- Kannada News Photo gallery IND vs AUS Final: Bollywood stars watch World Cup final at narendra modi stadium: See photos
IND vs AUS Final: ವಿಶ್ವಕಪ್ ಫೈನಲ್ ಪಂದ್ಯ ಕಣ್ತುಂಬಿಕೊಂಡ ಬಾಲಿವುಡ್ ತಾರೆಯರು: ಫೋಟೋಸ್ ನೋಡಿ
IND vs AUS Final: ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ನಡೆಯಿತು. 20 ವರ್ಷಗಳ ಬಳಿಕ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇದು ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಕ್ಷಣ. ಈ ಐತಿಹಾಸಿಕ ಪಂದ್ಯವನ್ನು ಹಲವು ಬಾಲಿವುಡ್ ತಾರೆಯರು ಕಣ್ತುಂಬಿಕೊಂಡಿದ್ದಾರೆ.
Updated on: Nov 19, 2023 | 9:11 PM

ಗುಜರಾತ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯುತ್ತಿದ್ದು, ಇಂದಿನ ವಿಶ್ವಕಪ್ ಫೈನಲ್ ಪಂದ್ಯ ವನ್ನು ಬಾಲಿವುಡ್ ಸಿನಿಮಾ ತಾರೆಯರು ಕೂಡ ಕಣ್ತುಂಬಿಕೊಂಡಿದ್ದಾರೆ.

ನಟಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸಲು ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದರು.

ನಟ ಶಾರುಖ್ ಖಾನ್ ಅವರು ಸಹ ಫೈನಲ್ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಕೂತು ಪಂದ್ಯ ನೋಡಿದ್ದಾರೆ.

ಭಾರತ ತಂಡದ ಟೀ ಶರ್ಟ್ ಧರಿಸಿ ನಟಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ, ಸುಹಾನಾ ಖಾನ್ ಕೂಡ ಫೈನಲ್ ಪಂದ್ಯವನ್ನು ಆನಂದಿಸಿದ್ದಾರೆ.

ಇತ್ತೀಚೆಗೆ ಮದುವೆ ಆದ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಕೂಡ ತಮ್ಮ ಪತಿಯನ್ನು ಹುರಿದುಂಬಿಸಲು ಆಗಮಿಸಿದ್ದರು.

ಆಲಿಯಾ ಭಟ್, ರಣಬೀರ್ ಕಪೂರ್, ಅಜಯ್ ದೇವಗನ್ ಅವರಂತಹ ಬಾಲಿವುಡ್ ತಾರೆಗಳು ಮನೆಯಿಂದಲೇ ವಿಶ್ವಕಪ್ ಫೈನಲ್ ಪಂದ್ಯವನ್ನು ಎಂಜಾಯ್ ಮಾಡಿದ್ದಾರೆ. ಸದ್ಯ ಎಲ್ಲ ಸೆಲಿಬ್ರಿಟಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.



















