ILT20: 6 ತಂಡಗಳು, 34 ಪಂದ್ಯಗಳು; ಅಂತರರಾಷ್ಟ್ರೀಯ ಲೀಗ್ ಟಿ20 ವೇಳಾಪಟ್ಟಿ ಪ್ರಕಟ
ILT20 2025-26 Schedule: ಅಂತರರಾಷ್ಟ್ರೀಯ ಲೀಗ್ ಟಿ20ಯ ನಾಲ್ಕನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಡಿಸೆಂಬರ್ 2, 2025 ರಿಂದ ಜನವರಿ 4, 2026 ರವರೆಗೆ 34 ಪಂದ್ಯಗಳು ನಡೆಯಲಿವೆ. ದುಬೈ ಕ್ಯಾಪಿಟಲ್ಸ್ ಮತ್ತು ಡೆಸರ್ಟ್ ವೈಪರ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆರು ತಂಡಗಳು ಭಾಗವಹಿಸಲಿದ್ದು, ಎಲ್ಲಾ ಪಂದ್ಯಗಳು ದುಬೈ, ಅಬುಧಾಬಿ ಮತ್ತು ಶಾರ್ಜಾದ ಕ್ರೀಡಾಂಗಣಗಳಲ್ಲಿ ನಡೆಯಲಿವೆ. SA20 ಲೀಗ್ ಜೊತೆಗೆ ಏಕಕಾಲದಲ್ಲಿ ನಡೆಯುವುದರಿಂದ ಆಟಗಾರರ ಲಭ್ಯತೆ ಪ್ರಮುಖ ಪ್ರಶ್ನೆಯಾಗಿದೆ.

ಅಂತರರಾಷ್ಟ್ರೀಯ ಲೀಗ್ ಟಿ20 (ILT20)ಯ ನಾಲ್ಕನೇ ಆವೃತ್ತಿಯ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಈ ಬಾರಿ ಲೀಗ್ ಡಿಸೆಂಬರ್ 2 , 2025 ರಂದು ಪ್ರಾರಂಭವಾಗಲಿದ್ದು, ಜನವರಿ 4, 2026 ರವರೆಗೆ ನಡೆಯಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ದುಬೈ ಕ್ಯಾಪಿಟಲ್ಸ್ ಮತ್ತು ಕಳೆದ ಬಾರಿಯ ರನ್ನರ್ ಅಪ್ ಡೆಸರ್ಟ್ ವೈಪರ್ಸ್ ನಡುವೆ ನಡೆಯಲಿದೆ. ಈ ಪಂದ್ಯವು ಸ್ಥಳೀಯ ಕಾಲಮಾನ ಸಂಜೆ 6:30 ಕ್ಕೆ ( ಭಾರತೀಯ ಕಾಲಮಾನ ರಾತ್ರಿ 8:00 ) ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಆವೃತ್ತಿಯಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿದ್ದು, ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಐಎಲ್‌ಟಿ20 ವೇಳಾಪಟ್ಟಿ ಪ್ರಕಟ
ಈ ಲೀಗ್‌ನಲ್ಲಿ ಅಬುಧಾಬಿ ನೈಟ್ ರೈಡರ್ಸ್ , ದುಬೈ ಕ್ಯಾಪಿಟಲ್ಸ್ , ಗಲ್ಫ್ ಜೈಂಟ್ಸ್ , ಡೆಸರ್ಟ್ ವೈಪರ್ಸ್ , MI ಎಮಿರೇಟ್ಸ್ ಮತ್ತು ಶಾರ್ಜಾ ವಾರಿಯರ್ಸ್ ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಎಲ್ಲಾ ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ ಮತ್ತು ಅಬುಧಾಬಿಯ ಜಾಯೆದ್ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು ನಡೆಯಲಿದ್ದು , ನಂತರ ನಾಲ್ಕು ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಎಲಿಮಿನೇಟರ್ ಮತ್ತು ಫೈನಲ್ ದುಬೈನಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2 ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯಲಿವೆ.
🚨 Season 4 Schedule Announcement 🚨
DP World ILT20 returns for its 4th edition, promising drama, action, excitement & emotion. 🗓️ Mark your calendars and get ready to root for your favourite side, as the official fixtures for the Season 4 have just dropped!
Read the full… pic.twitter.com/JbA7bjrqov
— International League T20 (@ILT20Official) September 3, 2025
ಈ ಬಾರಿ ಅಂತರರಾಷ್ಟ್ರೀಯ ಲೀಗ್ ಟಿ20 ಮತ್ತು ದಕ್ಷಿಣ ಆಫ್ರಿಕಾದ ಲೀಗ್ SA20 ಲೀಗ್ ಒಂದೇ ಸಮಯದಲ್ಲಿ ನಡೆಯಲಿವೆ . ವಾಸ್ತವವಾಗಿ, SA20 ಡಿಸೆಂಬರ್ 26 ರಿಂದ ಪ್ರಾರಂಭವಾದರೆ, ಅದಕ್ಕೂ ಮುಂಚೆ ಡಿಸೆಂಬರ್ 2 ರಂದು ಐಎಲ್‌ಟಿ20 ಆರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಎರಡೂ ಲೀಗ್‌ಗಳಲ್ಲಿ ಆಟಗಾರರ ಲಭ್ಯತೆಯು ಸಹ ಒಂದು ದೊಡ್ಡ ಪ್ರಶ್ನೆಯಾಗಿದೆ. ವಾಸ್ತವವಾಗಿ, ಅನೇಕ ಸ್ಟಾರ್ ಆಟಗಾರರು ಅಂತರರಾಷ್ಟ್ರೀಯ ಲೀಗ್ ಟಿ20 ಜೊತೆ SA20 ನಲ್ಲಿಯೂ ಆಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರು ಯಾವ ಲೀಗ್‌ಗೆ ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಕಾದು ನೋಡುಬೇಕಾಗಿದೆ.
ಅಶ್ವಿನ್ ಕೂಡ ಆಡುವ ನಿರೀಕ್ಷೆಯಿದೆ
ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ನಿಂದ ನಿವೃತ್ತಿ ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಕೂಡ ಜಾಗತಿಕ ಟಿ20 ಲೀಗ್‌ನಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಅನ್ನು ಪ್ರಾರಂಭಿಸಬಹುದು. ಇತ್ತೀಚೆಗೆ, ಅಶ್ವಿನ್ ಯುಎಇಯಲ್ಲಿ ನಡೆಯಲಿರುವ ಐಎಲ್‌ಟಿ20 ಲೀಗ್‌ನ ಮುಂದಿನ ಆವೃತ್ತಿಯಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಸಂಭವಿಸಿದಲ್ಲಿ, ಅವರು ಮುಂಬರುವ ಆವೃತ್ತಿಯಲ್ಲಿ ಆಡುವುದನ್ನು ಕಾಣಬಹುದು. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾಗವಹಿಸಲು ಅಶ್ವಿನ್ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
