ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಟೀಂ ಇಂಡಿಯಾದೊಂದಿಗೆ ಇಡೀ 140 ಕೋಟಿ ಭಾರತೀಯರ ಕನಸು ನುಚ್ಚು ನೂರಾಗಿದೆ. ವಿಶ್ವಕಪ್ ಪ್ರಶಸ್ತಿಯ ಕನಸು ಕನಸಾಗಿಯೇ ಉಳಿದಿದೆ. ಇಡೀ ಪಂದ್ಯದಲ್ಲಿ ಆರಂಭದಲ್ಲೇ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯಾ, ಟೀಂ ಇಂಡಿಯಾವನ್ನು (India Vs Australia) ಆರಂಭದಲ್ಲೇ ಪಂದ್ಯದಿಂದ ಹೊರಹಾಕಿತು. ಮೊದಲು ಭಾರತವನ್ನು 240 ರನ್‌ಗಳಿಗೆ ಸೀಮಿತಗೊಳಿಸಿದ ಕಾಂಗರೂ ಪಡೆ ಈ ಸವಾಲನ್ನು 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡರೆ, ಇತ್ತ ಟೀಂ ಇಂಡಿಯಾ ತವರಿನಲ್ಲಿ ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಕೈಚೆಲ್ಲಿತು. ಈ ವಿಶ್ವಕಪ್ ನಾಯಕ ರೋಹಿತ್ ಶರ್ಮಾ (ROhit Sharma) ಸೇರಿದಂತೆ ತಂಡದ ಕೆಲವು ಆಟಗಾರರಿಗೆ ಕೊನೆಯ ಏಕದಿನ ವಿಶ್ವಕಪ್ ಆಗಿದ್ದು, ಸೋಲಿನ ಬಳಿಕ ಇಡೀ ತಂಡವೇ ಮೈದಾನದಲ್ಲಿ ಕಣ್ಣೀರಿಟ್ಟಿತು. ಅದರಲ್ಲೂ ತಂಡವನ್ನು ಫೈನಲ್ವರೆಗೂ ಅಜೇಯರಾಗಿ ಮುನ್ನಡೆಸಿದ್ದ ರೋಹಿತ್ ಕಣ್ಣೀರಿಡುತ್ತಾ ಮೈದಾನ ತೊರೆದಿದ್ದು, ಅಭಿಮಾನಿಗಳ ಕಣ್ಣೀರ ಕಟ್ಟೆ ಹೊಡೆಯುವಂತೆ ಮಾಡಿತು.
ಸೋಲಿನ ಬಳಿಕ ನಾಯಕ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಮೈದಾನದಲ್ಲೇ ಕಣ್ಣೀರಿಟ್ಟರು. ಒಂದು ಹಂತದವರೆಗೆ ಕಣ್ಣೀರನ್ನು ಅದುಮಿಟ್ಟುಕೊಂಡಿದ್ದ ರೋಹಿತ್ಗೆ ಅಂತಿಮವಾಗಿ ದುಃಖವನ್ನು ತಡೆಯಲಾಗದೆ, ಮೈದಾನದಿಂದ ಡ್ರೇಸಿಂಗ್ ರೂಂನತ್ತ ಅವಸವಸರವಾಗಿ ಓಡಿದರು. ಅಷ್ಟರಲ್ಲಾಗಲೇ ರೋಹಿತ್ ಕಣ್ಣಿನಿಂದ ಕಣ್ಣೀರು ಸುರಿಯಲಾರಂಭಿಸಿದ್ದವು. ಕಳೆದೊಂದು ತಿಂಗಳಿನಿಂದ ಈ ಒಂದು ಪ್ರಶಸ್ತಿಗಾಗಿ ನಾಯಕ ರೋಹಿತ್ ತಂಡವನ್ನು ಮುನ್ನಡೆಸಿದ್ದ ಪರಿ ಅಸಮಾನ್ಯವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಪ್ರಶಸ್ತಿ ಕೈತಪ್ಪಿದ್ದ ಹತಾಶೆ ನಾಯಕ ರೋಹಿತ್ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
Nothing is more painful than watching tears in Rohit Sharma eyes again after 2019 CWC!
#INDvsAUS #RohitSharma #INDvsAUSFinal pic.twitter.com/shA95pQG46
— Saurabh Singh (@100rabhsingh781) November 19, 2023
You tried your best captain!
please don’t cry Man 😟#RohitSharma #CWC23#INDvAUS #INDvsAUS #AUSvIND#AUSvsIND #INDvsAUSfinal #Abhisha pic.twitter.com/LgBGFKmKz6— 𝑵𝒐𝒃𝒊𝒕𝒂 ❥ (@OG_Nobita) November 19, 2023
IND vs AUS Final: ಭಾರತದ ಗೆಲುವು ಕಸಿದುಕೊಂಡ ಹೆಡ್; ಆಸ್ಟ್ರೇಲಿಯಾ ಏಕದಿನ ಚಾಂಪಿಯನ್
ಇನ್ನು ಇಡೀ ಟೂರ್ನಿಯಲ್ಲಿ ತಂಡವನ್ನು ಜಯದತ್ತ ಮುನ್ನಡೆಸಿದಲ್ಲದೆ ಆಟಗಾರನಾಗಿಯೂ ರೋಹಿತ್ ಸ್ಮರಣೀಯ ಪ್ರದರ್ಶನ ನೀಡಿದರು. ಇಡೀ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 765 ರನ್ ಕಲೆಹಾಕುವುದರೊಂದಿಗೆ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರನೆನಿಸಿಕೊಂಡರೆ ರೋಹಿತ್ ಶರ್ಮಾ ಕೂಡ 597 ರನ್ಗಳ ಕೋಟೆ ಕಟ್ಟಿದ್ದರು. ಆದರೆ ಇಡೀ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅಂತ್ಯ ಬಯಸಿದಂತೆ ಇರಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಸಂಪೂರ್ಣ ವಿಫಲರಾದರು.
ಟೀಂ ಇಂಡಿಯಾ ನೀಡಿದ್ದ 241 ರನ್ಗಳ ಗುರಿಯನ್ನು ಆಸೀಸ್ ಮೂರು ವಿಕೆಟ್ ಕಳೆದುಕೊಂಡು ಬೆನ್ನತ್ತಿತು. ಈ ಮೂಲಕ ಆರನೇ ಬಾರಿ ವಿಶ್ವ ಚಾಂಪಿಯನ್ ಆಯಿತು. ತಂಡದ ಪರ ಟ್ರಾವಿಸ್ ಹೆಡ್ ಬೃಹತ್ ಶತಕ (120 ಎಸೆತಗಳಲ್ಲಿ 137) ಸಿಡಿಸಿದರೆ, ಮಾರ್ನಸ್ ಲಬುಶೇನ್ (58) ಅರ್ಧಶತಕದೊಂದಿಗೆ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಇಬ್ಬರೂ ಅಭೇದ್ಯ ಮೂರನೇ ವಿಕೆಟ್‌ಗೆ 194 ರನ್ ಸೇರಿಸಿ ಆಸ್ಟ್ರೇಲಿಯಾವನ್ನು ಗೆಲುವಿನ ದಡಕ್ಕೆ ತಂದರು. ಭಾರತದ ಪರ ಬುಮ್ರಾ 2 ವಿಕೆಟ್ ಪಡೆದರೆ, ಶಮಿ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Sun, 19 November 23