AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS Final: ಭಾರತದ ಗೆಲುವು ಕಸಿದುಕೊಂಡ ಹೆಡ್; ಆಸ್ಟ್ರೇಲಿಯಾ ಏಕದಿನ ಚಾಂಪಿಯನ್

IND vs AUS Final: ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ತಂಡ ದಾಖಲೆಯ 6ನೇ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ಇತ್ತ ಮೂರನೇ ಬಾರಿಗೆ ಏಕದಿನ ಚಾಂಪಿಯನ್ ಆಗುವ ಕನಸು ಕಂಡಿದ್ದ ಟೀಂ ಇಂಡಿಯಾಗೆ ಸೋಲಿನ ಆಘಾತ ಎದುರಾಗಿದೆ.

IND vs AUS Final: ಭಾರತದ ಗೆಲುವು ಕಸಿದುಕೊಂಡ ಹೆಡ್; ಆಸ್ಟ್ರೇಲಿಯಾ ಏಕದಿನ ಚಾಂಪಿಯನ್
ಆಸ್ಟ್ರೇಲಿಯಾ ತಂಡ
ಪೃಥ್ವಿಶಂಕರ
|

Updated on:Nov 19, 2023 | 9:53 PM

Share

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium in Ahmedabad) ನಡೆದ 2023 ರ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ತಂಡ (India Vs Australia) ದಾಖಲೆಯ 6ನೇ ಬಾರಿಗೆ ಏಕದಿನ ವಿಶ್ವಕಪ್ (ICC World Cup 2023) ಎತ್ತಿಹಿಡಿದಿದೆ. ಇತ್ತ ಮೂರನೇ ಬಾರಿಗೆ ಏಕದಿನ ಚಾಂಪಿಯನ್ ಆಗುವ ಕನಸು ಕಂಡಿದ್ದ ಟೀಂ ಇಂಡಿಯಾಗೆ ಸೋಲಿನ ಆಘಾತ ಎದುರಾಗಿದೆ. ಭಾರತ ನೀಡಿದ 241 ರನ್‌ಗಳ ಗೆಲುವಿನ ಸವಾಲನ್ನು ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಆಸೀಸ್ ಗೆಲುವಿನ ಹೀರೋ ಎನಿಸಿಕೊಂಡ ಟ್ರಾವಿಸ್ ಹೆಡ್ 137 ರನ್​ಗಳ ಇನ್ನಿಂಗ್ಸ್ ಆಡಿದರು. ಟೀಂ ಇಂಡಿಯಾ ಪರ ಬುಮ್ರಾ 2 ವಿಕೆಟ್ ಪಡೆದರೆ, ಶಮಿ ಹಾಗೂ ಸಿರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಟೀಂ ಇಂಡಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 240 ರನ್ ಕಲೆಹಾಕಿತು. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದರೆ, ನಾಯಕ ರೋಹಿತ್ ಕೂಡ 47 ರನ್​ಗಳ ಕೊಡುಗೆ ನೀಡಿದರು. ಉಳಿದಂತೆ ತಂಡದ ಇತರ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯದ ಬೌಲರ್‌ಗಳ ಮುಂದೆ ಮಂಡಿಯೂರಿದರು.

IND vs AUS Final: ಸೂರ್ಯಕುಮಾರ್ ಯಾದವ್ ಏಕದಿನ ವೃತ್ತಿಜೀವನ ಮುಗಿದ ಅಧ್ಯಾಯ?

ಭಾರತದ ಕಳಪೆ ಬ್ಯಾಟಿಂಗ್

ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್​ಗಳ ಇನ್ನಿಂಗ್ಸ್ ಆಡಿದರೆ, ವಿರಾಟ್ 54 ರನ್ ಕೊಡುಗೆ ನೀಡಿದರು. ನಾಯಕ ರೋಹಿತ್ 31 ಎಸೆತಗಳಲ್ಲಿ 47 ರನ್ ಬಾರಿಸಿ ದೊಡ್ಡ ಶಾಟ್ ಹೊಡೆಯಲು ಯತ್ನಿಸಿ ಔಟಾದರು. ಈ ಮೂವರನ್ನು ಹೊರತುಪಡಿಸಿದರೆ, ಸೂರ್ಯಕುಮಾರ್ ಯಾದವ್ 18 ರನ್ ಮತ್ತು ಕುಲ್ದೀಪ್ ಯಾದವ್ 10 ರನ್ ಕೊಡುಗೆ ನೀಡಿದರು. ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ತಲಾ 4 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರೆ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರೂ ತಲಾ 9* ರನ್ ಗಳಿಸಿದರು. ಮೊಹಮ್ಮದ್ ಶಮಿ 6 ರನ್ ಮತ್ತು ಜಸ್ಪ್ರೀತ್ ಬುಮ್ರಾ 1 ರನ್ ಬಾರಿಸಿದರು.

ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರೆ, ಜೋಶ್ ಹ್ಯಾಜಲ್‌ವುಡ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಇಬ್ಬರೂ ತಲಾ 2 ವಿಕೆಟ್ ಪಡೆದರು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆಡಮ್ ಝಂಪಾ ಇಬ್ಬರೂ ತಲಾ 1 ವಿಕೆಟ್ ಪಡೆದು ಇತರರಿಗೆ ಉತ್ತಮ ಬೆಂಬಲ ನೀಡಿದರು.

ಆಸ್ಟ್ರೇಲಿಯಾದ ಬ್ಯಾಟಿಂಗ್

ಭಾರತ ನೀಡಿದ 241 ರನ್​ಗಳ ಬೆನ್ನಟ್ಟಿದ ಆಸ್ಟ್ರೇಲಿಯದ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಇಬ್ಬರೂ ಎಚ್ಚರಿಕೆಯ ಆರಂಭವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಈ ಪ್ರಯತ್ನಗಳನ್ನು ಭಾರತೀಯ ಬೌಲರ್‌ಗಳು ವಿಫಲಗೊಳಿಸಿದರು. ಆರಂಭದಲ್ಲಿ ಮಾರಕ ಬೌಲಿಂಗ್ ಮಾಡಿದ ಟೀಂ ಇಂಡಿಯಾದ ಬೌಲರ್‌ಗಳು ಮೊದಲ 7 ಓವರ್‌ಗಳಲ್ಲಿ 3 ವಿಕೆಟ್‌ ಪಡೆದು ಆಸೀಸ್​ಗೆ ಆಘಾತ ನೀಡಿದರು. ಡೇವಿಡ್ ವಾರ್ನರ್ 7, ಮಿಚೆಲ್ ಮಾರ್ಷ್ 15 ಮತ್ತು ಸ್ಟೀವನ್ ಸ್ಮಿತ್ 4 ರನ್ ಗಳಿಸಿ ಔಟಾದರು. ಆದರೆ ನಂತರ ಹೆಡ್ ಮತ್ತು ಮಾರ್ನಸ್ ಲಬುಶೇನ್ ಇಬ್ಬರೂ ಆಸ್ಟ್ರೇಲಿಯಾದ ಗೆಲುವಿಗೆ ಅಡಿಪಾಯ ಹಾಕಿದರು. ಇವರಿಬ್ಬರು ದಾಖಲೆಯ ಜೊತೆಯಾಟ ನಡೆಸಿದರು. ಇದೇ ವೇಳೆ ಟ್ರಾವಿಸ್ ಹೆಡ್ ಶತಕ ಬಾರಿಸಿದರೆ, ಲಬುಶೇನ್ ಅರ್ಧಶತಕ ಸಿಡಿಸಿ ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:25 pm, Sun, 19 November 23