AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 5th Test: ಬೆಂಗಳೂರಿನಲ್ಲಿ ಎಂಜಾಯ್ ಮಾಡಿ ಧರ್ಮಶಾಲಾಕ್ಕೆ ಬಂದ ಇಂಗ್ಲೆಂಡ್ ಕ್ರಿಕೆಟಿಗರಿಗೆ ಶಾಕ್

Dharamshala Test: ಧರ್ಮಶಾಲಾ ತಲುಪಿದ ತಕ್ಷಣ ಇಂಗ್ಲೆಂಡ್ ಆಟಗಾರರಿಗೆ ಆಘಾತ ಉಂಟಾಗಿದೆ. ಧರ್ಮಶಾಲಾದಲ್ಲಿ ಇಳಿದಾಗ ಸ್ಟೋಕ್ಸ್ ಪಡೆಗೆ ಲಂಡನ್​ಗೆ ಬಂದಂತೆ ಅನಿಸಿತು. ಇದಕ್ಕೆ ಕಾರಣ ಧರ್ಮಶಾಲಾ ವೆದರ್. ಇಂಗ್ಲೆಂಡ್ ಕ್ರಿಕೆಟಿಗರನ್ನು ಮಳೆಯ ಮೂಲಕ ಸ್ವಾಗತಿಸಲಾಯಿತು.

IND vs ENG 5th Test: ಬೆಂಗಳೂರಿನಲ್ಲಿ ಎಂಜಾಯ್ ಮಾಡಿ ಧರ್ಮಶಾಲಾಕ್ಕೆ ಬಂದ ಇಂಗ್ಲೆಂಡ್ ಕ್ರಿಕೆಟಿಗರಿಗೆ ಶಾಕ್
England Cricket Team
Vinay Bhat
|

Updated on: Mar 04, 2024 | 9:53 AM

Share

ಫೆಬ್ರವರಿ 7 ರಿಂದ ಪ್ರಾರಂಭವಾಗುವ ಐದನೇ ಮತ್ತು ಅಂತಿಮ ಭಾರತ ವಿರುದ್ಧದ ಟೆಸ್ಟ್‌ಗಾಗಿ ಇಂಗ್ಲೆಂಡ್ (India vs England) ಕ್ರಿಕೆಟ್ ತಂಡ ಧರ್ಮಶಾಲಾಕ್ಕೆ ತಲುಪಿದೆ. ರಾಂಚಿಯಲ್ಲಿ ಸೋಲು ಮತ್ತು ಸರಣಿಯನ್ನು ಕಳೆದುಕೊಂಡ ಬಳಿಕ ಬೆನ್ ಸ್ಟೋಕ್ಸ್ ಪಡೆ ಭಾರತದ ಕೆಲ ಜಾಗಕ್ಕೆ ಎಂಜಾಯ್ ಮಾಡಲು ತೆರಳಿತ್ತು. ಜಾನಿ ಬೈರ್‌ಸ್ಟೋವ್ ತನ್ನ ಸಹ ಆಟಗಾರರ ಜೊತೆ ಗಾಲ್ಫ್ ಆಡಲು ಬೆಂಗಳೂರಿಗೆ ತೆರಳಿದರೆ, ಇನ್ನು ಕೆಲವರು ಚಂಡೀಗಢದಲ್ಲಿ ತಂಗಿದ್ದರು. ಈಗ ರಜೆ ಮುಗಿದಿರುವುದರಿಂದ, ಬೆನ್ ಸ್ಟೋಕ್ಸ್ ತಂಡ ಭಾರತ ಇಂಗ್ಲೆಂಡ್ 5 ನೇ ಟೆಸ್ಟ್‌ಗಾಗಿ ಧರ್ಮಶಾಲಾ ಸ್ಥಳವನ್ನು ತಲುಪಿದ್ದಾರೆ.

ಧರ್ಮಶಾಲಾ ತಲುಪಿದ ತಕ್ಷಣ ಇಂಗ್ಲೆಂಡ್ ಆಟಗಾರರಿಗೆ ಆಘಾತ ಉಂಟಾಗಿದೆ. ಧರ್ಮಶಾಲಾದಲ್ಲಿ ಇಳಿದಾಗ ಸ್ಟೋಕ್ಸ್ ಪಡೆಗೆ ಲಂಡನ್​ಗೆ ಬಂದಂತೆ ಅನಿಸಿತು. ಇದಕ್ಕೆ ಕಾರಣ ಧರ್ಮಶಾಲಾ ವೆದರ್. ಇಂಗ್ಲೆಂಡ್ ಕ್ರಿಕೆಟಿಗರನ್ನು ಮಳೆಯ ಮೂಲಕ ಸ್ವಾಗತಿಸಲಾಯಿತು. ಸೋಮವಾರ, ಆಂಗ್ಲರು ತನ್ನ ಮೊದಲ ಅಭ್ಯಾಸವನ್ನು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಮಧ್ಯಾಹ್ನ 1:30 ಕ್ಕೆ ನಡೆಸಲಿದೆ. ಭಾರತೀಯ ಕ್ರಿಕೆಟ್ ತಂಡದ ಅಭ್ಯಾಸ ಸೆಷನ್ ಇಂದು ಬೆಳಿಗ್ಗೆ 9.30 ಕ್ಕೆ ಶುರುವಾಗಿದೆ.

ಐದನೇ ಟೆಸ್ಟ್​ನಲ್ಲಿ ಪಾಟಿದಾರ್​ಗೆ ಮತ್ತೊಮ್ಮೆ ಅವಕಾಶ: ದೇವದತ್ ಪಡಿಕ್ಕಲ್ ಕೂಡ ಕಣಕ್ಕೆ?

ಶುಭ್​ಮನ್ ಗಿಲ್ ಏಕಾಂಗಿ ಅಭ್ಯಾಸ:

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ಮೊದಲು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುಭ್​ಮನ್ ಗಿಲ್ ಏಕಾಂಗಿಯಾಗಿ ಕಠಿಣ ತರಬೇತಿ ಪಡೆದರು. ಗಿಲ್ ತನ್ನ ತಂದೆಯ ಜೊತೆ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಗಿಲ್ ಒಂದು ಪಂದ್ಯದಲ್ಲಿ ಯಶಸ್ಸು ಸಾಧಿಸಿದರೆ ಮತ್ತೊಂದು ಪಂದ್ಯದಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ನಾಲ್ಕನೇ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಭಾರತ ಈಗಾಗಲೇ 3-1 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಆದರೆ, ಭಾರತ ಕ್ರಿಕೆಟ್ ತಂಡ ಇದುವರೆಗಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಆದರೆ ಧರ್ಮಶಾಲಾದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಮೊದಲ ಬಾರಿಗೆ ಟೀಮ್ ಇಂಡಿಯಾ ಗೆದ್ದ ಮತ್ತು ಸೋತ ಪಂದ್ಯಗಳ ಸಂಖ್ಯೆ ಸಮಾನವಾಗಲಿದೆ. 1932 ರಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಭಾರತ ಈವರೆಗೆ 578 ಪಂದ್ಯಗಳನ್ನು ಆಡಿದೆ. ಈ ಪೈಕಿ 177ರಲ್ಲಿ ಗೆದ್ದು 178ರಲ್ಲಿ ಸೋತಿದೆ. ಇದೀಗ ಧರ್ಮಶಾಲಾದಲ್ಲಿ ಗೆದ್ದರೆ, ಟೆಸ್ಟ್ ಇತಿಹಾಸದಲ್ಲಿ ಭಾರತ ಗೆದ್ದ ಹಾಗೂ ಸೋತ ಪಂದ್ಯಗಳ ಸಂಖ್ಯೆ ಸಮಾನವಾಗಲಿದೆ.

ಒಂದಲ್ಲ, ಎರಡಲ್ಲ: ಐದನೇ ಟೆಸ್ಟ್​ನಲ್ಲಿ ಯಶಸ್ವಿ ಜೈಸ್ವಾಲ್ ಸೃಷ್ಟಿಸಲಿರುವ ದಾಖಲೆಗಳು ನೋಡಿ

ಐದನೇ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಶೋಯೆಬ್ ಬಶೀರ್, ಡಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಆಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ