IND A vs PAK A: ಭಾರತ-ಪಾಕಿಸ್ತಾನ್ ಮುಖಾಮುಖಿ: ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್
India A vs Pakistan A, Predicted Playing XI : ಭಾರತ ಎ ಹಾಗೂ ಪಾಕಿಸ್ತಾನ್ ಎ ತಂಡಗಳ ನಡುವಣ ಏಷ್ಯಾಕಪ್ ಫೈನಲ್ ಪಂದ್ಯವು ನಾಳೆ (ಜುಲೈ 23) ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.
India A vs Pakistan A: ಎಮರ್ಜಿಂಗ್ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಎ ಹಾಗೂ ಪಾಕಿಸ್ತಾನ್ ಎ ತಂಡಗಳು ಮುಖಾಮುಖಿಯಾಗಲಿವೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಭಾನುವಾರ (ಜುಲೈ 23) ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನಕ್ಕೆ ಸೋಲುಣಿಸಿತ್ತು. ಪಾಕ್ ವಿರುದ್ಧ 8 ವಿಕೆಟ್ಗಳಿಂದ ಗೆದ್ದು ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಿತ್ತು. ಇದೀಗ ಏಷ್ಯಾದ ಸಾಂಪ್ರದಾಯಿಕ ಎದುರಾಳಿಗಳು ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ. ಹೀಗಾಗಿ ನಾಳಿನ ಪಂದ್ಯದಲ್ಲೂ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಡೌಟ್:
ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ್ ವಿರುದ್ಧ 51 ರನ್ಗಳಿಂದ ಗೆದ್ದು ಫೈನಲ್ಗೆ ಪ್ರವೇಶಿಸಿದೆ. ಅತ್ತ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ಫೈನಲ್ ಪಂದ್ಯದಲ್ಲೂ ಇದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ 60 ರನ್ಗಳಿಂದ ಜಯ ಸಾಧಿಸಿರುವ ಪಾಕಿಸ್ತಾನ್ ಫೈನಲ್ನಲ್ಲೂ ಅದೇ ಆಡುವ ಬಳಗವನ್ನು ಮುಂದುವರೆಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ.
ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಅಭಿಷೇಕ್ ಶರ್ಮಾ , ನಿಕಿನ್ ಜೋಸ್ , ಯಶ್ ಧುಲ್ (ನಾಯಕ) , ರಿಯಾನ್ ಪರಾಗ್ , ನಿಶಾಂತ್ ಸಿಂಧು , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಹರ್ಷಿತ್ ರಾಣಾ , ಯುವರಾಜ್ ಸಿಂಗ್ ದೋಡಿಯಾ , ರಾಜವರ್ಧನ್ ಹಂಗರ್ಗೇಕರ್.
ಇದನ್ನೂ ಓದಿ: ಭಾರತ-ಪಾಕ್ ನಡುವೆ ಫೈನಲ್ ಫೈಟ್: ಯಾವ ಚಾನೆಲ್ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
ಪಾಕಿಸ್ತಾನ್ ಎ ಪ್ಲೇಯಿಂಗ್ 11: ಸೈಮ್ ಅಯೂಬ್ , ತಯ್ಯಬ್ ತಾಹಿರ್ , ಮೊಹಮ್ಮದ್ ಹ್ಯಾರಿಸ್ (ನಾಯಕ) , ಸಾಹಿಬ್ಜಾದಾ ಫರ್ಹಾನ್ , ಒಮೈರ್ ಯೂಸುಫ್ , ಖಾಸಿಮ್ ಅಕ್ರಮ್ , ಮುಬಾಸಿರ್ ಖಾನ್ , ಅಮದ್ ಬಟ್ , ಮೊಹಮ್ಮದ್ ವಾಸಿಮ್ ಜೂನಿಯರ್ , ಅರ್ಷದ್ ಇಕ್ಬಾಲ್ , ಸುಫಿಯಾನ್ ಮುಖೀಮ್.
Published On - 9:01 pm, Sat, 22 July 23