WTC Final 2023: ಆತುರಗೇಡಿ ಬುದ್ಧಿಯಿಂದ ಮುಜುಗರಕ್ಕೊಳಗಾದ ಆಸೀಸ್ ಆಟಗಾರರು; ವಿಡಿಯೋ ನೋಡಿ

WTC Final 2023: ಭಾರತದ ಇನ್ನಿಂಗ್ಸ್ ಮುಗಿಯಿತೆಂದು ಪೆವಿಲಿಯನ್​ಗೆ ಮರಳುತ್ತಿದ್ದ ಆಸ್ಟ್ರೇಲಿಯ ತಂಡ ಮತ್ತೆ ಮೈದಾನಕ್ಕೆ ಮರಳಬೇಕಾಯಿತು.

WTC Final 2023: ಆತುರಗೇಡಿ ಬುದ್ಧಿಯಿಂದ ಮುಜುಗರಕ್ಕೊಳಗಾದ ಆಸೀಸ್ ಆಟಗಾರರು; ವಿಡಿಯೋ ನೋಡಿ
ಆಸೀಸ್ ತಂಡ
Follow us
|

Updated on:Jun 09, 2023 | 10:08 PM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ನಲ್ಲಿ ಸದ್ಯ ಭಾರತದ ವಿರುದ್ಧ ಬೃಹತ್ ಮುನ್ನಡೆ ಸಾಧಿರಸಿರುವ ಆಸೀಸ್ ತಂಡ (India vs Australia) ಇದೀಗ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾವನ್ನು 296 ರನ್​ಗಳಿಗೆ ಕಟ್ಟಿಹಾಕುವಲ್ಲಿ ಕಾಂಗರೂಗಳು ಯಶಸ್ವಿಯಾಗಿದ್ದಾರೆ. ಇದರ ಹೊರತಾಗಿಯೂ, ಆಸೀಸ್ ಆಟಗಾರರು ಅನೇಕ ಬಾರಿ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಕೆಲವೊಮ್ಮೆ ಕ್ಯಾಚ್ ಕೈಚೆಲ್ಲಿದರೆ ಇನ್ನು ಕೆಲವೊಮ್ಮೆ ನೋ ಬಾಲ್​ನಿಂದಾಗಿ ವಿಕೆಟ್ ಪಡೆಯುವ ಅವಕಾಶವನ್ನೂ ಕಳೆದುಕೊಂಡರು. ಇಷ್ಟೂ ಸಾಲದೆಂಬಂತೆ ಮೈದಾನದ ಮಧ್ಯದಲ್ಲಿ ಸಾವಿರಾರು ಅಭಿಮಾನಿಗಳ ಎದುರು ಆಸ್ಟ್ರೇಲಿಯಾ ತಂಡ (Australian team) ಮುಖಭಂಗ ಅನುಭವಿಸಬೇಕಾಯಿತು. ಭಾರತದ ಇನ್ನಿಂಗ್ಸ್ ಮುಗಿಯಿತೆಂದು ಪೆವಿಲಿಯನ್​ಗೆ ಮರಳುತ್ತಿದ್ದ ಆಸ್ಟ್ರೇಲಿಯ ತಂಡ ಮತ್ತೆ ಮೈದಾನಕ್ಕೆ ಮರಳಬೇಕಾಯಿತು.

ಓವಲ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್‌ನ ಮೂರನೇ ದಿನದಂದು ಭಾರತದ ಉಳಿದ 5 ವಿಕೆಟ್‌ಗಳನ್ನು ಪಡೆಯಲು ಆಸ್ಟ್ರೇಲಿಯಾ ಸ್ವಲ್ಪ ಸಮಯ ಹೆಣಗಾಡಬೇಕಾಯಿತು. ಮೊದಲ ಸೆಷನ್‌ನಲ್ಲಿ ಕೇವಲ ಒಂದು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ ಆಸೀಸ್ ಬೌಲರ್​ಗಳು ಎರಡನೇ ಸೆಷನ್‌ನಲ್ಲಿ ಭಾರತವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

WTC Final 2023: ಬ್ರಾಡ್ಮನ್- ಬಾರ್ಡರ್ ದಾಖಲೆ ಸರಿಗಟ್ಟಿದ ಲಾರ್ಡ್​ ಶಾರ್ದೂಲ್ ಠಾಕೂರ್..!

ಆಸ್ಟ್ರೇಲಿಯಾಕ್ಕೆ ಯಾಕಿಷ್ಟು ಅವಸರ?

ಆದರೆ, ಕೊನೆಯ ವಿಕೆಟ್‌ಗೂ ಮುನ್ನ ಮೈದಾನದಲ್ಲಿ ವಿಚಿತ್ರ ಸನ್ನಿವೇಶವೊಂದು ನಿರ್ಮಾಣವಾಯಿತು. ವಾಸ್ತವವಾಗಿ, ಶಾರ್ದೂಲ್ ವಿಕೆಟ್ ಬಳಿಕ ಬ್ಯಾಟಿಂಗ್​ಗೆ ಬಂದ ಸಿರಾಜ್, ಕ್ಯಾಮರೂನ್ ಗ್ರೀನ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಗ್ರೀನ್ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಕೂಡ ಸಿರಾಜ್‌ಗೆ ಎಲ್‌ಬಿಡಬ್ಲ್ಯೂ ಔಟ್ ನೀಡಿದರು. ಕೂಡಲೇ ಸಿರಾಜ್ ಡಿಆರ್​ಎಸ್ ತೆಗೆದುಕೊಂಡರು. ಆದರೆ ಆಸ್ಟ್ರೇಲಿಯ ತಂಡದ ಆಟಗಾರರು ಡಿಆರ್​ಎಸ್ ಫಲಿತಾಂಶ ಬರುವುದಕ್ಕೂ ಮುನ್ನವೇ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಇಳಿಯವುದಕ್ಕೆ ಚಿಂತಿಸಿ, ಪೆವಿಲಿಯನತ್ತ ನಡೆಯಲ್ಲಾರಂಭಿಸಿದರು.

ಆದರೆ ಥರ್ಡ್ ಅಂಪೈರ್‌ನ ವಿಮರ್ಶೆಯಲ್ಲಿ, ಚೆಂಡು ಸಿರಾಜ್ ಅವರ ಪ್ಯಾಡ್​ಗೆ ತಗುಲುವುದಕ್ಕು ಮುನ್ನ ಬ್ಯಾಟ್‌ನ ಅಂಚಿಗೆ ಬಡಿದಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಸಿರಾಜ್ ಔಟಾಗುವುದರಿಂದ ಬಚಾವ್ ಆದರು. ಆದರೆ ಅಷ್ಟರಲ್ಲಾಗಲೇ ತಂಡದ ಕೆಲ ಆಟಗಾರರು ಬೌಂಡರಿ ಬಳಿ ನಿಂತರೆ ಕೆಲವು ಆಟಗಾರರು ಪೆವಿಲಿಯನ್ ಮೆಟ್ಟಿಲು ಹತ್ತುತ್ತಿದ್ದರು. ಆ ಬಳಿಕ ದೊಡ್ಡ ಪರದೆಯಲ್ಲಿ ನಾಟೌಟ್ ನಿರ್ಧಾರ ಪ್ರದರ್ಶನಗೊಂಡ ತಕ್ಷಣ ಆಟಗಾರರು ಮತ್ತೆ ಮೈದಾನಕ್ಕೆ ಹಿಂತಿರುಗಲಾರಂಭಿಸಿದರು. ಆಸೀಸ್ ಆಟಗಾರರ ಈ ಆತುರಗೇಡಿ ಬುದ್ದಿಯನ್ನು ನೋಡಿದ ಕ್ರೀಡಾಂಗಣದಲ್ಲಿ ಕುಳಿತಿದ್ದ ಭಾರತೀಯ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತು.

ರಹಾನೆ-ಶಾರ್ದೂಲ್ ಶತಕದ ಜೊತೆಯಾಟ

ಆದಾಗ್ಯೂ, ಶೀಘ್ರದಲ್ಲೇ ಭಾರತದ ಕೊನೆಯ ವಿಕೆಟ್ ಮೊಹಮ್ಮದ್ ಶಮಿ ರೂಪದಲ್ಲಿ ಪತನಗೊಂಡಿತು. ಅಂತಿಮವಾಗಿ ಟೀಂ ಇಂಡಿಯಾ 296 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 469 ರನ್ ಬಾರಿಸಿರುವುದರಿಂದ, ಎರಡನೇ ಇನ್ನಿಂಗ್ಸ್​ನಲ್ಲಿ 173 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತ ಪರ ಅಜಿಂಕ್ಯ ರಹಾನೆ 89 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರೆ, ಶಾರ್ದೂಲ್ ಠಾಕೂರ್ ಕೂಡ ಓವಲ್‌ನಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿ ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Fri, 9 June 23

ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ