IND vs BAN: ಟಾಸ್ ಗೆದ್ದ ಬಾಂಗ್ಲಾ, ಭಾರತ ಮೊದಲು ಬ್ಯಾಟಿಂಗ್; ಹೂಡಾ ಔಟ್! ಉಭಯ ತಂಡಗಳು ಹೀಗಿವೆ
India vs Bangladesh: ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.
ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ (India and Bangladesh) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯವಾಗಿದ್ದು ಇಲ್ಲಿ ಸೋತ ತಂಡದ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಹೀಗಾಗಿ ಉಭಯ ಪಂದ್ಯಗಳು ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸಲಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಟೀಂ ಇಂಡಿಯಾ ಇದೀಗ ಮೊದಲು ಬ್ಯಾಟಿಂಗ್ ಮಾಡಲಿದೆ. ಉಭಯ ತಂಡಗಳ ಪ್ಲೇಯಿಂಗ್ನಲ್ಲಿ ಬದಲಾವಣೆ ಮಾಡಲಾಗಿದೆ.
ಅಡಿಲೇಡ್‌ನಲ್ಲಿ ಪಂದ್ಯದ ವೇಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿತ್ತು. ಆದರೆ, ಸದ್ಯಕ್ಕೆ ಮಳೆ ಬೀಳದೆ ಇರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಅಲ್ಲದೆ ಪಂದ್ಯವು ಪೂರ್ಣ 20-20 ಓವರ್‌ಗಳಾಗುವ ಎಲ್ಲಾ ಸಾಧ್ಯತೆಗಳಿವೆ.
ಆಡುವ XIನಲ್ಲಿ ಬದಲಾವಣೆ
ಅಡಿಲೇಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಎರಡೂ ತಮ್ಮ ತಂಡಗಳಲ್ಲಿ ಬದಲಾವಣೆಯನ್ನು ಮಾಡಿವೆ. ಭಾರತ ಈ ಪಂದ್ಯಕ್ಕೆ ದೀಪಕ್ ಹೂಡಾ ಬದಲಿಗೆ ಮತ್ತೆ ಅಕ್ಷರ್ ಪಟೇಲ್ ಅವರಿಗೆ ತಂಡದಲ್ಲಿ ಅವಕಾಶ ನೀಡಿದೆ. ಅದೇ ಸಮಯದಲ್ಲಿ ಸೌಮ್ಯ ಸರ್ಕಾರ್ ಬದಲಿಗೆ ಶರೀಫುಲ್ ಇಸ್ಲಾಂ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಡಿಲೇಡ್‌ನಲ್ಲಿ ಕೊಹ್ಲಿಗಿಲ್ಲ ಸರಿಸಾಟಿ
ಅಡಿಲೇಡ್ ಓವಲ್‌ನಲ್ಲಿ ವಿರಾಟ್ ಕೊಹ್ಲಿಯ ಬಿರುಸಿನ ಫಾರ್ಮ್‌ಗೆ ಇದುವರೆಗೆ 3 ತಂಡಗಳು ಬಲಿಯಾಗಿವೆ. ಹೀಗಾಗಿ ಇಂದು ಬಾಂಗ್ಲಾದೇಶ ಆ ಸಂಚಿಕೆಯಲ್ಲಿ ನಾಲ್ಕನೇ ತಂಡವಾಗಬಹುದು. ವಿರಾಟ್ ಕೊಹ್ಲಿ ಇದುವರೆಗೆ ಅಡಿಲೇಡ್‌ನಲ್ಲಿ ಆಡಿರುವ 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ. ಇದು ಒಂದೇ ಸ್ಥಳದಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಶತಕಗಳಾಗಿವೆ. ಈ ವೇಳೆ ಅವರು 70.25ರ ಸರಾಸರಿಯಲ್ಲಿ 843 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು 7 ಪಂದ್ಯಗಳನ್ನು ಆಡಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ತಲಾ 1 ಪಂದ್ಯವನ್ನು ಆಡಿದ್ದಾರೆ.
ಭಾರತದ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಶ್ವಿನ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್
? Toss & Team Update from Adelaide ?
Bangladesh have elected to bowl against #TeamIndia. #T20WorldCup | #INDvBAN
Follow the match ▶️ https://t.co/Tspn2vo9dQ
1⃣ change to our Playing as @akshar2026 is named in the team ? pic.twitter.com/eRhnlrJ1lf
— BCCI (@BCCI) November 2, 2022
ಬಾಂಗ್ಲಾದೇಶದ ಪ್ಲೇಯಿಂಗ್ ಇಲೆವೆನ್:
ನಜ್ಮುಲ್ ಹೊಸೈನ್, ಶರೀಫುಲ್ ಇಸ್ಲಾಂ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್
Published On - 1:12 pm, Wed, 2 November 22