Ind vs Eng: ಓವಲ್ ಟೆಸ್ಟ್‌ನಲ್ಲಿ ಅಶ್ವಿನ್ ಬದಲು ಜಡೇಜಾಗೆ ಅವಕಾಶ; ಸೂಕ್ತ ಕಾರಣ ವಿವರಿಸಿದ ವಿರಾಟ್ ಕೊಹ್ಲಿ
Ind vs Eng: ಇಂಗ್ಲೆಂಡ್ ನಾಲ್ಕು ಎಡಗೈ ಆಟಗಾರರನ್ನು ಹೊಂದಿದೆ, ಆದ್ದರಿಂದ ಜಡೇಜಾಗೆ ಇದು ಸುಲಭವಾಗಬಹುದು, ಅಲ್ಲದೆ ಜಡೇಜಾ ನಮಗೆ ಬ್ಯಾಟಿಂಗ್ನಲ್ಲೂ ಸಹಾಯಕ್ಕೆ ಬರಬಲ್ಲರು
ಲಂಡನ್‌ನ ಓವಲ್‌ನಲ್ಲಿ ಗುರುವಾರ ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ಗಾಗಿ ಭಾರತ ತನ್ನ ಇಲೆವೆನ್‌ನಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡಿದೆ. ಟಾಸ್ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ವೇಗದ ಬೌಲರ್‌ಗಳಾದ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅಂತಿಮ ಇಲೆವೆನ್‌ಗೆ ಬಂದಿರುವುದನ್ನು ಖಚಿತಪಡಿಸಿದರು ಮತ್ತು ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿಯನ್ನು ತಂಡದಿಂದ ಕೈಬಿಡಲಾಗಿದೆ ಎಂಬುದನ್ನು ವಿವರಿಸಿದರು.
ಇಶಾಂತ್ ಮತ್ತು ಶಮಿಗೆ ಇಂಜುರಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತೊಮ್ಮೆ ಟಾಸ್ ಕಳೆದುಕೊಂಡಿತು. ಜೋ ರೂಟ್ ನಾಲ್ಕನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಟಾಸ್ ನಂತರ ಮಾತನಾಡಿದ ನಾಯಕ ಕೊಹ್ಲಿ, ಇಶಾಂತ್ ಮತ್ತು ಶಮಿಗೆ ಇಂಜುರಿ ಇದೆ, ಹೀಗಾಗಿ ಆಟಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದರು. ಟಾಸ್ ಗೆದ್ದಿದ್ದರೆ ನಾವು ಕೂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೇವು ಎಂದು ಕೊಹ್ಲಿ ಹೇಳಿದರು.
ಎರಡು ಬದಲಾವಣೆಗಳು ಇಶಾಂತ್ ಮತ್ತು ಶಮಿಗೆ ಇಂಜುರಿಯಾಗಿದೆ. ಹೀಗಾಗಿ ಉಮೇಶ್ ಮತ್ತು ಶಾರ್ದೂಲ್ ಮರಳಿದ್ದಾರೆ. ಇಂಗ್ಲೆಂಡ್ ನಾಲ್ಕು ಎಡಗೈ ಆಟಗಾರರನ್ನು ಹೊಂದಿದೆ, ಆದ್ದರಿಂದ ಜಡೇಜಾಗೆ ಇದು ಸುಲಭವಾಗಬಹುದು, ಅಲ್ಲದೆ ಜಡೇಜಾ ನಮಗೆ ಬ್ಯಾಟಿಂಗ್ನಲ್ಲೂ ಸಹಾಯಕ್ಕೆ ಬರಬಲ್ಲರು. ನಮ್ಮ ಸೀಮರುಗಳು ವಿಕೆಟ್ ಮೇಲೆ ಬೌಲಿಂಗ್ ಮಾಡುತ್ತಾರೆ. ಆರಂಭಿಕ ಪಾಲುದಾರಿಕೆ ನಮಗೆ ಅದ್ಭುತವಾಗಿದೆ, ಹೀಗಾಗಿ ನಮಗೆ ಉತ್ತಮ ಆರಂಭ ಸಿಗುವ ನಿರೀಕ್ಷೆ ಇದೆ ಎಂದರು.
ಮತ್ತೊಂದೆಡೆ, ಇಂಗ್ಲೆಂಡ್ ಕೂಡ ತಮ್ಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡಿದ್ದು, ಜೋಸ್ ಬಟ್ಲರ್ ಮತ್ತು ಸ್ಯಾಮ್ ಕುರ್ರನ್ ಅವರ ಸ್ಥಾನವನ್ನು ಒಲ್ಲಿ ಪೋಪ್ ಮತ್ತು ಕ್ರಿಸ್ ವೋಕ್ಸ್ ತುಂಬಲಿದ್ದಾರೆ.