IND vs BAN: ಭಾರತಕ್ಕೆ ಅಶ್ವಿನ್- ಜಡೇಜಾ ಆಸರೆ; ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 339/6

IND vs BAN: ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದೆ. ದಿನದಾಟದಂತ್ಯಕ್ಕೆ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ. ಬರೋಬ್ಬರಿ 195 ರನ್​ಗಳ ಜೊತೆಯಾಟ ಹಂಚಿಕೊಂಡ ಅಶ್ವಿನ್ ಹಾಗೂ ಜಡೇಜಾ ಮೊದಲ ದಿನದಾಟದ ಹೀರೋಗಳೆನಿಸಿಕೊಂಡರು.

ಪೃಥ್ವಿಶಂಕರ
|

Updated on:Sep 19, 2024 | 5:41 PM

ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದೆ. ದಿನದಾಟದಂತ್ಯಕ್ಕೆ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ. ಬರೋಬ್ಬರಿ 195 ರನ್​ಗಳ ಜೊತೆಯಾಟ ಹಂಚಿಕೊಂಡ ಅಶ್ವಿನ್ ಹಾಗೂ ಜಡೇಜಾ ಮೊದಲ ದಿನದಾಟದ ಹೀರೋಗಳೆನಿಸಿಕೊಂಡರು.

1 / 7
ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಯಿತು. ತಂಡದ ಮೊತ್ತ 14 ರನ್​ಗಳಿರುವಾಗ ನಾಯಕ ರೋಹಿತ್ ಶರ್ಮಾ ಕೇವಲ 6 ರನ್ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರ ಬಂದ ಶುಭ್​ಮನ್​ ಗಿಲ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

2 / 7
ಈ ವೇಳೆ ಬರೋಬ್ಬರಿ 9 ತಿಂಗಳ ನಂತರ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅದೆಲ್ಲವನ್ನು ಹುಸಿ ಮಾಡಿದ ಕೊಹ್ಲಿ, ರೋಹಿತ್​ರಂತೆ ಕೇವಲ 6 ರನ್ ಬಾರಿಸಿ ಔಟಾದರು.  ಆದರೆ ಆ ಬಳಿಕ ಜೊತೆಯಾದ ಪಂತ್ ಹಾಗೂ ಜೈಸ್ವಾಲ್ ತಂಡದ ಇನ್ನಿಂಗ್ಸ್ ಕಟ್ಟಿದರು.

3 / 7
ಈ ಇಬ್ಬರು ಆಟಗಾರರು ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ರಿಷಬ್ ಪಂತ್ 39 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, 118 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 56 ರನ್​ಗಳ ಅತ್ಯಮೂಲ್ಯ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್ ಪೆವಿಲಿಯನ್‌ ಸೇರಿಕೊಂಡರು.

4 / 7
ನಂತರ ಬಂದ ಕನ್ನಡಿಗ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಕ್ರೀಸ್​ನಲ್ಲಿ ಸಾಕಷ್ಟು ಸಮಯ ಕಳೆದ ರಾಹುಲ್ 52 ಎಸೆತಗಳಲ್ಲಿ 12 ರನ್​ ಬಾರಿಸಿ ಬ್ಯಾಟ್ ಎತ್ತಿಟ್ಟರು. ಹೀಗಾಗಿ 144 ರನ್​ಗಳಿಗೆ ಟೀಂ ಇಂಡಿಯಾ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

5 / 7
ಆದರೆ ಇಲ್ಲಿಂದ ಜೊತೆಯಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅಜೇಯ 195 ರನ್​ಗಳ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ವೇಳೆ ಅಶ್ವಿನ್ 112 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಬೌಂಡರಿ ಸಹಿತ ಅಜೇಯ 102 ರನ್ ಕಲೆಹಾಕಿದರೆ, ಜಡೇಜಾ ಕೂಡ 117 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 86 ರನ್ ಬಾರಿಸಿದ್ದಾರೆ.

6 / 7
ಇನ್ನು ಬಾಂಗ್ಲಾದೇಶ ಪರ ಬೌಲಿಂಗ್​ನಲ್ಲಿ ಮಿಂಚಿದ ಯುವ ವೇಗದ ಬೌಲರ್ ಹಸನ್ ಮಹಮೂದ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್​ಮನ್ ಗಿಲ್, ರಿಷಬ್ ಸೇರಿದಂತೆ ನಾಲ್ವರ ವಿಕೆಟ್ ಉರುಳಿಸಿದರು. ಉಳಿದಂತೆ ನಹಿದ್ ರಾಣಾ, ಮೆಹದಿ ಹಸನ್ ಮೀರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

7 / 7

Published On - 5:12 pm, Thu, 19 September 24

Follow us