IND vs WI Test 3rd Day: ವಿಂಡೀಸ್ ಪಡೆಯಿಂದ ದಿಟ್ಟ ಪ್ರತ್ಯುತ್ತರ; ನಿರ್ಜೀವ ಪಿಚ್​ನಲ್ಲಿ ಭಾರತದ ಬೌಲರ್​ಗಳು ಹೈರಾಣ

India vs West Indies 2nd Test: ಮೂರನೇ ದಿನದ ಅಂತ್ಯದ ವೇಳೆಗೆ, ವೆಸ್ಟ್ ಇಂಡೀಸ್ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್ ಕಲೆಹಾಕಿದೆ. ಇದರೊಂದಿಗೆ ಟೀಂ ಇಂಡಿಯಾ ಹೇರಬಹುದಾಗಿದ್ದ ಫಾಲೋ-ಆನ್‌ನಿಂದ ಬಹುತೇಕ ಪಾರಾಗಿದೆ.

IND vs WI Test 3rd Day: ವಿಂಡೀಸ್ ಪಡೆಯಿಂದ ದಿಟ್ಟ ಪ್ರತ್ಯುತ್ತರ; ನಿರ್ಜೀವ ಪಿಚ್​ನಲ್ಲಿ ಭಾರತದ ಬೌಲರ್​ಗಳು ಹೈರಾಣ
ಭಾರತ ತಂಡ
Follow us
ಪೃಥ್ವಿಶಂಕರ
|

Updated on:Jul 23, 2023 | 5:39 AM

ಮೊದಲ ಟೆಸ್ಟ್​ನಲ್ಲಿ ಭಾರತಕ್ಕೆ ಸುಲಭ ತುತ್ತಾಗಿದ್ದ ವೆಸ್ಟ್ ಇಂಡೀಸ್ (India vs West Indies), ಪೋರ್ಟ್ ಆಫ್ ಸ್ಪೇನ್​ನಲ್ಲಿ (Port of Spain) ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೋರಾಟದ ಮನೋಭಾವ ಪ್ರದರ್ಶಿಸಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯವನ್ನು ನಾಲ್ಕನೇ ದಿನಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ವಿಂಡೀಸ್ ಬ್ಯಾಟ್ಸ್‌ಮನ್‌ಗಳು ದಿಟ್ಟ ಪ್ರದರ್ಶನ ಟೀಂ ಇಂಡಿಯಾ (Team India)ವನ್ನು ಹೈರಾಣಾಗಿಸಿದರೆ, ಮತ್ತೊಂದೆಡೆ ಮಳೆ ಮತ್ತು ನಿರ್ಜೀವ ಪಿಚ್ ಭಾರತೀಯ ಬೌಲರ್‌ಗಳಿಗೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ, ಮೂರನೇ ದಿನದ ಅಂತ್ಯದ ವೇಳೆಗೆ, ವೆಸ್ಟ್ ಇಂಡೀಸ್ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್ ಕಲೆಹಾಕಿದೆ. ಇದರೊಂದಿಗೆ ಟೀಂ ಇಂಡಿಯಾ ಹೇರಬಹುದಾಗಿದ್ದ ಫಾಲೋ-ಆನ್‌ನಿಂದ ಬಹುತೇಕ ಪಾರಾಗಿದೆ.

ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಮೊದಲೆರಡು ದಿನ ಬೌಲರ್‌ಗಳಿಗೆ ಯಾವುದೇ ನೆರವು ಸಿಗಲಿಲ್ಲ. ಮೂರನೇ ದಿನ ಪಿಚ್​ನಲ್ಲಿ ಬದಲಾವಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ಕೆಲವು ಅದ್ಭುತ ಎಸೆತಗಳು ಮತ್ತು ಫೀಲ್ಡಿಂಗ್‌ನ ಆಧಾರದ ಮೇಲೆ ಟೀಂ ಇಂಡಿಯಾ ಈ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಮಳೆಯು ದಿನವಿಡೀ ಎರಡು ಬಾರಿ ಆಟಕ್ಕೆ ಅಡ್ಡಿಪಡಿಸಿತು, ಇದರಿಂದಾಗಿ ದಿನದ ಸಂಪೂರ್ಣ 90 ಓವರ್‌ಗಳ ಬದಲಿಗೆ 67 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು.

IND vs WI: ಕೊಹ್ಲಿ ಶತಕ, 438 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ವಿಂಡೀಸ್ ದಿಟ್ಟ ಉತ್ತರ

ವಿಕೆಟ್ ಖಾತೆ ತೆರೆದ ಮುಖೇಶ್

ಎರಡನೇ ದಿನದ ಕೊನೆಯ ಸೆಷನ್​ನಲ್ಲಿ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದು 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿತ್ತು. ಇಲ್ಲಿಂದ ಮೂರನೇ ದಿನದಾಟವನ್ನು ಮುಂದುವರೆಸಿದ ವಿಂಡೀಸ್​ ಪರ ನಾಯಕ ಕ್ರೇಗ್ ಬ್ರಾಥ್‌ವೈಟ್ ಮತ್ತು ಕಿರ್ಕ್ ಮೆಕೆಂಜಿ ಭಾರತದ ಬೌಲರ್‌ಗಳಿಗೆ ಸುಲಭವಾಗಿ ವಿಕೆಟ್ ಪಡೆಯಲು ಅವಕಾಶ ನೀಡಲಿಲ್ಲ. ಈ ಅವಧಿಯಲ್ಲಿ ಬ್ರಾಥ್‌ವೈಟ್ ತಮ್ಮ 29ನೇ ಅರ್ಧಶತಕವನ್ನು ಪೂರ್ಣಗೊಳಿಸಿದರೆ, ಮೊದಲ ಸೆಷನ್‌ನಲ್ಲಿ ವೇಗಿ ಮುಖೇಶ್ ಕುಮಾರ್ ಅವರು ಮೆಕೆಂಜಿ (32) ಅವರ ವಿಕೆಟ್‌ ಪಡೆಯುವ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಬ್ರಾಥ್‌ವೈಟ್ ಏಕಾಂಗಿ ಹೋರಾಟ

ಮೆಕೆಂಜಿ ಔಟಾದ ಕೂಡಲೇ ಮಳೆ ಸುರಿಯಲ್ಲಾರಂಭಿಸಿದರಿಂದ ಆಟವನ್ನು ಕೆಲ ಸಮಯ ನಿಲ್ಲಿಸಬೇಕಾಯಿತು. ಸುಮಾರು ಕಾಲು ಗಂಟೆ ಕಾದ ನಂತರ ಎರಡನೇ ಸೆಷನ್ ಆರಂಭವಾಯಿತು. ಈ ಸೆಷನ್​ನಲ್ಲಿ ವಿಂಡೀಸ್ ಬ್ಯಾಟ್ಸ್ಮನ್​ಗಳು ರಕ್ಷಣಾತ್ಮಕ ಬ್ಯಾಟಿಂಗ್​ಗೆ ಮುಂದಾದರು. ಸುಲಭವಾಗಿ ವಿಕೆಟ್ ನೀಡದಿದ್ದರೂ ಮುಕ್ತವಾಗಿ ರನ್ ಗಳಿಸಲಿಲ್ಲ. ಆದರೆ ಸುದೀರ್ಘ ಕಾಯುವಿಕೆಯ ನಂತರ, ರವಿಚಂದ್ರನ್ ಅಶ್ವಿನ್ ಅವರ ಸುಂದರವಾದ ಆಫ್ ಬ್ರೇಕ್ ಬ್ರಾಥ್‌ವೈಟ್ (75) ರ ವಿಕೆಟ್ ಉರುಳಿಸುವುದರೊಂದಿಗೆ 2ನೇ ಸೆಷನ್ ಅಂತ್ಯವಾಯಿತು.

ರಹಾನೆ ಚಾಣಾಕ್ಷತನದ ಫಿಲ್ಡಿಂಗ್

ಇನ್ನು ಮೂರನೇ ಸೆಷನ್​ ಆರಂಭಿಸಿದ ಟೀಂ ಇಂಡಿಯಾಕ್ಕೆ ರವೀಂದ್ರ ಜಡೇಜಾ 4ನೇ ವಿಕೆಟ್ ತಂದುಕೊಟ್ಟರು. ಉಪನಾಯಕ ಅಜಿಂಕ್ಯ ರಹಾನೆ ಸ್ಲಿಪ್​ನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಬ್ಲಾಕ್​ವುಡ್​ರನ್ನು ಪೆವಿಲಿಯನ್‌ಗಟ್ಟಿದರು. ಇಲ್ಲಿಂದ, ಅಲಿಕ್ ಅಥಾನಾಜ್ ಮತ್ತು ಜೋಶುವಾ ಡಿ ಸಿಲ್ವಾ ಉತ್ತಮ ಜೊತೆಯಾಟ ಕಟ್ಟಿದರು. ಆದರೆ, 10 ರನ್ ಗಳಿಸಿ ಆಡುತ್ತಿದ್ದ ಡಿ ಸಿಲ್ವಾರನ್ನು ಮೊಹಮ್ಮದ್ ಸಿರಾಜ್ ಬಲಿ ಹಾಕಿದರು.

ಮತ್ತೊಮ್ಮೆ ಆಟಕ್ಕೆ ತೊಂದರೆ ನೀಡಿದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿಯಿತು. ಪಂದ್ಯ ಪುನರಾರಂಭಗೊಂಡ ಬಳಿಕ ಸುಮಾರು 50 ನಿಮಿಷಗಳ ಆಟ ನಡೆಯಿತು. ಇದರಲ್ಲಿ ಅಥಾನಾಜ್ (ಅಜೇಯ 37) ಮತ್ತು ಜೇಸನ್ ಹೋಲ್ಡರ್ (ಅಜೇಯ 11) ಭಾರತಕ್ಕೆ ವಿಕೆಟ್ ಪಡೆಯಲು ಅವಕಾಶ ನೀಡಲಿಲ್ಲ. ಅಂತಿಮವಾಗಿ, ಮಂದ ಬೆಳಕಿನಿಂದಾಗಿ, ಅಂಪೈರ್‌ಗಳು ದಿನದ ಆಟವನ್ನು ಅಂತ್ಯಗೊಳಿಸಿದರು. ಫಾಲೋ-ಆನ್ ಉಳಿಸಲು ವಿಂಡೀಸ್ ತಂಡ ಕೇವಲ 10 ರನ್‌ಗಳ ಅಂತರದಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 am, Sun, 23 July 23

‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ