WTC Final, IND vs AUS: ರೋಚಕ ಘಟ್ಟದತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತೀಯ ಬೌಲರ್​ಗಳು ಮಾಡಬೇಕು ಮ್ಯಾಜಿಕ್

|

Updated on: Jun 10, 2023 | 7:35 AM

India vs Australia Final: ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 469 ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಆಡಿದ ಭಾರತ 296 ರನ್ ಗಳಿಸಿತು. 173 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.

WTC Final, IND vs AUS: ರೋಚಕ ಘಟ್ಟದತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತೀಯ ಬೌಲರ್​ಗಳು ಮಾಡಬೇಕು ಮ್ಯಾಜಿಕ್
IND vs AUS WTC Final
Follow us on

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final) ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 469 ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಆಡಿದ ಭಾರತ ಅಜಿಂಕ್ಯ ರಹಾನೆ (Ajinkya Rahane) ಹಾಗೂ ಶಾರ್ದೂಲ್ ಠಾಕೂರ್ ಆಟದ ನೆರವಿನಿಂದ 296 ರನ್ ಗಳಿಸಿತು. 173 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ. 296 ರನ್​ಗಳ ಮುನ್ನಡೆಯಲ್ಲಿದೆ. ನಾಲ್ಕನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತ ಆದಷ್ಟು ಬೇಗ ಆಸೀಸ್ ವಿಕೆಟ್ ಕೀಳಬೇಕಿದೆ.

ಮೊದಲ ದಿನದಾಟ ಹೇಗಿತ್ತು?:

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಾಂಗರೂ ಪಡೆ ಪರ ಮಾರ್ನಸ್ ಲಾಬುಶೇನ್ (26) ಹಾಗೂ ಡೇವಿಡ್ ವಾರ್ನರ್ (43) 69 ರನ್​ಗಳ ಜೊತೆಯಾಟ ಆಡಿದರಷ್ಟೆ. ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ. ಹೆಡ್ ಅವರು ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿ ದೊಡ್ಡ ಮೊತ್ತದ ಮುನ್ಸೂಚನೆ ನೀಡಿತ್ತು.

ದ್ವಿತೀಯ ದಿನದಾಟ ಹೇಗಿತ್ತು?:

ಬೃಹತ್ ಮೊತ್ತ ಗಳಿಸುವ ಗುರಿಯೊಂದಿಗೆ 2ನೇ ದಿನದಾಟ ಆರಂಭಿಸಿದ್ದ ಆಸ್ಟ್ರೇಲಿಯ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್​ಗೆ ಅಂತ್ಯವಾಯಿತು. ಈ ಇಬ್ಬರು ಔಟಾದ ನಂತರ ಅಲೆಕ್ಸ್ ಕ್ಯಾರಿ 48 ರನ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ 9 ರನ್ ಗಳಿಸಿದರು. ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್​ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರೆ ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2ವಿಕೆಟ್‌ಗಳನ್ನು ಪಡೆದರು.

ಇದನ್ನೂ ಓದಿ
Namibia vs Karnataka: ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಗೆದ್ದ ಕರ್ನಾಟಕ..!
WTC Final 2023: ಆತುರಗೇಡಿ ಬುದ್ಧಿಯಿಂದ ಮುಜುಗರಕ್ಕೊಳಗಾದ ಆಸೀಸ್ ಆಟಗಾರರು; ವಿಡಿಯೋ ನೋಡಿ
WTC Final 2023: ಬ್ರಾಡ್ಮನ್- ಬಾರ್ಡರ್ ದಾಖಲೆ ಸರಿಗಟ್ಟಿದ ಲಾರ್ಡ್​ ಶಾರ್ದೂಲ್ ಠಾಕೂರ್..!
WTC Final 2023: 2 ಜೀವದಾನ, ಶತಕದ ಜೊತೆಯಾಟ! ಸ್ಮರಣೀಯ ಇನ್ನಿಂಗ್ಸ್ ಆಡಿದ ರಹಾನೆ

WTC Final 2023: 5000 ರನ್, 100 ಕ್ಯಾಚ್! ಫೈನಲ್​ನಲ್ಲಿ ರಹಾನೆ ಬರೆದ ದಾಖಲೆಗಳಿವು

ಭಾರತ ಪರ ಓಪನರ್​ಗಳಾದ ನಾಯಕ ರೋಹಿತ್​ ಶರ್ಮಾ (15) ಹಾಗೂ ಶುಭ್​ಮನ್​ ಗಿಲ್​ (13) ವೈಫಲ್ಯ ಅನುಭವಿಸಿದರು. ಚೇತೇಶ್ವರ ಪೂಜಾರ (14) ಹಾಗೂ ವಿರಾಟ್​ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್​ಗೆ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಇನ್ನಿಂಗ್​ ಕಟ್ಟಿ ತಂಡಕ್ಕೆ ನೆರವಾದರು. 71 ರನ್​ಗಳ ಜೊತೆಯಾಟ ಆಡಿದರು. ಜಡೇಜಾ 51 ಬಾಲ್​ಗಳಲ್ಲಿ 7 ಬೌಂಡರಿ ಮತ್ತು ಸಿಕ್ಸರ್​ ಸಮೇತ 48 ರನ್​ಗೆ ನಿರ್ಗಮಿಸಿದರು. ಎರಡನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದ್ದು 318 ರನ್​ಗಳ ಹಿನ್ನಡೆಯಲ್ಲಿತ್ತು.

ಮೂರನೇ ದಿನದಾಟ:

ಮೂರನೇ ದಿನ ಪಂದ್ಯ ಆರಂಭವಾಗುತ್ತಿದ್ದಂತೆ ಭರತ್​ ವಿಕೆಟ್​ ಕಳೆದುಕೊಂಡಿತು. ನಂತರ ಬಂದ ಬೌಲಿಂಗ್ ಆಲ್​ರೌಂಡರ್ ಶಾರ್ದೂಲ್​ ಠಾಕೂರ್​ ರಹಾನೆಗೆ ಸಾಥ್​ ನೀಡಿ ತಾಳ್ಮೆಯ ಬ್ಯಾಟಿಂಗ್​ ಮಾಡಿದರು. ರಹಾನೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದು ಸೊಗಸಾದ ಅರ್ಧಶತಕ ಗಳಿಸಿದರು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ಬ್ಯಾಟರ್​ ಎಂಬ ದಾಖಲೆಯನ್ನೂ ಅವರು ರಚಿಸಿದರು.

ಊಟಕ್ಕೆ ತೆರಳುವ ಮುನ್ನ 122 ಬಾಲ್​ಗೆ 89 ರನ್ ಗಳಿಸಿದ್ದ ರಹಾನೆ, ನಂತರ 7 ಬಾಲ್​ ಎದುರಿಸಿ ವಿಕೆಟ್​ ಕೊಟ್ಟರು. ನಂತರ ಶಾರ್ದೂಲ್​ ಠಾಕೂರ್ ತಮ್ಮ​ ಇನ್ನಿಂಗ್ಸ್ ಅ​ನ್ನು ಬೌಲರ್​ಗಳ ಜೊತೆ ಸೇರಿ ಮುಂದುವರೆಸಿದರು. 109 ಬಾಲ್​ನಲ್ಲಿ 6 ಬೌಂಡರಿಯ ಸಹಾಯದಿಂದ 51 ರನ್ ಗಳಿಸಿ ಶಾರ್ದೂಲ್ ವಿಕೆಟ್​ ಕೊಟ್ಟರು. ​ಅಂತಿಮವಾಗಿ ಭಾರತ ಆಸಿಸ್​ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್​ ಗಳಿಸಿತು.

ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್​ ಬ್ಯಾಟರ್​ಗಳನ್ನು ಭಾರತೀಯ ಬೌಲರ್​ಗಳು ಕಟ್ಟಿ ಹಾಕುವಲ್ಲಿ ಸಫಲರಾದರು. ಡೇವಿಡ್​ ವಾರ್ನರ್ (1), ಉಸ್ಮಾನ್​ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಮೂರನೇ ವಿಕೆಟ್​ಗೆ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವನ್ ಸ್ಮಿತ್ 62 ರನ್​ಗಳ ಜೊತೆಯಾಟ ಆಡಿದರು. 34 ರನ್​ಗಳಿಸಿ ಆಡುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ಜಡೇಜಾ ಔಟ್ ಮಾಡಿದರು. ಟ್ರಾವಿಸ್ ಹೆಡ್ 18 ರನ್​ಗಳಿಗೆ ಪೆವಿಲಿಯನ್ ​ಸೇರಿದರು. ಸದ್ಯ 41 ರನ್​ ಗಳಿಸಿರುವ ಮಾರ್ನಸ್ ಹಾಗೂ ಕ್ಯಾಮರೂನ್ ಗ್ರೀನ್ (7) ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಜಡೇಜಾ 2 ವಿಕೆಟ್​, ಮೊಹಮ್ಮದ್ ಸಿರಾಜ್​ ಹಾಗೂ ಉಮೇಶ್ ಯಾದವ್​ ತಲಾ 1 ವಿಕೆಟ್ ಕಿತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ