AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 3ನೇ ಟಿ20 ಪಂದ್ಯಕ್ಕೆ ಮಳೆಯಾತಂಕ; ಹೇಗಿರಲಿದೆ ಧರ್ಮಶಾಲಾ ಹವಾಮಾನ?

India vs South Africa 3rd T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಸರಣಿ 1-1 ಸಮಬಲ ಸಾಧಿಸಿರುವುದರಿಂದ ಈ ಪಂದ್ಯ ನಿರ್ಣಾಯಕವಾಗಿದೆ. ಮಳೆಯ ಸಾಧ್ಯತೆ ಇದ್ದರೂ, ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದೆ. ಧರ್ಮಶಾಲಾದ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸಹಕಾರಿ, ನಂತರ ಸ್ಪಿನ್ನರ್‌ಗಳಿಗೆ ತಿರುವು ನೀಡಬಹುದು. ಭಾರತದ ಬ್ಯಾಟಿಂಗ್ ಪ್ರದರ್ಶನ ಮತ್ತು ಪಿಚ್ ಪರಿಸ್ಥಿತಿಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿವೆ.

IND vs SA: 3ನೇ ಟಿ20 ಪಂದ್ಯಕ್ಕೆ ಮಳೆಯಾತಂಕ; ಹೇಗಿರಲಿದೆ ಧರ್ಮಶಾಲಾ ಹವಾಮಾನ?
Ind Vs Sa 3rd
ಪೃಥ್ವಿಶಂಕರ
|

Updated on: Dec 13, 2025 | 10:38 PM

Share

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯ ಮೂರನೇ ಪಂದ್ಯ ಡಿಸೆಂಬರ್ 14 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವ ಕಾರಣ ಮೂರನೇ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಏಕೆಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಅದರಲ್ಲೂ ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ಈ ಪಂದ್ಯಕ್ಕೂ ಮುನ್ನ ಧರ್ಮಶಾಲಾದ ವಾತಾವರಣ (Weather Forecast) ಹೇಗಿರಲಿದೆ? ಮತ್ತು ಪಿಚ್ ಯಾರಿಗೆ ಸಹಕಾರಿಯಾಗಲಿದೆ ಎಂಬುದನ್ನು ನೋಡೋಣ.

ತುಂತುರು ಮಳೆಯಾಗುವ ಸಾಧ್ಯತೆ

ವಾಸ್ತವವಾಗಿ ಈ ಮೊದಲು ನಡೆದಿದ್ದ ಎರಡು ಪಂದ್ಯಗಳಿಗೆ ಮಳೆ ಯಾವ ರೀತಿಯ ತೊಂದರೆ ನೀಡಿರಲಿಲ್ಲ. ಆದರೆ ಇಬ್ಬನಿ ಮಾತ್ರ ಬಹಳ ತೊಂದರ ನೀಡಿತ್ತು. ಇದೀಗ ಈ ಎರಡು ಪಂದ್ಯಗಳಿಗೆ ವಿಭಿನ್ನವಾಗಿ ಮೂರನೇ ಪಂದ್ಯದ ಸಮಯದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ ಧರ್ಮಶಾಲಾದಲ್ಲಿ ಲಘು ಮಳೆಯಾಗುವ ಮುನ್ಸೂಚನೆ ಇದೆ. ಮಳೆಯನ್ನು ಎದುರಿಸಲು ಕ್ರೀಡಾಂಗಣವು ಆತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿದೆ. ಸೂಪರ್ ಸೋಕರ್‌ಗಳೊಂದಿಗೆ ಮೈದಾನವನ್ನು ಒಣಗಿಸಲು ಸಹ ವ್ಯವಸ್ಥೆ ಮಾಡಲಾಗಿದೆ.

ಟಾಸ್ ಮಹತ್ವದ ಪಾತ್ರ ವಹಿಸುವುದಿಲ್ಲ

ಧರ್ಮಶಾಲಾದಲ್ಲಿರುವ HPCA ಕ್ರೀಡಾಂಗಣದ ಪಿಚ್ ಹೆಚ್ಚಿನ ವೇಗ ಮತ್ತು ಬೌನ್ಸ್‌ಗೆ ಹೆಸರುವಾಸಿಯಾಗಿದ್ದು, ಇದು ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಬಹುದು. ಆದರೆ ಪಂದ್ಯ ಮುಂದುವರೆಯುತ್ತಿದ್ದಂತೆ ಸ್ಪಿನ್ನರ್​ಗಳಿಗೆ ನೆರವು ಸಿಗಲಿದೆ. ಕ್ರೀಡಾಂಗಣವು ಎತ್ತರದಲ್ಲಿದ್ದು, ಹೈಬ್ರಿಡ್ ಪಿಚ್ ಅನ್ನು ಹೊಂದಿದೆ. ಇದು ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಅನುಕೂಲಕರವಾಗಿರುತ್ತದೆ. ಈ ಮೈದಾನದಲ್ಲಿಯೂ ಸಹ ಸಂಜೆಯ ವೇಳೆ ಇಬ್ಬನಿ ಪ್ರಮುಖ ಅಂಶವಾಗಿರುತ್ತದೆ. ಆದಾಗ್ಯೂ, ಟಾಸ್ ಮಹತ್ವದ ಪಾತ್ರ ವಹಿಸುವುದಿಲ್ಲ. ಕಟ್ಟಮ್‌ನಲ್ಲಿ ಭಾರತ ಟಾಸ್ ಸೋತರೂ ಪಂದ್ಯವನ್ನು ಗೆದ್ದಿತು. ಮುಲ್ಲನ್‌ಪುರದಲ್ಲಿ, ಭಾರತ ಟಾಸ್ ಗೆದ್ದರೂ ಪಂದ್ಯವನ್ನು ಸೋತಿತು. ಹೀಗಾಗಿ ಈ ಪಂದ್ಯದಲ್ಲಿ ಯಾವ ರೀತಿಯ ಫಲಿತಾಂಶ ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

IND vs SA: ನಾಲಾಯಕ್ ನಾಯಕ, ಉಪನಾಯಕ; ಭಾರತ ಟಿ20 ತಂಡದಲ್ಲಿರುವುದು 9 ಆಟಗಾರರಷ್ಟೆ

ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿರುವ ಭಾರತ

ಭಾರತ ತಂಡವು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ, ತಂಡವು ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಅಚ್ಚರಿಯ ಸಂಗತಿಯೆಂದರೆ ಭಾರತ ಸೋತಿರುವ ಏಕೈಕ ಪಂದ್ಯ ಇದೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿತ್ತು. ಉಭಯ ತಂಡಗಳು 2015 ರ ಅಕ್ಟೋಬರ್ 2 ರಂದು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಆಫ್ರಿಕಾ ತಂಡ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ