IND vs AUS: 2 ಟೂರ್ನಿಯಲ್ಲಿ ಮಿಂಚಿದ ಉಮೇಶ್ ಯಾದವ್: ಟೀಮ್ ಇಂಡಿಯಾಗೆ ಕಂಬ್ಯಾಕ್

Mohammed Shami : ಶಮಿಯಲ್ಲಿ ​ ಕೋವಿಡ್-19 ಸೋಂಕಿನ ಲಕ್ಷಣಗಳು ಇರುವುದು ದೃಢಪಟ್ಟಿದ್ದು, ಹೀಗಾಗಿ ಅವರನ್ನು ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿದೆ. ಅಲ್ಲದೆ ಸಂಪೂರ್ಣ ಗುಣಮುಖರಾದ ಬಳಿಕವಷ್ಟೇ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿವೆ.

IND vs AUS: 2 ಟೂರ್ನಿಯಲ್ಲಿ ಮಿಂಚಿದ ಉಮೇಶ್ ಯಾದವ್: ಟೀಮ್ ಇಂಡಿಯಾಗೆ ಕಂಬ್ಯಾಕ್
Umesh yadav
Updated By: ಝಾಹಿರ್ ಯೂಸುಫ್

Updated on: Sep 18, 2022 | 11:24 AM

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾದಿಂದ ಪ್ರಮುಖ ವೇಗಿ ಮೊಹಮ್ಮದ್ ಶಮಿ (Mohammed Shami) ಹೊರಗುಳಿದಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿರುವ ಕಾರಣ ಶಮಿಯನ್ನು ತಂಡದಿಂದ ಕೈ ಬಿಡಲಾಗಿದೆ. ಶಮಿಯಲ್ಲಿ ​ ಕೋವಿಡ್-19 ಸೋಂಕಿನ ಲಕ್ಷಣಗಳು ಇರುವುದು ದೃಢಪಟ್ಟಿದ್ದು, ಹೀಗಾಗಿ ಅವರನ್ನು ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿದೆ. ಅಲ್ಲದೆ ಸಂಪೂರ್ಣ ಗುಣಮುಖರಾದ ಬಳಿಕವಷ್ಟೇ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿವೆ.

ಇತ್ತ ಒಂದು ವಾರದೊಳಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿರುವ ಟೀಮ್ ಇಂಡಿಯಾ ಇದೀಗ ಶಮಿಯ ಬದಲಿ ವೇಗದ ಬೌಲರ್ ಆಗಿ ಉಮೇಶ್ ಯಾದವ್ (Umesh Yadav) ಅವರನ್ನು ಆಯ್ಕೆ ಮಾಡಿದೆ. ವಿಶೇಷ ಎಂದರೆ ಉಮೇಶ್ ಯಾದವ್ ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ ಟಿ20 ಪಂದ್ಯವಾಡಿದ್ದು 2019 ರಲ್ಲಿ.

ಈ ವೇಳೆ ಭಾರತ ತಂಡದ ಪರ ಕೇವಲ 7 ಟಿ20 ಪಂದ್ಯಗಳನ್ನಾಡಿದ್ದ ಬಲಗೈ ವೇಗಿ ಪಡೆದಿರುವುದು ಕೇವಲ 9 ವಿಕೆಟ್​ಗಳು ಮಾತ್ರ.  ಇದಾದ ಬಳಿಕ ಟಿ20 ತಂಡದಲ್ಲಿ ಉಮೇಶ್ ಯಾದವ್​ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಶಮಿ ಸ್ಥಾನದಲ್ಲಿ ಅವಕಾಶ ಸಿಗಲು ಮುಖ್ಯ ಕಾರಣ ಐಪಿಎಲ್ ಮತ್ತು ಕೌಂಟಿ ಕ್ರಿಕೆಟ್​.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಕೆಂದರೆ ಈ ವರ್ಷ ನಡೆದ ಐಪಿಎಲ್​ನ ಮೆಗಾ ಹರಾಜಿನಲ್ಲಿ ಮೊದಲ ಸುತ್ತಿನಲ್ಲಿ ಉಮೇಶ್ ಯಾದವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು 1 ಕೋಟಿ ರೂ ಮೂಲ ಬೆಲೆಗೆ ಖರೀದಿಸಿತು. ಹೀಗೆ ಸಿಕ್ಕ ಅವಕಾಶದಲ್ಲಿ ಮಿಂಚಿದ್ದ ಉಮೇಶ್ ಯಾದವ್ ಪವರ್‌ಪ್ಲೇಯಲ್ಲಿ ವಿಕೆಟ್​ ಟೇಕರ್ ಆಗಿ ಗುರುತಿಸಿಕೊಂಡಿದ್ದರು. ಅಲ್ಲದೆ ತಮ್ಮ ವೇಗ ಮತ್ತು ಸ್ವಿಂಗ್‌ ಮೋಡಿಯೊಂದಿಗೆ ಕೆಕೆಆರ್ ಪರ ಕೇವಲ 12 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿ ಮಿಂಚಿದ್ದರು.

ಇದಾದ ಬಳಿಕ ಉಮೇಶ್ ಯಾದವ್ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಯಲ್ ಲಂಡನ್ ಒನ್​ಡೇ ಕಪ್​ನಲ್ಲಿ ಮಿಡ್ಲ್‌ಸೆಕ್ಸ್ ಪರ ತಮ್ಮ ಕೈಚಳಕ ತೋರಿಸಿದ್ದ ಟೀಮ್ ಇಂಡಿಯಾ ವೇಗಿ ಕೇವಲ 7 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ತಂಡದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.

ಈ ಎರಡೂ ಸೀಮಿತ ಓವರ್​ಗಳ ಟೂರ್ನಿಯು ಉಮೇಶ್ ಯಾದವ್ ಪಾಲಿಗೆ ಅದೃಷ್ಟದ ಬಾಗಿಲು ತೆರೆದಿದೆ. ಏಕೆಂದರೆ 2019 ರ ಬಳಿಕ ಟೀಮ್ ಇಂಡಿಯಾ ಟಿ20 ತಂಡದಿಂದ ಅವಕಾಶ ವಂಚಿತರಾಗಿದ್ದ ಉಮೇಶ್ ಯಾದವ್ ಇದೀಗ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ಹೊಸ್ತಿಲಲ್ಲೇ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ:

  1. ಸೆಪ್ಟೆಂಬರ್ 20- ಮೊದಲ ಟಿ20 ಪಂದ್ಯ- ಮೊಹಾಲಿ
  2. ಸೆಪ್ಟೆಂಬರ್ 23- 2ನೇ ಟಿ20 ಪಂದ್ಯ- ನಾಗ್ಪುರ
  3. ಸೆಪ್ಟೆಂಬರ್ 25- 3ನೇ ಟಿ20 ಪಂದ್ಯ- ಹೈದರಾಬಾದ್