AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

48 ಕ್ಯಾಚ್‌, 89 ಮಿಸ್‌ಫೀಲ್ಡ್‌; ಏಷ್ಯಾಕಪ್​ಗೂ ಮುನ್ನ ಬಹಿರಂಗವಾಯ್ತು ಪಾಕ್ ವೀಕ್ನೆಸ್

Pakistan's Fielding Fumbles: 2024 ರ ಆರಂಭದಿಂದ ಪಾಕಿಸ್ತಾನ ತಂಡ ಒಟ್ಟು 48 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಇದು ಮಾತ್ರವಲ್ಲದೆ, ತಂಡವು ಒಟ್ಟು 89 ಮಿಸ್‌ಫೀಲ್ಡ್‌ಗಳನ್ನು ಮಾಡಿದ್ದು, ಈ ಅಂಕಿಅಂಶ ಏಷ್ಯಾದ ತಂಡವೊಂದು ನೀಡಿರುವ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಪಾಕಿಸ್ತಾನ ತಂಡದ ಕ್ಯಾಚ್‌ಗಳನ್ನು ಹಿಡಿಯುವ ಸಾಮರ್ಥ್ಯ ಕೇವಲ 81.4 ಪ್ರತಿಶತದಷ್ಟಿರುವುದು ತಂಡದ ಕಳಪೆ ಫೀಲ್ಡಿಂಗ್‌ಗೆ ಹಿಡಿದ ಕೈಗನ್ನಡಿಯಾಗಿದೆ.

48 ಕ್ಯಾಚ್‌, 89 ಮಿಸ್‌ಫೀಲ್ಡ್‌; ಏಷ್ಯಾಕಪ್​ಗೂ ಮುನ್ನ ಬಹಿರಂಗವಾಯ್ತು ಪಾಕ್ ವೀಕ್ನೆಸ್
Pakistan Team
ಪೃಥ್ವಿಶಂಕರ
|

Updated on:Sep 04, 2025 | 5:32 PM

Share

2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಆರಂಭವಾಗಲಿದ್ದು, ಟೂರ್ನಿಯ ಬಹು ನಿರೀಕ್ಷಿತ ಪಂದ್ಯ ಭಾರತ ಹಾಗೂ ಪಾಕಿಸ್ತಾನದ (India vs Pakistan) ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಉಭಯ ತಂಡಗಳನ್ನು ನೋಡಿದರೆ, ಟೀಂ ಇಂಡಿಯಾ ಬಲಿಷ್ಠವಾಗಿ ಕಾಣುತ್ತಿದೆ. ಇದೀಗ ಇದಕ್ಕೆ ಪೂರಕವಾಗಿ ಪಾಕಿಸ್ತಾನ ತಂಡದ ಅತಿ ದೊಡ್ಡ ದೌರ್ಬಲ್ಯವೊಂದು ಬಹಿರಂಗಗೊಂಡಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ ತಂಡ ಕ್ಯಾಚ್‌ಗಳನ್ನು ಬಿಡುವುದರಲ್ಲಿ ಮತ್ತು ರನ್ ಔಟ್‌ಗಳನ್ನು ತಪ್ಪಿಸುವುದರಲ್ಲಿ ಸಾಕಷ್ಟು ಬಾರಿ ಎಡವಿದ್ದು, ಇದೀಗ ಅದರ ಅಂಕಿಅಂಶಗಳು ಬಹಿರಂಗಗೊಂಡಿವೆ.

ಪಾಕಿಸ್ತಾನದ ಕಳಪೆ ಫೀಲ್ಡಿಂಗ್

2024 ರ ಆರಂಭದಿಂದ ಪಾಕಿಸ್ತಾನ ತಂಡ ಒಟ್ಟು 48 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಇದು ಮಾತ್ರವಲ್ಲದೆ, ತಂಡವು ಒಟ್ಟು 89 ಮಿಸ್‌ಫೀಲ್ಡ್‌ಗಳನ್ನು ಮಾಡಿದ್ದು, ಈ ಅಂಕಿಅಂಶ ಏಷ್ಯಾದ ತಂಡವೊಂದು ನೀಡಿರುವ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಮಿಸ್‌ಫೀಲ್ಡ್‌ಗಳ ವಿಷಯದಲ್ಲಿ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ. ಇದರ ಹೊರತಾಗಿ, ಪಾಕಿಸ್ತಾನ ತಂಡವು ಇಲ್ಲಿಯವರೆಗೆ 98 ರನ್ ಔಟ್ ಅವಕಾಶಗಳನ್ನು ಕೈಚೆಲ್ಲಿದೆ. ಓವರ್ ಥ್ರೋ ಬಗ್ಗೆ ಹೇಳುವುದಾದರೆ, ಪಾಕಿಸ್ತಾನ ತಂಡ ಒಟ್ಟು 16 ಬಾರಿ ಮಾಡಿದೆ. ಪಾಕಿಸ್ತಾನ ತಂಡದ ಕ್ಯಾಚ್‌ಗಳನ್ನು ಹಿಡಿಯುವ ಸಾಮರ್ಥ್ಯ ಕೇವಲ 81.4 ಪ್ರತಿಶತದಷ್ಟಿರುವುದು ತಂಡದ ಕಳಪೆ ಫೀಲ್ಡಿಂಗ್‌ಗೆ ಹಿಡಿದ ಕೈಗನ್ನಡಿಯಾಗಿದೆ.

ಈ ಪರಿಸ್ಥಿತಿಯಲ್ಲಿ ಏಷ್ಯಾಕಪ್ ಗೆಲ್ಲುತ್ತಾ?

ಪಾಕಿಸ್ತಾನ ತಂಡದ ಕಳಪೆ ಫೀಲ್ಡಿಂಗ್ ಸ್ಥಿತಿಯನ್ನು ನೋಡಿದರೆ, ಇಷ್ಟೆಲ್ಲ ಲೋಪಗಳ ನಡುವೆ ಏಷ್ಯಾಕಪ್ ಗೆಲ್ಲುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪಾಕಿಸ್ತಾನ ತಂಡದ ಇನ್ನೊಂದು ಶೋಚನೀಯ ಸಂಗತಿಯೆಂದರೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಯಾವ ಪ್ರಯತ್ನವನ್ನು ಮಾಡಿಲ್ಲ. ಪ್ರಸ್ತುತ ತ್ರಿಕೋನ ಸರಣಿಯನ್ನು ಆಡುತ್ತಿರುವ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಅದೇ ಕಳಪೆ ಪ್ರದರ್ಶನ ನೀಡಿ ಪಂದ್ಯವನ್ನು ಸೋತಿತು.

ವಾಸ್ತವವಾಗಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ತಂಡ 18 ರನ್‌ಗಳಿಂದ ಸೋಲನುಭವಿಸಿತು. ತಂಡದ ಸೋಲಿಗೆ ಅದರ ಕಳಪೆ ಫೀಲ್ಡಿಂಗ್ ಮುಖ್ಯ ಕಾರಣವಾಗಿತ್ತು. ಇದರ ಜೊತೆಗೆ ತಂಡದ ಬ್ಯಾಟಿಂಗ್ ಆಗಲಿ ಅಥವಾ ಫೀಲ್ಡಿಂಗ್ ಆಗಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅದಕ್ಕಾಗಿಯೇ ಪಾಕ್ ತಂಡವನ್ನು ಏಷ್ಯಾಕಪ್ ಗೆಲ್ಲುವ ಪ್ರಮುಖ ಸ್ಪರ್ಧಿ ಎಂದು ಪರಿಗಣಿಸಲಾಗಿಲ್ಲ. ಆದಾಗ್ಯೂ ಈ ಎಲ್ಲಾ ನ್ಯೂನತೆಗಳನ್ನು ಮೆಟ್ಟಿ ನಿಂತು ಪಾಕಿಸ್ತಾನ ತಂಡ ಏಷ್ಯಾಕಪ್‌ನಲ್ಲಿ ಯಾವ ರೀತಿಯ ಪ್ರದರ್ಶನವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Wed, 3 September 25