IND vs AUS: ‘ಹೆಡ್’​ ಇಲ್ಲದ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಬೆನ್ನೆಲುಬು

| Updated By: ವಿವೇಕ ಬಿರಾದಾರ

Updated on: Dec 25, 2024 | 7:22 AM

India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಿದ್ದರೆ ಟ್ರಾವಿಸ್ ಹೆಡ್​ಗಾಗಿ ವಿಶೇಷ ಯೋಜನೆ ರೂಪಿಸಲೇಬೇಕು. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲೂ ಟೀಮ್ ಇಂಡಿಯಾ ವಿರುದ್ಧ ಅಬ್ಬರಿಸಿದ್ದು ಹೆಡ್ ಮಾತ್ರ. ಹಾಗಾಗಿ ಹೆಡ್ ವಿಕೆಟ್ ಭಾರತದ ಪಾಲಿಗೆ ನಿರ್ಣಾಯಕ ಎನ್ನಬಹುದು.

IND vs AUS: ಹೆಡ್​ ಇಲ್ಲದ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಬೆನ್ನೆಲುಬು
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರು ಮ್ಯಾಚ್​ಗಳು ಮುಗಿವೆ. ಪರ್ತ್​ನಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್​​ಗಳ ಜಯ ಸಾಧಿಸಿತು. ಆದರೆ ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳಿಂದ ಸೋಲನುಭವಿಸಿತು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿತು. ಇನ್ನು ಬ್ರಿಸ್ಬೇನ್​ನಲ್ಲಿ ನಡೆದ ಮೂರನೇ ಮ್ಯಾಚ್​ ಡ್ರಾನಲ್ಲಿ ಅಂತ್ಯ ಕಂಡಿದೆ. ಅಂದರೆ ಈವರೆಗೆ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿದೆ. ಇಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾಗುತ್ತಿರುವುದು ಟ್ರಾವಿಸ್ ಹೆಡ್ ಎಂಬುದು ಸ್ಪಷ್ಟ.

ಏಕೆಂದರೆ ಕಳೆದ 6 ಇನಿಂಗ್ಸ್​​ಗಳಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಕಲೆಹಾಕಿರುವುದು ಟ್ರಾವಿಸ್ ಹೆಡ್. 2 ಭರ್ಜರಿ ಶತಕಗಳೊಂದಿಗೆ ಹೆಡ್ ಒಟ್ಟು 409 ರನ್​ ಬಾರಿಸಿದ್ದಾರೆ. ಆದರೆ ಮತ್ತೊಂದೆಡೆ ಉಳಿದ 5 ಬ್ಯಾಟರ್​ಗಳು ಜೊತೆಗೂಡಿ ಕಲೆಹಾಕಿರುವುದು ಕೇವಲ 410 ರನ್​ಗಳು ಮಾತ್ರ.

ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ 6 ಇನಿಂಗ್ಸ್​ಗಳಿಂದ 63 ರನ್​​ಗಳಿಸಿದರೆ, ನಾಥನ್ ಮೆಕ್​ಸ್ವೀನಿ 72 ರನ್​​ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ 5 ಇನಿಂಗ್ಸ್​ಗಳಿಂದ ಗಳಿಸಿದ್ದು 82 ರನ್​ಗಳು ಮಾತ್ರ. ಇನ್ನು ಸ್ಟೀವ್ ಸ್ಮಿತ್ ಐದು ಇನಿಂಗ್ಸ್​ಗಳಿಂದ 124 ರನ್​ ಬಾರಿಸಿದ್ದಾರೆ.

ಹಾಗೆಯೇ ಮಿಚೆಲ್ ಮಾರ್ಷ್ 5 ಇನಿಂಗ್ಸ್​ಗಳಿಂದ ಕಲೆಹಾಕಿರುವುದು ಕೇವಲ 69 ರನ್​ಗಳು. ಅಂದರೆ ಆಸ್ಟ್ರೇಲಿಯಾ ಟಾಪ್-5 ಬ್ಯಾಟರ್​​ಗಳ ಒಟ್ಟು ಕೊಡುಗೆ ಕೇವಲ 410 ರನ್​ಗಳು ಮಾತ್ರ.

ಮತ್ತೊಂದೆಡೆ ಏಕಾಂಗಿಯಾಗಿ ಅಬ್ಬರಿಸುವ ಮೂಲಕ ಟ್ರಾವಿಸ್ ಹೆಡ್ 5 ಇನಿಂಗ್ಸ್​ಗಳಿಂದ 2 ಶತಕ ಹಾಗೂ 1 ಅರ್ಧಶತಕದೊಂದಿಗೆ 409 ರನ್​ ಕಲೆಹಾಕಿದ್ದಾರೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡದ ರನ್​ ಸುರಿಮಳೆಯನ್ನು ತಡೆಯಬೇಕಿದ್ದರೆ ಟ್ರಾವಿಸ್ ಹೆಡ್ ಅವರ ವಿಕೆಟ್ ಕಬಳಿಸಲೇಬೇಕು.

ಒಂದು ವೇಳೆ ಮೆಲ್ಬೋರ್ನ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಬೇಗನೆ ಔಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್​​ಗಳು ಯಶಸ್ವಿಯಾದರೆ, ಆಸ್ಟ್ರೇಲಿಯಾ ತಂಡದ ಸ್ಕೋರ್ ಅನ್ನು ನಿಯಂತ್ರಿಸಿಕೊಳ್ಳಬಹುದು. ಹಾಗಾಗಿ ಭಾರತ ತಂಡವು ಮುಂದಿನ ಎರಡು ಮ್ಯಾಚ್​ನಲ್ಲಿ ಗೆಲ್ಲಬೇಕಿದ್ದರೆ ಟ್ರಾವಿಸ್ ಹೆಡ್​ಗಾಗಿ ವಿಶೇಷ ಯೋಜನೆ ರೂಪಿಸಿಕೊಳ್ಳುವುದು ಅನಿವಾರ್ಯ.

ಇದನ್ನೂ ಓದಿ: 22ನೇ ವಯಸ್ಸಿನಲ್ಲೇ ಸೈಮ್ ಅಯ್ಯೂಬ್ ಅಬ್ಬರ: ಸಚಿನ್, ವಿರಾಟ್ ಕೊಹ್ಲಿ ದಾಖಲೆ ಶೇಕಿಂಗ್

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕೊನ್​ಸ್ಟಾಸ್, ಮಾರ್ನಸ್ ಲಾನುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಜ್ಯೆ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ , ಬ್ಯೂ ವೆಬ್‌ಸ್ಟರ್​.

 

Published On - 7:08 am, Wed, 25 December 24