WTC Final 2023: 2 ಜೀವದಾನ, ಶತಕದ ಜೊತೆಯಾಟ! ಸ್ಮರಣೀಯ ಇನ್ನಿಂಗ್ಸ್ ಆಡಿದ ರಹಾನೆ

WTC Final 2023: ರಹಾನೆ ಶತಕದಿಂದ ವಂಚಿತರಾಗಿರಬಹುದು. ಆದರೆ ರಹಾನೆ ಅವರ 89 ರನ್‌ಗಳ ಇನ್ನಿಂಗ್ಸ್‌ ಭಾರತವನ್ನು ಫಾಲೋ ಆನ್​ನಿಂದ ಪಾರು ಮಾಡಿತು.

WTC Final 2023: 2 ಜೀವದಾನ, ಶತಕದ ಜೊತೆಯಾಟ! ಸ್ಮರಣೀಯ ಇನ್ನಿಂಗ್ಸ್ ಆಡಿದ ರಹಾನೆ
ಅಜಿಂಕ್ಯ ರಹಾನೆ
Follow us
ಪೃಥ್ವಿಶಂಕರ
|

Updated on:Jun 09, 2023 | 7:03 PM

ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್‌ನ ಮೂರನೇ ದಿನದಂದು ಅಜಿಂಕ್ಯ ರಹಾನೆ (Ajinkya Rahane) ಅದ್ಭುತ ಇನ್ನಿಂಗ್ಸ್ ಆಡಿದರು ಆದರೆ ಸ್ಮರಣೀಯ ಶತಕದಿಂದ ವಂಚಿತರಾದರು. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು (India vs Australia) ಮುಜುಗರದಿಂದ ಪಾರು ಮಾಡಿದ ರಹಾನೆ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡುವ ಮೂಲಕ ಭಾರತವನ್ನು ಪಂದ್ಯದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೆ ಆಲ್​ರೌಂಡರ್​ಗಳ ಜೊತೆ ಅರ್ಧಶತಕ ಹಾಗೂ ಶತಕದ ಜೊತೆಯಾಟ ಆಡುವುದರೊಂದಿಗೆ ಟೀಂ ಇಂಡಿಯಾವನ್ನು ಫಾಲೋ- ಆನ್ (follow on)​ ಭೀತಿಯಿಂದಲೂ ಪಾರು ಮಾಡಿದರು.

ಡಬ್ಲ್ಯುಟಿಸಿ ಫೈನಲ್‌ನ ಮೂರನೇ ದಿನದಂದು 30 ರನ್‌ಗಳಿಂದ ತಮ್ಮ ಇನ್ನಿಂಗ್ಸ್ ಮುಂದುವರೆಸಿದ ರಹಾನೆ ಮೊದಲ ಸೆಷನ್‌ನಲ್ಲಿಯೇ ಪ್ರತಿದಾಳಿ ಬ್ಯಾಟಿಂಗ್‌ನೊಂದಿಗೆ ಆಸ್ಟ್ರೇಲಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಮೊದಲು ಅರ್ಧಶತಕ ಪೂರೈಸಿದ ರಹಾನೆ ನಂತರ ರನ್​ಗಳ ವೇಗ ಹೆಚ್ಚಿಸಿದರು. ಹೀಗಾಗಿ ಮೊದಲ ಸೆಷನ್ ಅಂತ್ಯದ ವೇಳೆಗೆ ಅಂದರೆ, ಊಟದ ಹೊತ್ತಿಗೆ ರಹಾನೆ ಸ್ಕೋರ್ 89 ರನ್ ಆಗಿತ್ತು.

WTC Final 2023: 5000 ರನ್, 100 ಕ್ಯಾಚ್! ಫೈನಲ್​ನಲ್ಲಿ ರಹಾನೆ ಬರೆದ ದಾಖಲೆಗಳಿವು

ಶತಕ ವಂಚಿತ ರಹಾನೆ

ಎರಡನೇ ಸೆಷನ್​ನಲ್ಲಿ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್‌ಗೆ ಬಂದಾಗ ರಹಾನೆ ಶತಕ ಸಿಡಿಸುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬೌಂಡರಿ ಕದಿಯುವ ಯತ್ನದಲ್ಲಿ ರಹಾನೆ ಗ್ರೀನ್​ಗೆ ಕ್ಯಾಚಿತ್ತು ಔಟಾದರು. ಇನ್ನೊಂದು ಆಸಕ್ತಿಕರ ವಿಚಾರವೆಂದರೆ, ವಾಸ್ತವವಾಗಿ ರಹಾನೆ ಈ ಪಂದ್ಯದಲ್ಲಿ ಅರ್ಧಶತಕವನ್ನೂ ಸಿಡಿಸುವ ಸಾಧ್ಯತೆಗಳಿರಲಿಲ್ಲ. ಆದರೆ ಆಸೀಸ್ ನಾಯಕ ಮಾಡಿದ ನೋ ಬಾಲ್ ರಹಾನೆಗೆ ಮೊದಲ ಜೀವದಾನ ನೀಡಿತು. ಭಾರತದ ಇನ್ನಿಂಗ್ಸ್​ನ ಮೊದಲ ದಿನದಂದೇ ರಹಾನೆ ಕ್ಯಾಚಿತ್ತು ಔಟಾಗಿದ್ದರು. ಆದರೆ ಬೌಲರ್​ ಮಾಡಿದ ನೋ ಬಾಲ್​ನಿಂದಾಗಿ ರಹಾನೆಗೆ ಜೀವದಾನ ಸಿಕ್ಕಿತ್ತು. ಅಲ್ಲದೆ ಮೂರನೇ ದಿನದ ಮೊದಲ ಸೆಷನ್​ನಲ್ಲಿ ರಹಾನೆ 72 ರನ್​ಗಳಿಸಿ ಆಡುತ್ತಿರುವಾಗ ಕ್ಯಾಚ್ ಕೈಚೆಲ್ಲಿದರು.

ಹೀಗಿರುವಾಗ ರಹಾನೆ ಶತಕ ಪೂರೈಸುತ್ತಾರೆ ಎನಿಸಿತು ಆದರೆ ಅದೃಷ್ಟ ಮೂರನೇ ಬಾರಿಗೆ ಬೆಂಬಲಿಸಲಿಲ್ಲ. ಎರಡನೇ ಸೆಷನ್​ನ ಮೂರನೇ ಓವರ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಅಂತಿಮವಾಗಿ ರಹಾನೆ ವಿಕೆಟ್ ಒಪ್ಪಿಸಿದರು. 2 ಜೀವದಾನ ಪಡೆದ ರಹಾನೆ ಅಂತಿಮವಾಗಿ ಶತಕ ವಂಚಿತರಾದರೂ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.

ಇತಿಹಾಸ ರಚಿಸಿದ ರಹಾನೆ

ಶತಕ ವಂಚಿರಾದರೂ ರಹಾನೆ 89 ರನ್ ಬಾರಿಸುವುದರೊಂದಿಗೆ ತಮ್ಮ ಹೆಸರಿನಲ್ಲಿ ವಿನೂತನ ದಾಖಲೆಯನ್ನು ಬರೆದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕಳೆದ ಫೈನಲ್‌ನಲ್ಲೂ ಭಾರತ ಫೈನಲ್ ಆಡಿತ್ತು. ಆದರೆ ಆ ಪಂದ್ಯದಲ್ಲಿ ಭಾರತದ ಪರ ಯಾರೂ ಅರ್ಧಶತಕ ಸಿಡಿಸಿರಲಿಲ್ಲ. ಆ ಫೈನಲ್‌ನಲ್ಲೂ ಭಾರತದ ಪರ 49 ರನ್‌ ಬಾರಿಸಿದ್ದ ರಹಾನೆ, ಈ ದಾಖಲೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು.

ಶತಕದ ಜೊತೆಯಾಟವನ್ನಾಡಿದ ರಹಾನೆ

ರಹಾನೆ ಶತಕದಿಂದ ವಂಚಿತರಾಗಿರಬಹುದು. ಆದರೆ ರಹಾನೆ ಅವರ 89 ರನ್‌ಗಳ ಇನ್ನಿಂಗ್ಸ್‌ ಭಾರತವನ್ನು ಫಾಲೋ ಆನ್​ನಿಂದ ಪಾರು ಮಾಡಿತು. ಅಜಿಂಕ್ಯ ರಹಾನೆ ಕ್ರೀಸ್‌ಗೆ ಬಂದಾಗ ಭಾರತದ ಸ್ಕೋರ್ ಕೇವಲ 50 ರನ್ ಆಗಿದ್ದು, 3 ವಿಕೆಟ್ ಪತನವಾಗಿತ್ತು. ಬಳಿಕ ಜಡೇಜಾ ಜೊತೆ ಅರ್ಧಶತಕದ ಜೊತೆಯಾಟವನ್ನಾಡಿದ ರಹಾನೆ, ಶಾರ್ದೂಲ್ ಜೊತೆಯಲ್ಲೂ ಮರೆಯಲಾಗದ ಜೊತೆಯಾಟವನ್ನಾಡಿದರು.

ಆರಂಭಿಕ ತೊಂದರೆಗಳಿಂದ ಚೇತರಿಸಿಕೊಂಡ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಶಾರ್ದೂಲ್, ರಹಾನೆ ಜೊತೆಗೆ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಎದುರಿಸಿದರು. ಮೊದಲ ಸೆಷನ್‌ನಲ್ಲಿ ಕೆಎಸ್ ಭರತ್ ಅವರ ವಿಕೆಟ್ ಪತನದ ನಂತರ ಇಬ್ಬರೂ ಕ್ರೀಸ್​ನಲ್ಲಿ ಒಟ್ಟಾಗಿ ಶತಕದ ಜೊತೆಯಾಟ ನಡೆಸಿದರು. ಅಂತಿಮವಾಗಿ ಇಬ್ಬರೂ 109 ರನ್ ಸೇರಿಸುವ ಮೂಲಕ ಭಾರತ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 9 June 23

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ