ಸುಮಾರು 2 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಹಳೆಯ ಆಟದ ಮೂಲಕ ಮತ್ತೊಮ್ಮೆ ತಾನು ಟೆಸ್ಟ್ ಕ್ರಿಕೆಟ್ನಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಸಾಭೀತುಪಡಿಸಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ 5 ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಪಂತ್ 39 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದಾಗ್ಯೂ ಪಂತ್ ತಮಗೆ ಸಿಕ್ಕ ಉತ್ತಮ ಆರಂಭವನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಸಿಕ್ಕ ಎರಡೆರಡು ಜೀವದಾನಗಳನ್ನು ಸರಿಯಾಗಿ ಬಳಸಿಕೊಳ್ಳದ ಪಂತ್, ವಿರಾಟ್ ಕೊಹ್ಲಿ ಮಾಡಿದ್ದ ತಪ್ಪನೇ ಪುನರಾವರ್ತಿಸಿ ಪೆವಿಲಿಯನ್ ಸೇರಿಕೊಂಡರು.
2022 ರ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದ ಪಂತ್, ತಮ್ಮ ವೇಗದ ಬ್ಯಾಟಿಂಗ್ ಮೂಲಕ ಸ್ಕೋರ್ ಬೋರ್ಡ್ಗೆ ವೇಗ ನೀಡುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ಜೈಸ್ವಾಲ್ ಅವರೊಂದಿಗೆ 60 ರನ್‌ಗಳ ಪ್ರಮುಖ ಜೊತೆಯಾಟವನ್ನು ಮಾಡಿದರು. ಈ ಸಮಯದಲ್ಲಿ, ಪಂಗತ್ಗೆ ಎರಡು ಜೀವದಾನಗಳು ಸಿಕ್ಕವು. ಆದರೆ ಸಿಕ್ಕ ಜೀವದಾನಗಳನ್ನು ಬಳಸಿಕೊಳ್ಳಲು ವಿಫಲರಾದ ಪಂತ್, ವಿರಾಟ್ ಮಾಡಿದ ತಪ್ಪನ್ನೇ ಮಾಡಿ 39 ರನ್ಗಳ ವೈಯಕ್ತಿಕ ಸ್ಕೋರ್ನಲ್ಲಿ ಔಟಾದರು. ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದ ಮಹಮೂದ್ ಅವರೇ ಪಂತ್ಗೂ ಖೆಡ್ಡ ತೊಡಿದರು. ಇತ್ತ ಕೊಹ್ಲಿಯಂತೆಯೇ 4ನೇ ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಆಡುವ ಯತ್ನದಲ್ಲಿ ಪಂತ್, ವಿಕೆಟ್ ಕೀಪರ್ ಲಿಟನ್ ದಾಸ್ಗೆ ಕ್ಯಾಚ್ ನೀಡಿದರು.
ಇದಕ್ಕೂ ಮುನ್ನ ಪಂತ್ 21 ಮತ್ತು 27 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಎರಡು ಜೀವದಾನಗಳನ್ನು ಪಡೆದಿದ್ದರು. ಇದರ ಹೊರತಾಗಿಯೂ, ಆಟದಲ್ಲಿ ತಾಳ್ಮೆ ತೊರದ ಪಂತ್, ಆಕ್ರಮಣಕಾರಿ ಹೊಡೆತಗಳನ್ನು ಆಡುವುದನ್ನು ಮುಂದುವರೆಸಿದರು. ಇದರ ಪರಿಣಾಮವಾಗಿ ಪಂತ್ ಬೇಗನೇ ವಿಕೆಟ್ ಕಳೆದುಕೊಳ್ಳಬೇಕಾಯಿತು. ಆದರೆ, ಔಟಾದ ಬಳಿಕ ಪಂತ್ ತನ್ನ ಹೊಡೆತದ ಬಗ್ಗೆ ತಾವೇ ವಿಷಾದ ವ್ಯಕ್ತಪಡಿಸಿದರು. ಔಟಾದ ಬಳಿಕ ಪಂತ್, ಕೋಪದಿಂದ ತಮ್ಮ ಬ್ಯಾಡ್ಗೆ ತಮ್ಮ ಬ್ಯಾಟ್‌ನಿಂದ ಜೋರಾಗಿ ಹೊಡೆದುಕೊಳ್ಳಲಾರಂಭಿಸಿದರು.
ಮೇಲೆ ಹೇಳಿದಂತೆ ರಿಷಬ್ ಪಂತ್ 9 ತಿಂಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಔಟಾದ ನಂತರ ಕ್ರೀಸ್ಗೆ ಬರುತ್ತಿದ್ದ ಪಂತ್ಗೆ ಚೆಪಾಕ್‌ನಲ್ಲಿ ಪ್ರೇಕ್ಷಕರು ಅದ್ಧೂರಿ ಸ್ವಾಗತ ನೀಡಿದರು. ಇದಾದ ಬಳಿಕ ತಮ್ಮ ಹಳೆಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಪಂತ್ 52 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರು. 3 ವಿಕೆಟ್ ಉರುಳಿದರೂ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದ ಪಂತ್, ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಪಂತ್ ಅವರ ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ