IND vs BAN: ಟಾಸ್ ಗೆದ್ದ ಬಾಂಗ್ಲಾ, ಭಾರತ ಮೊದಲು ಬ್ಯಾಟಿಂಗ್; ಹೂಡಾ ಔಟ್! ಉಭಯ ತಂಡಗಳು ಹೀಗಿವೆ

| Updated By: ಪೃಥ್ವಿಶಂಕರ

Updated on: Nov 02, 2022 | 1:24 PM

India vs Bangladesh: ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

IND vs BAN: ಟಾಸ್ ಗೆದ್ದ ಬಾಂಗ್ಲಾ, ಭಾರತ ಮೊದಲು ಬ್ಯಾಟಿಂಗ್; ಹೂಡಾ ಔಟ್! ಉಭಯ ತಂಡಗಳು ಹೀಗಿವೆ
Follow us on

ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ (India and Bangladesh) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯವಾಗಿದ್ದು ಇಲ್ಲಿ ಸೋತ ತಂಡದ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಹೀಗಾಗಿ ಉಭಯ ಪಂದ್ಯಗಳು ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸಲಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಟೀಂ ಇಂಡಿಯಾ ಇದೀಗ ಮೊದಲು ಬ್ಯಾಟಿಂಗ್ ಮಾಡಲಿದೆ. ಉಭಯ ತಂಡಗಳ ಪ್ಲೇಯಿಂಗ್​ನಲ್ಲಿ ಬದಲಾವಣೆ ಮಾಡಲಾಗಿದೆ.

ಅಡಿಲೇಡ್‌ನಲ್ಲಿ ಪಂದ್ಯದ ವೇಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿತ್ತು. ಆದರೆ, ಸದ್ಯಕ್ಕೆ ಮಳೆ ಬೀಳದೆ ಇರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಅಲ್ಲದೆ ಪಂದ್ಯವು ಪೂರ್ಣ 20-20 ಓವರ್‌ಗಳಾಗುವ ಎಲ್ಲಾ ಸಾಧ್ಯತೆಗಳಿವೆ.

ಆಡುವ XIನಲ್ಲಿ ಬದಲಾವಣೆ

ಅಡಿಲೇಡ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಎರಡೂ ತಮ್ಮ ತಂಡಗಳಲ್ಲಿ ಬದಲಾವಣೆಯನ್ನು ಮಾಡಿವೆ. ಭಾರತ ಈ ಪಂದ್ಯಕ್ಕೆ ದೀಪಕ್ ಹೂಡಾ ಬದಲಿಗೆ ಮತ್ತೆ ಅಕ್ಷರ್ ಪಟೇಲ್ ಅವರಿಗೆ ತಂಡದಲ್ಲಿ ಅವಕಾಶ ನೀಡಿದೆ. ಅದೇ ಸಮಯದಲ್ಲಿ ಸೌಮ್ಯ ಸರ್ಕಾರ್ ಬದಲಿಗೆ ಶರೀಫುಲ್ ಇಸ್ಲಾಂ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಡಿಲೇಡ್​ನಲ್ಲಿ ಕೊಹ್ಲಿಗಿಲ್ಲ ಸರಿಸಾಟಿ

ಅಡಿಲೇಡ್ ಓವಲ್‌ನಲ್ಲಿ ವಿರಾಟ್ ಕೊಹ್ಲಿಯ ಬಿರುಸಿನ ಫಾರ್ಮ್‌ಗೆ ಇದುವರೆಗೆ 3 ತಂಡಗಳು ಬಲಿಯಾಗಿವೆ. ಹೀಗಾಗಿ ಇಂದು ಬಾಂಗ್ಲಾದೇಶ ಆ ಸಂಚಿಕೆಯಲ್ಲಿ ನಾಲ್ಕನೇ ತಂಡವಾಗಬಹುದು. ವಿರಾಟ್ ಕೊಹ್ಲಿ ಇದುವರೆಗೆ ಅಡಿಲೇಡ್‌ನಲ್ಲಿ ಆಡಿರುವ 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ. ಇದು ಒಂದೇ ಸ್ಥಳದಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಶತಕಗಳಾಗಿವೆ. ಈ ವೇಳೆ ಅವರು 70.25ರ ಸರಾಸರಿಯಲ್ಲಿ 843 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು 7 ಪಂದ್ಯಗಳನ್ನು ಆಡಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ತಲಾ 1 ಪಂದ್ಯವನ್ನು ಆಡಿದ್ದಾರೆ.

ಭಾರತದ ಪ್ಲೇಯಿಂಗ್ XI:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಶ್ವಿನ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್

ಬಾಂಗ್ಲಾದೇಶದ ಪ್ಲೇಯಿಂಗ್ ಇಲೆವೆನ್:

ನಜ್ಮುಲ್ ಹೊಸೈನ್, ಶರೀಫುಲ್ ಇಸ್ಲಾಂ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್

Published On - 1:12 pm, Wed, 2 November 22