AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ILT20: ಇಂಟರ್​ನ್ಯಾಷನಲ್​ ಲೀಗ್ ಟಿ20 ಟೂರ್ನಿಗೆ ಡೇಟ್ ಫಿಕ್ಸ್

ILT20 Season: ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ತಂಡಕ್ಕೆ ಈ ಬಾರಿ ಅಂಬಾಟಿ ರಾಯುಡು ಆಯ್ಕೆಯಾಗಿದ್ದಾರೆ. ಆದರೆ ಮೊದಲ ಸೀಸನ್‌ನಲ್ಲಿ ಆಡಿದ್ದ ಯೂಸುಫ್ ಪಠಾಣ್ ಮತ್ತು ರಾಬಿನ್ ಉತ್ತಪ್ಪ ಅವರನ್ನು ದುಬೈ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದೆ.

ILT20: ಇಂಟರ್​ನ್ಯಾಷನಲ್​ ಲೀಗ್ ಟಿ20 ಟೂರ್ನಿಗೆ ಡೇಟ್ ಫಿಕ್ಸ್
ILT20
TV9 Web
| Edited By: |

Updated on: Aug 24, 2023 | 3:08 PM

Share

UAE ಯಲ್ಲಿ ನಡೆಯಲಿರುವ ಇಂಟರ್​ನ್ಯಾಷನಲ್​ ಲೀಗ್ ಟಿ20 ಟೂರ್ನಿಯ 2ನೇ ಸೀಸನ್​ಗೆ ಡೇಟ್ ಫಿಕ್ಸ್ ಆಗಿದೆ. ಈ ಟೂರ್ನಿಯ 2ನೇ ಆವೃತ್ತಿ ಜನವರಿಂದ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯ ಫೆಬ್ರವರಿ 18 ರಂದು ನಡೆಯಲಿದೆ. ಈ ಬಾರಿ ಕೂಡ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಅಬುಧಾಬಿ ನೈಟ್ ರೈಡರ್ಸ್, ಡೆಸರ್ಟ್ ವೈಪರ್ಸ್, ದುಬೈ ಕ್ಯಾಪಿಟಲ್ಸ್, ಗಲ್ಫ್ ಜೈಂಟ್ಸ್, ಎಂಐ ಎಮಿರೇಟ್ಸ್ ಮತ್ತು ಶಾರ್ಜಾ ವಾರಿಯರ್ಸ್ ತಂಡಗಳ ನಡುವಣೆ ಪೈಪೋಟಿ ನಡೆಯಲಿದೆ.

ಒಟ್ಟು 34 ಪಂದ್ಯಗಳು:

ಈ ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳನ್ನಾಡಲಾಗುತ್ತದೆ. ಇದರಲ್ಲಿ 30 ಲೀಗ್ ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ನಾಲ್ಕು ಪ್ಲೇಆಫ್ ಮ್ಯಾಚ್​ಗಳು ಜರುಗಲಿದೆ.

ಹೊಸ ಆಟಗಾರರ ಎಂಟ್ರಿ:

ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್​ಗಾಗಿ ಸ್ಟಾರ್ ಆಟಗಾರರು ಸಹಿ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್, ಡೇವಿಡ್ ವಿಲ್ಲಿ, ಜೋಶ್ ಲಿಟಲ್, ಡೇವಿಡ್ ವಾರ್ನರ್, ಮಾರ್ಕ್ ವುಡ್​ರಂತಹ ಪ್ರಮುಖ ಆಟಗಾರರ ಹೆಸರು ಕಾಣಿಸಿಕೊಂಡಿದೆ.

ಕಣದಲ್ಲಿ ಅಂಬಾಟಿ ರಾಯುಡು:

ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ತಂಡಕ್ಕೆ ಈ ಬಾರಿ ಅಂಬಾಟಿ ರಾಯುಡು ಆಯ್ಕೆಯಾಗಿದ್ದಾರೆ. ಆದರೆ ಮೊದಲ ಸೀಸನ್‌ನಲ್ಲಿ ಆಡಿದ್ದ ಯೂಸುಫ್ ಪಠಾಣ್ ಮತ್ತು ರಾಬಿನ್ ಉತ್ತಪ್ಪ ಅವರನ್ನು ದುಬೈ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದೆ.

ಟೂರ್ನಿಯಲ್ಲಿ ಪಾಕ್ ಆಟಗಾರರು:

ಡೆಸರ್ಟ್ ವೈಪರ್ಸ್ ತಂಡದವು ಈ ಬಾರಿ ಪಾಕಿಸ್ತಾನ್​ ತಂಡ ಆಲ್​ರೌಂಡರ್ ಶಾದಾಬ್ ಖಾನ್ ಮತ್ತು ಎಡಗೈ ಶಾಹೀನ್ ಶಾ ಆಫ್ರಿದಿ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಪ್ರತಿ ತಂಡಗಳು ಉಳಿಸಿಕೊಂಡಿರುವ ಹಾಗೂ ಹೊಸದಾಗಿ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಅಬುಧಾಬಿ ನೈಟ್ ರೈಡರ್ಸ್:

ಹೊಸ ಆಯ್ಕೆ: ಬ್ರಾಂಡನ್ ಮೆಕ್‌ಮುಲ್ಲೆನ್, ಡೇವಿಡ್ ವಿಲ್ಲಿ, ಜೇಕ್ ಲಿಂಟೊಟ್, ಜೋಶ್ ಲಿಟಲ್, ಲಾರಿ ಇವಾನ್ಸ್, ಮೈಕೆಲ್ ಪೆಪ್ಪರ್, ರವಿ ಬೋಪಾರಾ ಮತ್ತು ಸ್ಯಾಮ್ ಹೈನ್.

ರಿಟೈನ್ ಆಟಗಾರರು: ಅಲಿ ಖಾನ್, ಆಂಡ್ರೆ ರಸೆಲ್, ಚರಿತ್ ಅಸಲಂಕಾ, ಜೋ ಕ್ಲಾರ್ಕ್, ಸಬೀರ್ ಅಲಿ, ಸುನಿಲ್ ನರೈನ್, ಮರ್ಚಂಟ್ ಡಿ ಲಾಂಗೆ ಮತ್ತು ಮತಿಯುಲ್ಲಾ ಖಾನ್.

ಡೆಸರ್ಟ್ ವೈಪರ್ಸ್​:

ಹೊಸ ಆಯ್ಕೆ: ಆಡಮ್ ಹೋಸ್, ಆಝಂ ಖಾನ್, ಬಾಸ್ ಡಿ ಲೀಡೆ, ಮೈಕೆಲ್ ಜೋನ್ಸ್, ಶಾದಾಬ್ ಖಾನ್ ಮತ್ತು ಶಾಹೀನ್ ಶಾ ಆಫ್ರಿದಿ.

ರಿಟೈನ್ ಆಟಗಾರರು: ಅಲೆಕ್ಸ್ ಹೇಲ್ಸ್, ಅಲಿ ನಾಸೀರ್, ಕಾಲಿನ್ ಮುನ್ರೊ, ದಿನೇಶ್ ಚಂಡಿಮಲ್, ಗಸ್ ಅಟ್ಕಿನ್ಸನ್, ಲ್ಯೂಕ್ ವುಡ್, ಮಥೀಶ ಪತಿರಾನ, ರೋಹನ್ ಮುಸ್ತಫಾ, ಶೆಲ್ಡನ್ ಕಾಟ್ರೆಲ್, ಶೆರ್ಫೇನ್ ರುದರ್‌ಫೋರ್ಡ್, ಟಾಮ್ ಕರ್ರಾನ್ ಮತ್ತು ವನಿಂದು ಹಸರಂಗ.

ದುಬೈ ಕ್ಯಾಪಿಟಲ್ಸ್​:

ಹೊಸ ಆಯ್ಕೆ: ಆಂಡ್ರ್ಯೂ ಟೈ, ದಸುನ್ ಶಾನಕ, ಡೇವಿಡ್ ವಾರ್ನರ್, ಮಾರ್ಕ್ ವುಡ್, ಮ್ಯಾಕ್ಸ್ ಹೋಲ್ಡನ್, ಮೊಹಮ್ಮದ್ ಮೊಹ್ಸಿನ್, ನುವಾನ್ ತುಸಾರ, ರಹಮಾನುಲ್ಲಾ ಗುರ್ಬಾಜ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸದೀರ ಸಮರವಿಕ್ರಮ ಮತ್ತು ಸ್ಯಾಮ್ ಬಿಲ್ಲಿಂಗ್ಸ್.

ರಿಟೈನ್ ಆಟಗಾರರು: ದುಷ್ಮಂತ ಚಮೀರಾ, ಜೋ ರೂಟ್, ರಾಜಾ ಅಕಿಫ್, ರೋವ್‌ಮನ್ ಪೊವೆಲ್ ಮತ್ತು ಸಿಕಂದರ್ ರಜಾ.

ಗಲ್ಫ್ ಜೈಂಟ್ಸ್:

ಹೊಸ ಆಯ್ಕೆ: ಡೊಮಿನಿಕ್ ಡ್ರೇಕ್ಸ್, ಜೇಮೀ ಸ್ಮಿತ್, ಜೋರ್ಡಾನ್ ಕಾಕ್ಸ್, ಕರೀಮ್ ಜನತ್, ಮುಜೀಬ್-ಉರ್-ರಹಮಾನ್, ಸೌರಭ್ ನೇತ್ರವಲ್ಕರ್.

ರಿಟೈನ್: ಅಯಾನ್ ಅಫ್ಜಲ್ ಖಾನ್, ಕಾರ್ಲೋಸ್ ಬ್ರಾಥ್‌ವೈಟ್, ಕ್ರಿಸ್ ಜೋರ್ಡಾನ್, ಕ್ರಿಸ್ ಲಿನ್, ಗೆರ್ಹಾರ್ಡ್ ಎರಾಸ್ಮಸ್, ಜೇಮ್ಸ್ ವಿನ್ಸ್, ಜೇಮೀ ಓವರ್‌ಟನ್, ರೆಹಾನ್ ಅಹ್ಮದ್, ರಿಚರ್ಡ್ ಗ್ಲೀಸನ್, ಸಂಚಿತ್ ಶರ್ಮಾ ಮತ್ತು ಶಿಮ್ರಾನ್ ಹೆಟ್ಮೆಯರ್.

MI ಎಮಿರೇಟ್ಸ್:

ಹೊಸ ಆಯ್ಕೆ: ಅಕೇಲ್ ಹೊಸೈನ್, ಅಂಬಟಿ ರಾಯುಡು, ಕೋರಿ ಆಂಡರ್ಸನ್, ಕುಸಲ್ ಪೆರೆರಾ, ನೊಸ್ತುಶ್ ಕೆಂಜಿಗೆ, ಒಡಿಯನ್ ಸ್ಮಿತ್, ವಿಜಯಕಾಂತ್ ವ್ಯಾಸ್ಕಂತ್ ಮತ್ತು ವಕಾರ್ ಸಲಾಂಖೈಲ್.

ರಿಟೈನ್: ಆಂಡ್ರೆ ಫ್ಲೆಚರ್, ಡೇನಿಯಲ್ ಮೌಸ್ಲಿ, ಡ್ವೇನ್ ಬ್ರಾವೋ, ಫಜಲ್ಹಕ್ ಫಾರೂಕಿ, ಜೋರ್ಡಾನ್ ಥಾಂಪ್ಸನ್, ಕೀರಾನ್ ಪೊಲಾರ್ಡ್, ಮೆಕೆನ್ನಿ ಕ್ಲಾರ್ಕ್, ಮುಹಮ್ಮದ್ ವಸೀಮ್, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ವಿಲ್ ಸ್ಮೀಡ್ ಮತ್ತು ಜಹೂರ್ ಖಾನ್.

ಇದನ್ನೂ ಓದಿ: Mumbai Indians: ಟಿ20 ಲೀಗ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಶಾರ್ಜಾ ವಾರಿಯರ್ಸ್:

ಹೊಸ ಆಯ್ಕೆ: ಕ್ರಿಸ್ ಸೋಲ್, ಡೇನಿಯಲ್ ಸ್ಯಾಮ್ಸ್, ದಿಲ್ಶನ್ ಮಧುಶಂಕ, ಜೇಮ್ಸ್ ಫುಲ್ಲರ್, ಜಾನ್ಸನ್ ಚಾರ್ಲ್ಸ್, ಕುಸಲ್ ಮೆಂಡಿಸ್, ಲೆವಿಸ್ ಗ್ರೆಗೊರಿ, ಮಹೇಶ್ ತೀಕ್ಷಣ, ಮಾರ್ಕ್ ವ್ಯಾಟ್, ಮಾರ್ಟಿನ್ ಗಪ್ಟಿಲ್, ಸೀನ್ ವಿಲಿಯಮ್ಸ್ ಮತ್ತು ಕೈಸ್ ಅಹ್ಮದ್.

ರಿಟೈನ್: ಕ್ರಿಸ್ ವೋಕ್ಸ್, ಜೋ ಡೆನ್ಲಿ, ಜುನೈದ್ ಸಿದ್ದಿಕ್, ಮಾರ್ಕ್ ದೇಯಲ್, ಮುಹಮ್ಮದ್ ಜವಾದುಲ್ಲಾ ಮತ್ತು ಟಾಮ್ ಕೊಹ್ಲರ್-ಕಾಡ್ಮೋರ್.

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ