
2026 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮೊದಲು, 2025 ರ ಅಂಡರ್-19 ಏಷ್ಯಾಕಪ್‌ನಲ್ಲಿ (U19 Asia Cup) ಉಭಯ ದೇಶಗಳ ಯುವ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಡಿಸೆಂಬರ್ 12 ರಿಂದ ಆರಂಭವಾಗಿರುವ ಈ ಟೂರ್ನಿಯ ಮೊದಲ ದಿನವೇ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುಎಇ ವಿರುದ್ಧ ಅಡಿತ್ತು. ಆ ಪಂದ್ಯವನ್ನು ನಿರೀಕ್ಷೆಯಂತೆಯೇ ಭಾರತ ತಂಡ234 ರನ್‌ಗಳಿಂದ ಗೆದ್ದುಕೊಂಡಿತು. ಮತ್ತೊಂದೆಡೆ, ಪಾಕಿಸ್ತಾನ ಕೂಡ ಅಂದೇ ತನ್ನ ಮೊದಲ ಪಂದ್ಯವನ್ನು ಮಲೇಷ್ಯಾ ವಿರುದ್ಧ ಆಡಿ 297 ರನ್‌ಗಳ ಬೃಹತ್ ಅಂತರದ ಗೆಲುವು ಸಾಧಿಸಿತು. ಇದೀಗ ಈ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಡಿಸೆಂಬರ್ 14 ರ ಭಾನುವಾರದಂದು ನಡೆಯಲಿದೆ.
ಈ ಏಕದಿನ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಬೆಳಿಗ್ಗೆ 10:30 ಕ್ಕೆ ಪ್ರಾರಂಭವಾಗುತ್ತವೆ. ಟಾಸ್ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರೂಪ್ ಎ ಪಂದ್ಯ ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.
ಈ ಪಂದ್ಯವನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಸೋನಿ ಸ್ಪೋರ್ಟ್ಸ್ ಟೆನ್-1 ಚಾನೆಲ್‌ನಲ್ಲಿ ವೀಕ್ಷಿಸಬಹುದು.
ಟಿವಿಯ ಹೊರತಾಗಿ, ಅಂಡರ್-19 ಏಷ್ಯಾಕಪ್ ಅನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ. ಭಾರತ-ಪಾಕಿಸ್ತಾನ ಪಂದ್ಯದ ಸ್ಟ್ರೀಮಿಂಗ್ ಅನ್ನು ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು.
ಭಾರತ ತಂಡ: ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ(ನಾಯಕ), ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಅಭಿಗ್ಯಾನ್ ಕುಂದು(ವಿಕೆಟ್ ಕೀಪರ್), ಹರ್ವಂಶ್ ಪಂಗಾಲಿಯಾ, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್, ಉಧವ್ ಮೋಹನ್, ನಮನ್ ಪುಷ್ಪಕ್, ವೇದಾಂತ್ ತ್ರಿವೇದಿ, ಕಿಶನ್ ಕುಮಾರ್ ಸಿಂಗ್, ಆರನ್ ಜಾರ್ಜ್, ಯುವರಾಜ್ ಗೋಹಿಲ್
ಪಾಕ್ ತಂಡ: ಉಸ್ಮಾನ್ ಖಾನ್, ಫರ್ಹಾನ್ ಯೂಸುಫ್(ನಾಯಕ), ಹುಝೈಫಾ ಅಹ್ಸಾನ್, ಹಮ್ಜಾ ಜಹೂರ್(ವಿಕೆಟ್ ಕೀಪರ್), ಮೊಹಮ್ಮದ್ ಸಯ್ಯಮ್, ಅಲಿ ಹಸನ್ ಬಲೋಚ್, ಡ್ಯಾನಿಯಾಲ್ ಅಲಿ ಖಾನ್, ಸಮೀರ್ ಮಿನ್ಹಾಸ್, ಅಲಿ ರಜಾ, ಮೊಮಿನ್ ಕಮರ್, ಅಬ್ದುಲ್ ಸುಭಾನ್, ಮೊಹಮ್ಮದ್ ಹುಝೈಫಾ, ಮೊಹಮ್ಮದ್ ಶಯಾನ್, ನಿಕಾಬ್ ಶಫೀಕ್, ಅಹ್ಮದ್ ಹುಸೇನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ