IND vs AUS T20I Series: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಇಂದು ಭಾರತ ತಂಡ ಪ್ರಕಟ?: ಯಾರಿಗೆಲ್ಲ ಅವಕಾಶ?

|

Updated on: Nov 18, 2023 | 7:19 AM

India vs Australia T20I Series squads: ಕಾಂಗರೂ ಪಡೆಯ ವಿರುದ್ಧ ಭಾರತ ತವರಿನಲ್ಲಿ ಒಟ್ಟು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಸೆಮಿಫೈನಲ್ ಮುಗಿದ ಬೆನ್ನಲ್ಲೇ ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಎರಡನೇ ಸೆಮಿಫೈನಲ್ ಕಳಿದರೂ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಹೆಸರಿಸಿಲ್ಲ.

IND vs AUS T20I Series: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಇಂದು ಭಾರತ ತಂಡ ಪ್ರಕಟ?: ಯಾರಿಗೆಲ್ಲ ಅವಕಾಶ?
IND vs AUS T20I Series
Follow us on

ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಸದ್ಯ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಆಡಲು ಸಿದ್ದತೆ ನಡೆಸುತ್ತಿದೆ. ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಹುನಿರೀಕ್ಷಿತ ಫೈನಲ್ ಕಾದಾಟ ನಡೆಯಲಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಟೀಮ್ ಇಂಡಿಯಾ ಈಗಾಗಲೇ ಆಹ್ಮದಾಬಾದ್​ಗೆ ತಲುಪಿ ಅಭ್ಯಾಸ ಕೂಡ ಶುರುಮಾಡಿದೆ. ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ, ಭಾರತ ತಂಡ ಆಸ್ಟ್ರೇಲಿಯಾ (India vs Australia) ವಿರುದ್ಧ ಟಿ20 ಸರಣಿ ಆಡಲಿದೆ.

ಕಾಂಗರೂ ಪಡೆಯ ವಿರುದ್ಧ ಭಾರತ ತವರಿನಲ್ಲಿ ಒಟ್ಟು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಸೆಮಿಫೈನಲ್ ಮುಗಿದ ಬೆನ್ನಲ್ಲೇ ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಎರಡನೇ ಸೆಮಿಫೈನಲ್ ಕಳಿದರೂ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಹೆಸರಿಸಿಲ್ಲ. ಹೀಗಾಗಿ ಇಂದು ಆಸೀಸ್ ವಿರುದ್ಧದ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಟೀಮ್ ಇಂಡಿಯಾವನ್ನು ಹೆಸರಿಸುವ ಸಾಧ್ಯತೆ ಇದೆ.

ಮಿಂಚುತ್ತಿದೆ ‘ಬ್ರ್ಯಾಂಡ್’ ಶಮಿ; ಜಾಹೀರಾತಿಗಾಗಿ ಎಡೆತಾಕುತ್ತಿರುವ ಕಂಪನಿಗಳು; ಮೊಹಮ್ಮದ್ ಶಮಿಗೆ ಹರಿದುಬರುತ್ತಿದೆ ಹಣದ ಹೊಳೆ

ಇದನ್ನೂ ಓದಿ
ವಿಡಿಯೋ: ಪಂದ್ಯ​​ಕ್ಕೂ ಮುನ್ನ ಭಾರತೀಯ ವಾಯುಪಡೆ ಸಮರಾಭ್ಯಾಸ
ಕಪ್ ಗೆಲ್ಲಲು ಪ್ರಯತ್ನಿಸಬೇಡಿ,ಚೆಂಡನ್ನು ಹೊಡೆಯಿರಿ:ಭಾರತಕ್ಕೆ ಸದ್ಗುರು ಸಲಹೆ
ಆಸ್ಟ್ರೇಲಿಯಾ 450/2, ಭಾರತ 65ಕ್ಕೆ ಆಲ್‌ಔಟ್: ಮಿಚೆಲ್‌ ಮಾರ್ಷ್‌ ಭವಿಷ್ಯ!
ವಿಶ್ವಕಪ್ ಫೈನಲ್: ಅಹ್ಮದಾಬಾದ್​ಗೆ ಫ್ಲೈಟ್ ಟಿಕೆಟ್ ಎಷ್ಟು ಗೊತ್ತಾ?

ಈಗಾಗಲೇ ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಸರಣಿಯಿಂದ ಹೊರಬಿದ್ದಿದ್ದಾರೆ. ಇವರು ಗುಣಮುಖರಾಗಲು ಇನ್ನೂ ಸಮಯ ಬೇಕಂತೆ. BCCI ವೈದ್ಯಕೀಯ ತಂಡ ಪಾಂಡ್ಯಗೆ 6-8 ವಾರಗಳ ವಿಶ್ರಾಂತಿಗೆ ಸಲಹೆ ನೀಡಿದೆ. ಹೀಗಾಗಿ ಇವರು ಆಸೀಸ್ ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಹೊರಬಿದ್ದಿದ್ದಾರೆ.

ಇನ್ನು ಈ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಇತರೆ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ವಿಶ್ವಕಪ್ ನಂತರ ಇವರೆಲ್ಲ ವಿರಾಮವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಆಯ್ಕೆದಾರರು ಸೂರ್ಯಕುಮಾರ್ ಯಾದವ್ ಅಥವಾ ರುತುರಾಜ್ ಗಾಯಕ್ವಾಡ್ ಅವರನ್ನು ಸ್ಟ್ಯಾಂಡ್-ಬೈ ಕ್ಯಾಪ್ಟನ್ ಆಗಿ ಆಯ್ಕೆಮಾಡುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಅವರು ಟಿ20 ತಂಡದ ಉಪನಾಯಕರಾಗಿದ್ದಾರೆ, ಆದರೆ ರುತುರಾಜ್ ಗಾಯಕ್ವಾಡ್ ಅವರು ಏಷ್ಯನ್ ಗೇಮ್ಸ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿ ಚಿನ್ನದ ಪದಕ ಗೆಲ್ಲಿಸಿಕೊಟ್ಟಿದ್ದರು. ಇದರ ನಡುವೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 12 ತಿಂಗಳ ನಂತರ ಭಾರತ ತಂಡಕ್ಕೆ ಮರಳಲಿದ್ದಾರೆ. ವಿಕೆಟ್-ಕೀಪರ್ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್, ರಿಂಕು ಸಿಂಗ್ ಕೂಡ ಆಯ್ಕೆ ಆಗಲಿದ್ದಾರೆ ಎಂಬ ಮಾತಿದೆ. ಕ್ರಿಕೆಟ್ ವಿಶ್ವಕಪ್ ಫೈನಲ್‌ ಮುಕ್ತಾಯವಾದ ನಾಲ್ಕು ದಿನಗಳ ನಂತರ ನವೆಂಬರ್ 23 ರಂದು ಭಾರತ-ಆಸೀಸ್ ಟಿ20 ಸರಣಿಯು ಪ್ರಾರಂಭವಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:16 am, Sat, 18 November 23