AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಅತ್ಯಧಿಕ ಜೊತೆಯಾಟ; ಕೊಹ್ಲಿ-ರಾಹುಲ್ ದಾಖಲೆಯನ್ನು ಮುರಿಯುವವರು ಯಾರು?

Asia Cup 2025: ಟಿ20 ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಹೆಸರಲ್ಲಿ ಅತಿ ದೊಡ್ಡ ಜೊತೆಯಾಟದ ದಾಖಲೆಯಿದೆ. ಇವರಿಬ್ಬರು 2022 ರ ಏಷ್ಯಾಕಪ್​ನಲ್ಲಿ ಮೊದಲ ವಿಕೆಟ್​ಗೆ 119 ರನ್​ಗಳ ಜೊತೆಯಾಟ ನಿರ್ಮಿಸಿದ್ದರು. ಇವರಿಬ್ಬರ ಆ ದಾಖಲೆಯನ್ನು ಈ ವರ್ಷ ಯಾರು ಮುರಿಯುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Asia Cup 2025: ಅತ್ಯಧಿಕ ಜೊತೆಯಾಟ; ಕೊಹ್ಲಿ-ರಾಹುಲ್ ದಾಖಲೆಯನ್ನು ಮುರಿಯುವವರು ಯಾರು?
Kohli, Rahul
ಪೃಥ್ವಿಶಂಕರ
|

Updated on:Sep 04, 2025 | 5:32 PM

Share

ಈ ಬಾರಿ ಮೊದಲ ಬಾರಿಗೆ 2025 ರ ಏಷ್ಯಾಕಪ್‌ನಲ್ಲಿ (Asia Cup 2025) 6 ತಂಡಗಳ ಬದಲು 8 ತಂಡಗಳು ಕಣಕ್ಕಿಳಿಯುತ್ತಿವೆ. ಬದಲಾದ ನಿಯಮಗಳಿಂದಾಗಿ, 1 ತಂಡಕ್ಕೆ ಬದಲಾಗಿ 3 ತಂಡಗಳು ಎಸಿಸಿ ಪ್ರೀಮಿಯರ್ ಟೂರ್ನಮೆಂಟ್‌ನಿಂದ ಏಷ್ಯಾಕಪ್‌ಗೆ ಅರ್ಹತೆ ಪಡೆದಿವೆ. ಇತರ 5 ತಂಡಗಳು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಪ್ರವೇಶ ಪಡೆದಿವೆ. ಈ 5 ತಂಡಗಳಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿವೆ. ಉಳಿದಂತೆ ಹಾಂಗ್ ಕಾಂಗ್, ಯುಎಇ ಮತ್ತು ಓಮನ್ ಎಂಬ 3 ತಂಡಗಳು ಅರ್ಹತಾ ಸುತ್ತಿನ ಮೂಲಕ ಏಷ್ಯಾಕಪ್ ಟೂರ್ನಮೆಂಟ್‌ಗೆ ಟಿಕೆಟ್‌ ಪಡೆದಿವೆ.

ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲಿಟ್ಟುಕೊಂಡು ಈ ಪಂದ್ಯಾವಳಿಯನ್ನು ಟಿ20 ಸ್ವರೂಪದಲ್ಲಿ ಆಡಲಾಗುತ್ತಿದೆ. ಟಿ20 ಏಷ್ಯಾಕಪ್ ಟೂರ್ನಮೆಂಟ್ ನಡೆಯುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು, 2016 ಮತ್ತು 2022 ರಲ್ಲಿ ಏಷ್ಯಾಕಪ್ ಟೂರ್ನಮೆಂಟ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗಿತ್ತು. 2022ರಲ್ಲಿ ಟಿ20 ಏಷ್ಯಾಕಪ್ ನಡೆದಿದ್ದಾಗ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ದಾಖಲೆಯ ಜೊತೆಯಾಟ ನಿರ್ಮಿಸಿದ್ದರು. ಇವರಿಬ್ಬರ ಆ ದಾಖಲೆಯನ್ನು ಈ ವರ್ಷ ಯಾರು ಮುರಿಯುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ರಾಹುಲ್-ಕೊಹ್ಲಿ ದಾಖಲೆ

ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಆರಂಭಿಕ ಜೊತೆಯಾಟ ನಡೆಸಿದ ದಾಖಲೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಹೆಸರಿನಲ್ಲಿದೆ. ಸೆಪ್ಟೆಂಬರ್ 8, 2022 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಮತ್ತು ರಾಹುಲ್ 119 ರನ್‌ಗಳ ಆರಂಭಿಕ ಜೊತೆಯಾಟ ಕಟ್ಟಿದ್ದರು. ಆ ಪಂದ್ಯದಲ್ಲಿ ವಿರಾಟ್ ಶತಕ ಗಳಿಸಿದರು. ಇದರೊಂದಿಗೆ ಟಿ20 ಏಷ್ಯಾಕಪ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಒಟ್ಟಾರೆಯಾಗಿ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಭಾರತ ಆ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಇವರಿಬ್ಬರನ್ನು ಹೊರತುಪಡಿಸಿ, ಟಿ20 ಏಷ್ಯಾಕಪ್‌ನಲ್ಲಿ ಇತರ 4 ದೊಡ್ಡ ಜೊತಯಾಟಗಳು ಇಲ್ಲಿವೆ.

  • ಪಾಕಿಸ್ತಾನ ಪರ, ಫಖರ್ ಜಾಮಾ ಮತ್ತು ಮೊಹಮ್ಮದ್ ರಿಜ್ವಾನ್ ಸೆಪ್ಟೆಂಬರ್ 2, 2022 ರಂದು ಶಾರ್ಜಾದಲ್ಲಿ ಹಾಂಗ್ ಕಾಂಗ್ ವಿರುದ್ಧ ಎರಡನೇ ವಿಕೆಟ್‌ಗೆ 116 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು.
  • ಆಗಸ್ಟ್ 31, 2022 ರಂದು ನಡೆದ ಟಿ20 ಏಷ್ಯಾಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ಕಟ್ಟಿದರು.
  • ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶೋಯೆಬ್ ಮಲಿಕ್ ಮತ್ತು ಉಮರ್ ಅಕ್ಮಲ್ ಫೆಬ್ರವರಿ 29, 2016 ರಂದು ನಾಲ್ಕನೇ ವಿಕೆಟ್‌ಗೆ ಅಜೇಯ 114 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು.
  • ಮಾರ್ಚ್ 2, 2016 ರಂದು ಪಾಕಿಸ್ತಾನದ ಸರ್ಫರಾಜ್ ಅಹ್ಮದ್ ಮತ್ತು ಶೋಯೆಬ್ ಮಲಿಕ್ ಐದನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟ ನಿರ್ಮಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Wed, 3 September 25

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?