IND vs AUS Final: ಸೂರ್ಯಕುಮಾರ್ ಯಾದವ್ ಏಕದಿನ ವೃತ್ತಿಜೀವನ ಮುಗಿದ ಅಧ್ಯಾಯ?

Suryakumar Yadav, ICC World Cup 2023: ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ ಮಹತ್ವದ ಪಂದ್ಯವೊಂದರಲ್ಲಿ ನಿರ್ಣಾಯಕ ಸಮಯದಲ್ಲಿ ಸೂರ್ಯ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು.

IND vs AUS Final: ಸೂರ್ಯಕುಮಾರ್ ಯಾದವ್ ಏಕದಿನ ವೃತ್ತಿಜೀವನ ಮುಗಿದ ಅಧ್ಯಾಯ?
ಸೂರ್ಯಕುಮಾರ್ ಯಾದವ್
Follow us
|

Updated on: Nov 19, 2023 | 9:09 PM

ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ (India Vs Australia) ಸೋಲಿನ ಸುಳಿಗೆ ಸಿಲುಕಿದೆ. ಭಾರತ ನೀಡಿದ 241 ರನ್​ಗಳ ಗುರಿಯನ್ನು ಆಸೀಸ್ ಪಡೆ ಸುಲಭವಾಗಿ ಬೆನ್ನಟ್ಟುತ್ತಿದೆ. ಬೃಹತ್ ಮೊತ್ತ ಕಲೆಹಾಕುವ ಉದ್ದೇಶದಿಂದ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿತ್ತು. ಆದರೆ, ರೋಹಿತ್ ಶರ್ಮಾ (Rohit Sharma) ವಿಕೆಟ್ ಉರುಳಿದ ನಂತರ ಆಕ್ರಮಣಕಾರಿ ಆಟಕ್ಕೆ ಬದಲಾಗಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ನಿದಾನಗತಿಯ ಬ್ಯಾಟಿಂಗ್​ಗೆ ಮುಂದಾದರು. ಮೂವರು ಆಟಗಾರರನ್ನು ಬಿಟ್ಟರೆ ಮತ್ತ್ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav ) ನಿರೀಕ್ಷೆಗೆ ತಕ್ಕಂತೆ ಆಟ ಆಡದೇ ಎಲ್ಲರಲ್ಲೂ ನಿರಾಸೆ ಮೂಡಿಸಿದ್ದಾರೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ ಮಹತ್ವದ ಪಂದ್ಯವೊಂದರಲ್ಲಿ ನಿರ್ಣಾಯಕ ಸಮಯದಲ್ಲಿ ಸೂರ್ಯ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಈ ಪಂದ್ಯದಲ್ಲಿ ವಿಶೇಷವೇನು ಮಾಡದ ಸೂರ್ಯ ಕೇವಲ 18 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

IND vs AUS Final: ಆಸೀಸ್ ತಂತ್ರದ ಮುಂದೆ ಭಾರತದ ಅನಾನುಭವಿಗಳ ಆಟ ನಡೆಯಲ್ಲಿಲ್ಲ..!

ನಿರಾಸೆ ಮೂಡಿಸಿದ ಸೂರ್ಯ

ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯ ಅವರಿಂದ ಮಹತ್ವದ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ, ಕ್ರಿಕೆಟ್ ಅಭಿಮಾನಿಗಳು ಮತ್ತು ತಂಡದ ನಿರೀಕ್ಷೆಯನ್ನು ತಲುಪುವಲ್ಲಿ ಸೂರ್ಯ ವಿಫಲರಾದರು. ಅಹಮದಾಬಾದ್‌ನಲ್ಲಿ ತಮ್ಮ ಶೈಲಿಯಲ್ಲಿ ಸೂರ್ಯಗೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಸೂರ್ಯ ಅವರಿಗೆ ಫುಲ್ ಚಾನ್ಸ್ ಸಿಕ್ಕಿದ್ದರೂ ಆ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ಲ.

ಇಲ್ಲಿಯವರೆಗೆ ಟೀಮ್ ಮ್ಯಾನೇಜ್​ಮೆಂಟ್ ಸೂರ್ಯ ಅವರಿಗೆ ಸಂಪೂರ್ಣ ಅವಕಾಶ ನೀಡಿದೆ. ಅವರಿಗೆ ನಾಯಕ ರೋಹಿತ್ ಶರ್ಮಾ ಕೂಡ ಬೆಂಬಲ ನೀಡಿದ್ದಾರೆ. ಆದರೆ, ಅವರ ಮೇಲೆ ಇಟ್ಟಿರುವ ನಂಬಿಕೆಯನ್ನು ಸಾಬೀತುಪಡಿಸಲು ಸೂರ್ಯಗೆ ಸಾಧ್ಯವಾಗಿಲ್ಲ. ಅತಿ ದೊಡ್ಡ ಟೂರ್ನಿ ಹಾಗೂ ಅತಿ ದೊಡ್ಡ ಪಂದ್ಯದಲ್ಲೇ ಮಂಡಿಯೂರುವ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ದಾರೆ. ಇದರೊಂದಿಗೆ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಸೂರ್ಯ ಅವರ ವೃತ್ತಿಜೀವನ ಮುಗಿದ ಅಧ್ಯಾಯದಂತೆ ಕಾಣುತ್ತಿದೆ.

ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ

ಪ್ರಸಕ್ತ ವಿಶ್ವಕಪ್‌ನಲ್ಲಿ ಸೂರ್ಯ 7 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು ಎರಡು ಬಾರಿ ಮಾತ್ರ ಅಜೇಯರಾಗಿ ಪೆವಿಲಿಯನ್​ಗೆ ಮರಳಿದರು. ಆದರೆ, ಟೂರ್ನಿಯಲ್ಲಿ ಗಳಿಸಿದ್ದು ಮಾತ್ರ 107 ರನ್. 2023 ರ ವಿಶ್ವಕಪ್‌ನಲ್ಲಿ ಅವರ ಬ್ಯಾಟ್‌ನಿಂದ 49 ರನ್‌ ಬಂದಿದ್ದೆ ಅವರ ಅತ್ಯಧಿಕ ರನ್ ಆಗಿತ್ತು. ಉಳಿದ 58 ರನ್‌ಗಳು ಇತರ ಇನ್ನಿಂಗ್ಸ್‌ಗಳಿಂದ ಬಂದವು.

ಅಂತಿಮ ಪಂದ್ಯದಲ್ಲಿ ಸೂರ್ಯ 28 ಎಸೆತಗಳನ್ನು ಎದುರಿಸಿ 18 ರನ್ ಗಳಿಸಿದರು. ಇದರಲ್ಲಿ ಸೂರ್ಯ ಅವರ ಬ್ಯಾಟ್‌ನಿಂದ ಕೇವಲ ಒಂದು ಬೌಂಡರಿ ಮಾತ್ರ ಬಂತು. ಸೂರ್ಯ 64.29 ಸ್ಟ್ರೈಕ್ ರೇಟ್‌ನಲ್ಲಿ ಈ ರನ್ ಗಳಿಸಿದರು. ಈ ಮಹತ್ವದ ಪಂದ್ಯದಲ್ಲಿ ಸೂರ್ಯ ಅಬ್ಬರಿಸುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯೆಲ್ಲ ಹುಸಿಯಾಯಿತು.

ಸೂರ್ಯ ಅವರ ಏಕದಿನ ವೃತ್ತಿಜೀವನ

ಸೂರ್ಯ ಏಕದಿನದಲ್ಲಿ ಇದುವರೆಗೆ 37 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ಅವರು 35 ಇನ್ನಿಂಗ್ಸ್‌ಗಳನ್ನು ಆಡಿ 773 ರನ್ ಗಳಿಸಿದ್ದಾರೆ. ಇದರಲ್ಲಿ 5 ಬಾರಿ ಅಜೇಯರಾಗಿರುವ ಸೂರ್ಯ ಅವರ ಅತ್ಯುತ್ತಮ ಸ್ಕೋರ್ 72 ರನ್ ಆಗಿದೆ. 25.77 ಸರಾಸರಿಯಲ್ಲಿ ರನ್ ಕಲೆಹಾಕಿರುವ ಸೂರ್ಯ ಕೇವಲ 4 ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಟಿ20 ಮಾದರಿಯಲ್ಲಿ ಅವರು 50 ಇನ್ನಿಂಗ್ಸ್‌ಗಳಲ್ಲಿ 15 ಅರ್ಧಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಏಕದಿನ ಮಾದರಿ ಸೂರ್ಯಕುಮಾರ್​ಗೆ ಸರಿ ಹೊಂದುವುದಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?