತ್ತಿಯೊಂದರಲ್ಲಿ ಭಾರತೀಯ ವಿಕೆಟ್ ಕೀಪರ್ಗಳ ಸಾಧನೆ:
- 16 – ರಾಹುಲ್ ದ್ರಾವಿಡ್ ( 2003 ರಲ್ಲಿ 15 ಕ್ಯಾಚ್‌ಗಳು, 1 ಸ್ಟಂಪಿಂಗ್)
- 16 – ಕೆಎಲ್ ರಾಹುಲ್ ( 2023 ರಲ್ಲಿ 15 ಕ್ಯಾಚ್‌ಗಳು, 1 ಸ್ಟಂಪಿಂಗ್)
- 15 – ಎಂಎಸ್ ಧೋನಿ ( 2015 ರಲ್ಲಿ 15 ಕ್ಯಾಚ್‌ಗಳು)