AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS Test: ಭಾರತ- ಆಸ್ಟ್ರೇಲಿಯಾ ಕೊನೆಯ ನಾಲ್ಕನೇ ಟೆಸ್ಟ್ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?

India vs Australia 4th Test: ಭಾರತ ಉಳಿದಿರುವ ಒಂದು ಪಂದ್ಯವನ್ನು ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೆ ಏರಲಿದೆ. ಇತ್ತ ಆಸೀಸ್ ಪಡೆಗೆ ಕೂಡ ಕೊನೆಯ ಟೆಸ್ಟ್ ಬಹುಮುಖ್ಯ.

IND vs AUS Test: ಭಾರತ- ಆಸ್ಟ್ರೇಲಿಯಾ ಕೊನೆಯ ನಾಲ್ಕನೇ ಟೆಸ್ಟ್ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?
India vs Australia 4th Test
Vinay Bhat
|

Updated on:Mar 04, 2023 | 8:55 AM

Share

ಭಾರತ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ (Australia) ತಂಡಕ್ಕೆ ಕೊನೆಗೂ ಶುಭಸುದ್ದಿ ಸಿಕ್ಕಿದೆ. ಕಳಪೆ ಬ್ಯಾಟಿಂಗ್​ನಿಂದ ಸತತ ಸೋಲು ಹಾಗೂ ಇಂಜುರಿಗೆ ತತ್ತರಿಸಿದ್ದ ಕಾಂಗರೂ ಪಡೆ ಕೊನೆಗೂ ಬಾರ್ಡರ್- ಗವಾಸ್ಕರ್ ಟ್ರೋಫಿಯ (Border-Gavaskar Trophy) ತೃತೀಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸೋಲಿನ ಸುಳಿಯಿಂದ ಹೊರಬಂದಿದೆ. 9 ವಿಕೆಟ್​ಗಳ ಅಮೋಘ ಜಯದೊಂದಿಗೆ ಸ್ಮಿತ್ ಪಡೆ ಈ ಬಾರಿಯ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಜಯ ಸಾಧಿಸಿದೆ. ಆದರೆ, ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಪ್ರದರ್ಶನ ತೋರಿ 2-0 ಅಂತರದಿಂದ ಗೆದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದೀಗ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ.

ಭಾರತ ಉಳಿದಿರುವ ಒಂದು ಪಂದ್ಯವನ್ನು ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೆ ಏರಲಿದೆ. ಇತ್ತ ಆಸೀಸ್ ಪಡೆಗೆ ಕೂಡ ಕೊನೆಯ ಟೆಸ್ಟ್ ಬಹುಮುಖ್ಯ. 1-2 ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾಕ್ಕೆ ಮಾನ ಉಳಿಸಿಕೊಳ್ಳಲು ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಬೇಕಿದೆ. ಹಾಗಿದ್ದರೆ ಕುತೂಹಲ ಕೆರಳಿಸಿರುವ ಭಾರತ- ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ಯಾವಾಗ ಆರಂಭವಾಗಲಿದೆ?, ಎಲ್ಲಿ ನಡೆಯಲಿದೆ? ಎಂಬುದನ್ನು ನೋಡೋಣ.

IND vs AUS: ಇದು ಸತ್ಯ.. ಅತಿ ಉದ್ದದ ಸಿಕ್ಸರ್ ಬಾರಿಸಿ ಪ್ರಶಸ್ತಿ ದೋಚಿದ ಪೂಜಾರ..!

ಇದನ್ನೂ ಓದಿ
Image
WPL 2023: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್​ಗೆ ಇಂದು ಚಾಲನೆ: ಗುಜರಾತ್-ಮುಂಬೈ ನಡುವೆ ಮೊದಲ ಪಂದ್ಯ
Image
IND vs AUS: ಟೀಂ ಇಂಡಿಯಾ ಖಾತೆಗೆ ಬೇಡದ ದಾಖಲೆಗಳನ್ನು ಹಾಕಿದ ಇಂದೋರ್ ಟೆಸ್ಟ್ ಸೋಲು..!
Image
IPL 2023: ತಿಂಗಳಿಗೂ ಮುಂಚೆಯೇ ಸಮರಾಭ್ಯಾಸ ಶುರು ಮಾಡಿದ ಸಿಎಸ್​ಕೆ; ಚೆನ್ನೈಗೆ ಧೋನಿ ಎಂಟ್ರಿ
Image
WPL 2023 GG Vs MI Live Streaming: ಮೊದಲ ಪಂದ್ಯದಲ್ಲಿ ಗುಜರಾತ್- ಮುಂಬೈ ಫೈಟ್; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಯಾವಾಗ ನಡೆಯಲಿದೆ?

ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 9 ರಿಂದ ಮಾರ್ಚ್ 13 ರವರೆಗೆ ನಡೆಯಲಿದೆ.

ನಾಲ್ಕನೇ ಟೆಸ್ಟ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಮೂರನೇ ಟೆಸ್ಟ್ ಪಂದ್ಯವು ಬೆಳಗ್ಗೆ 09:30 ಕ್ಕೆ ಆರಂಭವಾಗಲಿದೆ. ಒಂಬತ್ತು ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಇರಲಿದೆ.

ಕೊನೆಯ ಟೆಸ್ಟ್​ಗೆ ಪ್ರಧಾನಿ ಮೋದಿ-ಆಸ್ಟ್ರೇಲಿಯಾ ಪ್ರಧಾನಿ ಉಪಸ್ಥಿತಿ:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್​ ಉಪಸ್ಥಿತರಿರಲಿದ್ದಾರೆ ಎಂದು ವರದಿಯಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಅಹಮದಾಬಾದ್‌ ಕ್ರೀಡಾಂಗಣಕ್ಕೆ ತಮ್ಮ ಹೆಸರಿಟ್ಟ ಬಳಿಕ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಅಲ್ಲಿ ಪಂದ್ಯವೊಂದನ್ನು ವೀಕ್ಷಿಸಲಿದ್ದಾರೆ. ಪಂದ್ಯ ಆರಂಭಕ್ಕೆ ಒಂದು ವಾರವಿದ್ದರೂ ರಕ್ಷಣಾ ಪಡೆಗಳು ಕ್ರೀಡಾಂಗಣದಲ್ಲಿ ಈಗಿಂದಲೇ ತೀವ್ರ ತಪಾಸಣೆ ನಡೆಸುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 am, Sat, 4 March 23