IND vs AUS Final: ಬುಮ್ರಾ- ಶಮಿ ಮ್ಯಾಜಿಕ್; ಆಸೀಸ್​ನ ಪ್ರಮುಖ 3 ವಿಕೆಟ್ ಪತನ

|

Updated on: Nov 19, 2023 | 7:59 PM

IND vs AUS Final: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿ 240 ರನ್​ಗಳ ಅಲ್ಪ ಟಾರ್ಗೆಟ್ ನೀಡಿರುವ ಟೀಂ ಇಂಡಿಯಾ ಬೌಲಿಂಗ್​ನಲ್ಲಿ ಉತ್ತಮ ಆರಂಭ ಪಡೆದಿದೆ. ಆಸ್ಟ್ರೇಲಿಯಾದ ಮೂವರು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದಾರೆ.

IND vs AUS Final: ಬುಮ್ರಾ- ಶಮಿ ಮ್ಯಾಜಿಕ್; ಆಸೀಸ್​ನ ಪ್ರಮುಖ 3 ವಿಕೆಟ್ ಪತನ
ಟೀಂ ಇಂಡಿಯಾ
Follow us on

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿ 240 ರನ್​ಗಳ ಅಲ್ಪ ಟಾರ್ಗೆಟ್ ನೀಡಿರುವ ಟೀಂ ಇಂಡಿಯಾ (India Vs Australia) ಬೌಲಿಂಗ್​ನಲ್ಲಿ ಉತ್ತಮ ಆರಂಭ ಪಡೆದಿದೆ. ಆಸ್ಟ್ರೇಲಿಯಾದ ಮೂವರು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದಾರೆ. ಪವರ್‌ಪ್ಲೇಯಲ್ಲಿ ಟೀಂ ಇಂಡಿಯಾ (Team India) ಉತ್ತಮವಾಗಿ ಬೌಲಿಂಗ್ ಮಾಡುವುದರ ಜೊತೆಗೆ ವಿಕೆಟ್‌ಗಳನ್ನು ಕಬಳಿಸಿದೆ. ಆದರೆ ರನ್‌ಗಳಿಗೆ ಕಡಿವಾಣ ಹಾಕಲು ಭಾರತೀಯ ಬೌಲರ್​ಗಳಿಗೆ ಸಾಧ್ಯವಾಗುತ್ತಿಲ್ಲ. ಭಾರತ 240 ರನ್​ಗಳನ್ನು ಡಿಫೆಂಡ್ ಮಾಡಬೇಕಿರುವುದರಿಂದ ವಿಕೆಟ್ ತೆಗೆಯುವುದರ ಜೊತೆಗೆ ರನ್​ಗಳಿಗೂ ಕಡಿವಾಣ ಹಾಕಬೇಕಾಗಿದೆ.

ಆಸೀಸ್​ಗೆ ಆರಂಭಿಕ ಆಘಾತ

ಇನ್ನು ಭಾರತ ನೀಡಿದ ಅಲ್ಪ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಡೇವಿಡ್ ವಾರ್ನರ್ (7) ಮತ್ತು ಮಿಚೆಲ್ ಮಾರ್ಷ್ (15) ಬೇಗನೇ ಪೆವಿಲಿಯನ್ ಸೇರಿಕೊಂಡರು. ವಾರ್ನರ್ 3 ಎಸೆತಗಳಲ್ಲಿ 7 ರನ್ ಗಳಿಸಿ ಮೊಹಮ್ಮದ್ ಶಮಿ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್​ಮನ್ ಮಿಚೆಲ್ ಮಾರ್ಷ್ 15 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಬುಮ್ರಾ ಅವರ ಅದ್ಭುತ ಎಸೆತದಲ್ಲಿ ಮಾರ್ಷ್, ವಿಕೆಟ್ ಕೀಪರ್ ಕೆಎಲ್ ರಾಹುಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಮಾರ್ಷ್​ ತಮ್ಮ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹ ಬಾರಿಸಿದರು.

ಸ್ಮಿತ್ ಔಟ್

ಹೀಗಾಗಿ ಆರಂಭಿಕ ಒತ್ತಡಕ್ಕೆ ಸಿಲುಕಿದ ಆಸ್ಟ್ರೇಲಿಯಾ ಮೊದಲ 6 ಓವರ್‌ಗಳಲ್ಲಿ 2 ವಿಕೆಟ್‌ಗೆ 42 ರನ್ ಕಲೆಹಾಕಿತು. ಈ ಎರಡು ವಿಕೆಟ್​ಗಳ ಬಳಿಕ ಬಂದ ಆಸೀಸ್ ತಂಡದ ನಂಬಿಕಸ್ತ ಬ್ಯಾಟರ್ ಸ್ಟೀವ್ ಸ್ಮಿತ್ ಕೂಡ ಯಾವುದೇ ಪ್ರಭಾವ ಬೀರದೆ ಬುಮ್ರಾ ಮ್ಯಾಜಿಕ್​ಗೆ ಬಲಿಯಾದರು. ಜಸ್ಪ್ರೀತ್ ಬುಮ್ರಾ ಅದ್ಭುತ ಎಸೆತದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಎಲ್ ಬಿಡಬ್ಲ್ಯೂ ಔಟ್ ಮಾಡಿದರು. ಸ್ಮಿತ್, 9 ಎಸೆತಗಳಲ್ಲಿ ಒಂದು ಬೌಂಡರಿ ಸೇರಿದಂತೆ 4 ರನ್​ಗಳಿಸಲಷ್ಟೇ ಶಕ್ತರಾದರು.

ಭಾರತದ ಇನ್ನಿಂಗ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದರು.  ಆದರೆ ತಂಡದ ಇತರ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ಇಲ್ಲದಿದ್ದರೆ ಟೀಂ ಇಂಡಿಯಾ ಸ್ಕೋರ್ 300ರ ಸನಿಹ ಬರುತ್ತಿತ್ತು.  ವಿರಾಟ್ ಕೊಹ್ಲಿ 54 ರನ್​ಗಳ ಇನ್ನಿಂಗ್ಸ್ ಆಡಿದರೆ, ಕೆಎಲ್ ರಾಹುಲ್ 66 ರನ್ ಬಾರಿಸಿದರು.  ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

Published On - 7:49 pm, Sun, 19 November 23