IND vs BAN: ಬ್ಯಾಟ್​ನಿಂದ ವಿಕೆಟ್​ಗೆ ಬಡಿದು ಅಂಪೈರ್ ವಿರುದ್ಧ ಗರಂ ಆದ ಹರ್ಮನ್! ವಿಡಿಯೋ ನೋಡಿ

Harmanpreet Kaur: ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎಸಗಿದ ಕೃತ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಲ್ಲದೆ ಪಂದ್ಯದ ಬಳಿಕ ಕೌರ್ ನೀಡಿದ ಕಟುವಾದ ಹೇಳಿಕೆ ಅವರನ್ನು ಸಂಕಷ್ಟಕ್ಕೆ ದೂಡಿದೆ.

IND vs BAN: ಬ್ಯಾಟ್​ನಿಂದ ವಿಕೆಟ್​ಗೆ ಬಡಿದು ಅಂಪೈರ್ ವಿರುದ್ಧ ಗರಂ ಆದ ಹರ್ಮನ್! ವಿಡಿಯೋ ನೋಡಿ
ಹರ್ಮನ್‌ಪ್ರೀತ್ ಕೌರ್
Follow us
ಪೃಥ್ವಿಶಂಕರ
|

Updated on:Jul 23, 2023 | 7:01 AM

ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ (India vs Bangladesh) ಸಿಹಿ- ಕಹಿಯೊಂದಿಗೆ ತವರಿಗೆ ವಾಪಸ್ಸಾಗುತ್ತಿದೆ. ಏಕದಿನ ಸರಣಿಗೂ ಮುನ್ನ ನಡೆದಿದ್ದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದ ವನಿತಾ ಪಡೆ, ಏಕದಿನ ಸರಣಿಯನ್ನು 1-1 ರಿಂದ ಸಮಬಲಗೊಳಿಸಿ, ಸರಣಿಯನ್ನು ಆತಿಥೇಯ ದೇಶದೊಂದಿಗೆ ಹಂಚಿಕೊಂಡಿದೆ. ಆದರೆ ಈ ಪ್ರವಾಸಕ್ಕೂ ಮುನ್ನ ಹರ್ಮನ್‌ಪ್ರೀತ್ ಪಡೆಯ ಮೇಲಿಟ್ಟಿದ್ದ ಬೆಟ್ಟದಷ್ಟು ನಿರೀಕ್ಷೆಗಳು ಹುಸಿಯಾಗಿವೆ. ಬಾಂಗ್ಲಾ ತಂಡ ತನ್ನ ತವರಿನ ಲಾಭ ಪಡೆಯಿತ್ತಾದರೂ, ಈ ಪ್ರವಾಸದಲ್ಲಿ ಟೀಂ ಇಂಡಿಯಾದ (Team India) ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಜುಲೈ 22 ರಂದು ನಡೆದ ಸರಣಿ ನಿರ್ಧಾರಕ ಏಕದಿನ ಪಂದ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಕೊನೆಯ ಓವರ್​ನಲ್ಲಿ ಕೇವಲ 1 ರನ್ ಕಲೆಹಾಕಲಾಗದೆ ಟೀಂ ಇಂಡಿಯಾ ಪಂದ್ಯವನ್ನು ಟೈ ಮಾಡಿಕೊಂಡಿತು. ಇದು ಸಾಲದೆಂಬಂತೆ ಈ ಪಂದ್ಯದಲ್ಲಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎಸಗಿದ ಕೃತ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಲ್ಲದೆ ಪಂದ್ಯದ ಬಳಿಕ ಕೌರ್ ನೀಡಿದ ಕಟುವಾದ ಹೇಳಿಕೆ ಅವರನ್ನು ಸಂಕಷ್ಟಕ್ಕೆ ದೂಡಿದೆ.

ವಾಸ್ತವವಾಗಿ ಮೀರ್‌ಪುರದಲ್ಲಿ ನಡೆದ ಮೂರನೇ ಏಕದಿನ ಪಂದ್ಯ ಬಹಳ ರೋಚಕವಾಗಿತ್ತು. ಮೊದಲಿಗೆ ಈ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಏಕದಿನ ಶತಕ ದಾಖಲಾಯಿತು. ಇದಾದ ಬಳಿಕ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ತಂಡ ಗೆಲುವಿನ ಅವಕಾಶವನ್ನು ಕಳೆದುಕೊಂಡು ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಟೈನಲ್ಲಿ ಕೊನೆಗೊಳಿಸಿತು.

WPL 2023: 18 ಎಸೆತಗಳಲ್ಲಿ ಅರ್ಧಶತಕ! ಆರ್​ಸಿಬಿ ಹೈರಾಣ; ಹರ್ಮನ್‌ಪ್ರೀತ್ ದಾಖಲೆ ಉಡೀಸ್

ಹರ್ಮನ್‌ಪ್ರೀತ್ ಹತಾಶೆ

ಪಂದ್ಯ ಟೈ ಆದ ಪರಿಣಾಮ ಭಾರತ ತಂಡ ಏಕದಿನ ಸರಣಿಯನ್ನು ಆತಿಥೇಯ ದೇಶದೊಂದಿಗೆ ಹಂಚಿಕೊಳ್ಳಬೇಕಾಯಿತು. ಈ ನಡುವೆ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ತಾಳ್ಮೆ ಕಳೆದುಕೊಂಡಿದ್ದನ್ನು ನೋಡಿದ ಪ್ರೇಕ್ಷಕರು ಮೈದಾನದಲ್ಲಿ ಕ್ಷಣಕಾಲ ಅಚ್ಚರಿಗೊಳಗಾದರು. ವಾಸ್ತವವಾಗಿ ಬಾಂಗ್ಲಾ ಬೌಲರ್ ನಹಿದಾ ಅಖ್ತರ್ ಎಸೆತದಲ್ಲಿ ಹರ್ಮನ್‌ಪ್ರೀತ್ ವಿರುದ್ಧ ಔಟ್​ಗೆ ಮನವಿ ಸಲ್ಲಿಸಲಾಯಿತು. ಬಾಂಗ್ಲಾ ತಂಡದ ಮನವಿ ಪುರಸ್ಕರಿಸಿದ ಫಿಲ್ಡ್ ಅಂಪೈರ್ ಕೌರ್ ಕ್ಯಾಚ್ ಔಟ್ ಎಂದು ನಿರ್ಧಾರ ಪ್ರಕಟಿಸಿದರು. ಆದರೆ ಚೆಂಡು ಹರ್ಮನ್ ಅವರ ಪ್ಯಾಡ್‌ಗೆ ತಾಗಿ ಸ್ಲಿಪ್ ಫೀಲ್ಡರ್‌ಗೆ ಹೋಗಿತ್ತು.

ಹೀಗಾಗಿ ಅಂಪೈರ್ ಔಟ್ ನೀಡಲು ಬೆರಳು ಎತ್ತಿದ ತಕ್ಷಣ ಅಚ್ಚರಿಗೊಳಗಾದ ಹರ್ಮನ್‌ಪ್ರೀತ್, ಕೋಪದಲ್ಲಿ ತಮ್ಮ ಬ್ಯಾಟ್ ಅನ್ನು ವಿಕೆಟ್‌ಗೆ ಹೊಡೆದರು. ಇದರಿಂದಾಗಿ ಸ್ಟಂಪ್ ಚದುರಿದವು. ಇಲ್ಲಿಗೆ ನಿಲ್ಲಿಸದ ಹರ್ಮನ್ ಪೆವಿಲಿಯನ್​ಗೆ ಮರಳುವ ವೇಳೆ ಅಂಪೈರ್‌ ಎದುರು ವಾಕ್ಸಮರ ನಡೆಸಿದರು.

ಸರಣಿಯಲ್ಲಿ ಡಿಆರ್‌ಎಸ್ ಇರಲಿಲ್ಲ

ಈ ಗಲಾಟೆಗೆ ಪ್ರಮುಖ ಕಾರಣವೆಂದರೆ ಸರಣಿಯಲ್ಲಿ ಡಿಆರ್‌ಎಸ್ ಸೌಲಭ್ಯ ಇಲ್ಲದಿರುವುದು. ಈ ಕಾರಣಕ್ಕಾಗಿ ಹರ್ಮನ್‌ಪ್ರೀತ್‌ಗೆ ಡಿಆರ್‌ಎಸ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಅಂಪೈರ್ ನಿರ್ಧಾರವನ್ನು ಬದಲಾಯಿಸುವ ಆಯ್ಕೆ ಇರಲಿಲ್ಲ.

ಅಂಪೈರಿಂಗ್ ಮೇಲೆ ಹರ್ಮನ್ ಗರಂ

ತಮ್ಮ ಅಸಮಾಧಾನವನ್ನು ಪಂದ್ಯ ಮುಗಿದ ಬಳಿಕವೂ ಹೊರಹಾಕಿದ ಕೌರ್, ಈ ಸರಣಿಯಲ್ಲಿ ಅಂಪೈರಿಂಗ್‌ನ ಗುಣಮಟ್ಟ ಉತ್ತಮವಾಗಿಲ್ಲ. ಅನೇಕ ನಿರ್ಧಾರಗಳು ಸಂಪೂರ್ಣವಾಗಿ ಕಳಪೆಯಾಗಿವೆ. ಟೀಂ ಇಂಡಿಯಾ ಮತ್ತೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಇಂತಹ ನಿರ್ಧಾರಗಳಿಗೆ ಸಿದ್ದವಾಗಿ ಬರಲಿದೆ ಎಂದು ಹೇಳಿದರು.

ಹರ್ಮನ್‌ಪ್ರೀತ್‌ಗೆ ನಿಷೇಧ?

ಇದೀಗ ಅಂಪೈರ್ ಹಾಗೂ ಅಂಪೈರಿಂಗ್ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಟೀಂ ಇಂಡಿಯಾ ನಾಯಕಿಯ ವರ್ತನೆಯ ಬಗ್ಗೆ ಮ್ಯಾಚ್ ರೆಫರಿ ಐಸಿಸಿಗೆ ಯಾವ ವರದಿ ನೀಡುತ್ತಾರೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಐಸಿಸಿ ನಿಯಮದ ಪ್ರಕಾರ ಯಾರೂ ಸಹ ಕೋಪದಲ್ಲಿ ಉಪಕರಣಗಳನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ. ಅಷ್ಟೇ ಅಲ್ಲ, ಆಟಗಾರರು ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದನ್ನು ಮತ್ತು ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ಸಹ ನಿಷೇಧಿಸಲಾಗಿದೆ. ಆದರೆ ಹರ್ಮನ್‌ಪ್ರೀತ್ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದು, ಅವರಿಗೆ ಐಸಿಸಿ ಯಾವ ಶಿಕ್ಷೆಯನ್ನು ವಿಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದಿನ ಘಟನಾವಳಿಗಳನ್ನು ನೆನೆಯುವುದಾದರೆ, ಇಂತಹ ನಿಯಮ ಉಲ್ಲಂಘನೆಗೆ ಪಂದ್ಯ ಶುಲ್ಕವನ್ನು ದಂಡವಾಗಿ ಪಾವತಿಸುವುದರೊಂದಿಗೆ ಆ ಪ್ಲೇಯರ್​ಗೆ ಪಂದ್ಯದಿಂದ ನಿಷೇಧ ಕೂಡ ಹೇರಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:55 am, Sun, 23 July 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್