IND vs BAN: 7 ಎಸೆತಗಳಲ್ಲಿ 36 ರನ್; ಬಾಂಗ್ಲಾ ಎದುರು ಅಬ್ಬರದ ಅರ್ಧಶತಕ ಸಿಡಿಸಿದ ರಾಹುಲ್..!
KL Rahul: ಕೆಎಲ್ ರಾಹುಲ್ 32 ಎಸೆತಗಳಲ್ಲಿ ಪೂರ್ಣ 50 ರನ್ ಗಳಿಸಿ ಔಟಾದರು. 156ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಆಡಿದ ರಾಹುಲ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.
ಅಡಿಲೇಡ್ ವಿರಾಟ್ ಕೊಹ್ಲಿಯ (Virat Kohli) ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಏಕೆಂದರೆ ಇಲ್ಲಿ ಆಡಿರುವ 9 ಇನ್ನಿಂಗ್ಸ್ಗಳಲ್ಲಿ ವಿರಾಟ್ ಬರೋಬ್ಬರಿ 5 ಶತಕ ಸಿಡಿಸಿದ್ದಾರೆ. ಆದರೆ ಕೊಹ್ಲಿ ಅಬ್ಬರಕ್ಕೂ ಮೊದಲು, ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ (T20 World Cup 2022) ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಬಿರುಗಾಳಿ ಎಬ್ಬಿಸಿದ್ದಾರೆ. ಮೆಲ್ಬೋರ್ನ್‌ನಿಂದ ಪರ್ತ್‌ವರೆಗಿನ ಪಿಚ್‌ನಲ್ಲಿ ದಯನೀಯವಾಗಿ ವಿಫಲರಾಗಿದ್ದ ಕೆಎಲ್ ರಾಹುಲ್. ಬಾಂಗ್ಲಾದೇಶದ ವಿರುದ್ಧ ಅಡಿಲೇಡ್ ಪಿಚ್‌ನಲ್ಲಿ ಇದ್ದಕ್ಕಿದ್ದಂತೆ ತಮ್ಮ ಹಳೆಯ ಫಾರ್ಮ್‌ಗೆ ಮರಳಿದಲ್ಲದೆ ಅಮೂಲ್ಯ ಅರ್ಧಶತಕ ಸಿಡಿಸಿ ಮಿಂಚಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ. ಆದರೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್- ಹಾಗೂ ರಾಹುಲ್ ಆರಂಭದಲ್ಲಿ ನಿದಾನಗತಿಯ ಬ್ಯಾಟಿಂಗ್ ಮುಂದಾದರು. ಈ ವೇಳೆ ರೋಹಿತ್ ಈ ಪಂದ್ಯದಲ್ಲೂ ವಿಫಲರಾಗಿ ಕೇವಲ 2 ರನ್ಗಳಿಗೆ ಸುಸ್ತಾದರು. ಆದರೆ ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ಅದರಲ್ಲೂ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ರಾಹುಲ್, ಬಾಂಗ್ಲಾ ತಂಡ ದುರ್ಬಲ ಎಸೆತಗಳ ಸಂಪೂರ್ಣ ಲಾಭ ಪಡೆದರು. ಪರಿಣಾಮ ಕೇವಲ 31 ಎಸೆತಗಳಲ್ಲಿಯೇ ರಾಹುಲ್ ಅರ್ಧಶತಕ ಪೂರೈಸಿದರು.
ಕೇವಲ 7 ಎಸೆತಗಳಲ್ಲಿ 36 ರನ್!
ಕೆಎಲ್ ರಾಹುಲ್ 32 ಎಸೆತಗಳಲ್ಲಿ ಪೂರ್ಣ 50 ರನ್ ಗಳಿಸಿ ಔಟಾದರು. 156ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಆಡಿದ ರಾಹುಲ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅಂದರೆ, ಅವರು ಕೇವಲ 7 ಎಸೆತಗಳಲ್ಲಿ ಬೌಂಡರಿಗಳಿಂದ 50 ರಲ್ಲಿ 36 ರನ್ ಗಳಿಸಿದರು. ಕೆಎಲ್ ರಾಹುಲ್ ಔಟಾದಾಗ ಭಾರತದ ಸ್ಕೋರ್ 9.2 ಓವರ್‌ಗಳಲ್ಲಿ 2 ವಿಕೆಟ್‌ಗೆ 78 ಆಗಿತ್ತು, ಅದರಲ್ಲಿ 50 ರನ್‌ಗಳನ್ನು ರಾಹುಲ್ ಒಬ್ಬರೇ ಗಳಿಸಿದ್ದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸೋಲಿಸಿದರೆ, ಅದರ ಸೆಮಿಫೈನಲ್ ಹಾದಿ ಸುಗಮಗೊಳ್ಳಲಿದೆ. ಅಲ್ಲದೆ ರೋಹಿತ್ ಪಡೆ ಸೆಮಿಫೈನಲ್‌ಗೆ ಪ್ರವೇಶಿಸುವ ಮೊದಲು ಕೆಎಲ್ ರಾಹುಲ್ ಈ ಫಾರ್ಮ್‌ಗೆ ಬಮದಿರುವುದು ಭಾರತ ತಂಡದ ದೃಷ್ಟಿಕೋನದಿಂದ ಉತ್ತಮ ಸಂಕೇತವಾಗಿದೆ. ಈ ಇನ್ನಿಂಗ್ಸ್ ಆಡಿದ ನಂತರ ಕೆಎಲ್ ರಾಹುಲ್ ಕೂಡ ತಮ್ಮ ಬಗ್ಗೆ ನಿರಂತರವಾಗಿ ಪ್ರಶ್ನೆ ಎತ್ತುತ್ತಿದ್ದವರಿಗೆ ತಕ್ಕ ಉತ್ತರ ಕೂಡ ನೀಡಿದ್ದಾರೆ.
Published On - 3:42 pm, Wed, 2 November 22