3ನೇ ಮಗುವಿಗೆ ತಾಯಿಯಾಗಿರುವ ಮಡದಿಗೆ ವಂಚಿಸಿದ ಪಾಕಿಸ್ತಾನ ಕ್ರಿಕೆಟಿಗ; ವಿಡಿಯೋ ನೋಡಿ
Imad Wasim Cheating Scandal: ಪಾಕಿಸ್ತಾನ ಕ್ರಿಕೆಟಿಗ ಇಮಾದ್ ವಾಸಿಂ ಅವರ ಮೇಲೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋ ಮತ್ತು ವೀಡಿಯೋಗಳಿಂದಾಗಿ ಈ ವಿವಾದ ಉಲ್ಬಣಗೊಂಡಿದೆ. ಇಮಾದ್ ತಮ್ಮ ಗರ್ಭಿಣಿ ಪತ್ನಿಗೆ ದ್ರೋಹ ಎಸಗಿದ್ದಾರೆ ಎಂಬ ಆರೋಪವಿದೆ. ಆದರೆ ನೈಲಾ ರಾಜಾ ಎಂಬ ಮಹಿಳೆ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಘಟನೆಯು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ವಿವಾದವನ್ನು ಸೃಷ್ಟಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಪಾಕಿಸ್ತಾನ ಕ್ರಿಕೆಟಿಗರು ಒಂದಿಲ್ಲೊಂದು ವಿವಾದಗಳೊಂದಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿವಾದಕ್ಕೆ ಸಿಲುಕುವುದು ಹೊಸ ವಿಚಾರವೆನ್ನಲ್ಲ. ಪಾಕ್ ಕ್ರಿಕೆಟಿಗರೂ ಅಷ್ಟೆ. ಇದೀಗ ಈ ವಿವಾದದಲ್ಲಿ ಮತ್ತೊಬ್ಬ ಕ್ರಿಕೆಟಿಗನ ಹೆಸರು ಕೇಳಿಬಂದಿದೆ. ಪಾಕ್ ಕ್ರಿಕೆಟಿಗ ಇಮಾದ್ ವಾಸಿಮ್ (Imad Wasim) ತಮ್ಮ ಪತ್ನಿಗೆ ದ್ರೋಹ ಎಸಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಬಳಕೆದಾರರು, ವಾಸಿಮ್ ತಮ್ಮ ಮೂರನೇ ಮಗುವಿಗೆ ತಾಯಿಯಾಗಿರುವ ಪತ್ನಿ ಸಾನಿಯಾ ಅಶ್ಫಾಕ್ ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿ ಮತ್ತೊಬ್ಬ ಯುವತಿಯ ಜೊತೆಗೆ ಓಡಾಟ ನಡೆಸುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇಮಾದ್ ವಿರುದ್ಧ ಗಂಭೀರ ಆರೋಪ
2024 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ತಂಡದ ಭಾಗವಾಗಿದ್ದ ಮಾಜಿ ಆಲ್‌ರೌಂಡರ್ ಇಮಾದ್ ವಾಸಿಮ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಇಮಾದ್ ಒಬ್ಬ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮಹಿಳೆ ವಕೀಲೆ ಮತ್ತು ಪ್ರಭಾವಿ ವ್ಯಕ್ತಿ ಎಂದು ಹೇಳಲಾಗುತ್ತಿದೆ, ಅವರ ಹೆಸರು ನೈಲಾ ರಾಜ ಎಂದು ತಿಳಿದುಬಂದಿದೆ. ಇಮಾದ್ ಮತ್ತು ನೈಲಾ ಬಹಳ ಸಮಯದಿಂದ ಜೊತೆಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
View this post on Instagram
ಎಕ್ಸ್ ಖಾತೆಯಿಂದ ಹಿಡಿದು ಇನ್‌ಸ್ಟಾಗ್ರಾಮ್ ವರೆಗೆ, ಪಾಕಿಸ್ತಾನಿ ನೆಟ್ಟಿಗರು ಇಮಾದ್ ಮೇಲೆ ಇಂತಹ ಆರೋಪಗಳನ್ನು ಮಾಡುತ್ತಿದ್ದು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇದರಲ್ಲಿ ಆಘಾತಕಾರಿ ಆರೋಪವೆಂದರೆ ಇಮಾದ್ ತನ್ನ ಹೆಂಡತಿ ಗರ್ಭಿಣಿಯಾಗಿದ್ದಾಗಿನಿಂದ ಅವರಿಗೆ ವಂಚಿಸುತ್ತಿದ್ದು, ತನ್ನ ಹೆಂಡತಿಯೊಂದಿಗೆ ಇರಬೇಕಾದ ಸಮಯದಲ್ಲಿ, ನೈಲಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Will all those disgraceful people apologize who were spreading lies and abusing Imad Wasim for no reason? pic.twitter.com/b8nsSwXnnh
— The PCT Army.🇵🇰 (@thepctarmy0) July 19, 2025
ಆರೋಪಗಳ ಕುರಿತು ನೈಲಾ ಹೇಳಿದ್ದೇನು?
ಆದಾಗ್ಯೂ, ಈಗ ಕೇಳಿಬಂದಿರುವ ಆರೋಪಗಳ ಬಗ್ಗೆ ಇಮಾದ್ ವಾಸಿಮ್ ಅವರಿಂದ ಯಾವುದೇ ಹೇಳಿಕೆ ಅಥವಾ ನಿರಾಕರಣೆ ಹೊರಬಂದಿಲ್ಲ. ಆದರೆ ನೈಲಾ ರಾಜಾ ಹೆಸರಿನಲ್ಲಿ ಒಂದು ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ ನೆಟ್ಟಿಗರು ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿರುವ ನೈಲಾ, ‘ಈ ಅನೈತಿಕ ಸಂಬಂಧದ ಆರೋಪಗಳನ್ನು ಸುಳ್ಳು ಎಂದು ಕರೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
