PSL Exhibition Match: ಪಾಕಿಸ್ತಾನ ಸೂಪರ್ ಲೀಗ್ನ (PSL) ಪ್ರದರ್ಶನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಇಫ್ತಿಕಾರ್ ಅಹ್ಮದ್ (Iftikhar Ahmed) ದಾಖಲೆ ಬರೆದಿದ್ದಾರೆ. ಪೇಶಾವರ್ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಣ ಈ ಪಂದ್ಯದಲ್ಲಿ ಇಫ್ತಿಕಾರ್ 6 ಎಸೆತಗಳಲ್ಲಿ 36 ರನ್ ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಇಫ್ತಿಕಾರ್ ಅಹ್ಮದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಸ್ಪೋಟಕ ಬ್ಯಾಟಿಂಗ್ ಮೂಲಕ ಪೇಶಾವರ್ ಝಲ್ಮಿ ಬೌಲರ್ಗಳ ಬೆಂಡೆತ್ತಿದ ಇಫ್ತಿಕಾರ್ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬ್ಯಾಟಿಂಗ್ ವರಸೆ ಬದಲಿಸಿದ ಹಿರಿಯ ಆಟಗಾರ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದರು.
ಪರಿಣಾಮ 19 ಓವರ್ಗಳಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮೊತ್ತ 148 ಕ್ಕೆ ಬಂದು ನಿಂತಿತು. ಇನ್ನು ವಹಾಬ್ ರಿಯಾಝ್ ಎಸೆದ 20ನೇ ಓವರ್‌ನಲ್ಲಿ ಇಫ್ತಿಕಾರ್ ಅಹ್ಮದ್ ಬ್ಯಾಕ್ ಟು ಬ್ಯಾಕ್ 6 ಸಿಕ್ಸ್ಗಳನ್ನು ಸಿಡಿಸಿದರು. ಈ ಮೂಲಕ 36 ರನ್ ಕಲೆಹಾಕಿ ತಂಡದ ಮೊತ್ತವನ್ನು 184 ಕ್ಕೆ ತಂದು ನಿಲ್ಲಿಸಿದರು.
ಈ ಪಂದ್ಯದಲ್ಲಿ 50 ಎಸೆತಗಳಲ್ಲಿ ಅಜೇಯ 94 ರನ್ ಬಾರಿಸಿದ ಇಫ್ತಿಕಾರ್ ಅಹ್ಮದ್ ಅವರ ಸಿಡಿಲಬ್ಬರದ ಸಿಕ್ಸ್ಗಳ ವಿಡಿಯೋ ಇದೀಗ ವೈರಲ್ ಆಗಿದೆ.
ಇಫ್ತಿಕಾರ್ ಅಹ್ಮದ್ ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ನಲ್ಲಿ ಫಾರ್ಚೂನ್ ಬಾರಿಶಾಲ್ ಪರ ಆಡಿದ್ದರು. ಬಿಪಿಎಲ್ನಲ್ಲಿ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಇಫ್ತಿಕಾರ್ 1 ಶತಕ ಹಾಗೂ 3 ಅರ್ಧಶತಕದೊಂದಿಗೆ ಒಟ್ಟು 347 ರನ್ಗಳಿಸಿದ್ದರು. ಆದರೆ ಪಿಎಸ್ಎಲ್ ಪ್ರದರ್ಶನ ಪಂದ್ಯಕ್ಕಾಗಿ ಬಿಪಿಎಲ್ ತೊರೆದು ಪಾಕಿಸ್ತಾನಕ್ಕೆ ಮರಳಿದ್ದರು. ಇದೀಗ ಫಾರ್ಮ್ ಮುಂದುವರೆಸಿರುವ ಇಫ್ತಿಕಾರ್ ಅಹ್ಮದ್ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿ ದಾಖಲೆ ಬರೆದಿದ್ದಾರೆ.
ವಿಶೇಷ ದಾಖಲೆ:
ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸುವ ಮೂಲಕ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ದಾಖಲೆಯು ಇಫ್ತಿಕಾರ್ ಅಹ್ಮದ್ ಪಾಲಾಗಿದೆ. ಅಲ್ಲದೆ ಟಿ20 ಲೀಗ್ ಪಂದ್ಯಗಳಲ್ಲಿ 6 ಎಸೆತಗಳಲ್ಲಿ 6 ಸಿಕ್ಸ್ ಸಿಡಿಸಿದ ವಿಶೇಷ ಸಾಧಕರ ಪಟ್ಟಿಗೂ ಸೇರ್ಪಡೆಯಾಗಿದೆ.
ವಿಶ್ವ ದಾಖಲೆ:
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ದಾಖಲೆ ನಾಲ್ವರು ಬ್ಯಾಟರ್ಗಳ ಹೆಸರಿನಲ್ಲಿದೆ. ಅವರೆಂದರೆ ಸೌತ್ ಆಫ್ರಿಕಾ ಹರ್ಷಲ್ ಗಿಬ್ಸ್, ಭಾರತದ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ನ ಕೀರಾನ್ ಪೊಲಾರ್ಡ್ ಮತ್ತು ಅಮೆರಿಕದ ಜಸ್ಕರನ್ ಮಲ್ಹೋತ್ರಾ. ಈ ನಾಲ್ವರು ಆಟಗಾರರು ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Published On - 5:04 pm, Sun, 5 February 23