ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 151 ರನ್ಗಳಿಂದ ಸೋಲಿಸಿತು. ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನದಂದು, ಬೌಲರ್‌ಗಳ ಬಲದ ಮೇಲೆ ಟೀಮ್ ಇಂಡಿಯಾ, ಬ್ರಿಟಿಷರಿಗೆ ಎರಡು ಸೆಷನ್‌ಗಳನ್ನೂ ಆಡಲು ಅವಕಾಶ ನೀಡಲಿಲ್ಲ. ಈ ಗೆಲುವಿನೊಂದಿಗೆ ಭಾರತ ತಂಡ ಐದು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಡ್ರಾ ಆಗಿತ್ತು. ಭಾರತ ಗೆಲ್ಲಲು 272 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡವನ್ನು 120 ರನ್ ಗಳಿಗೆ ಆಲ್ಔಟ್ ಮಾಡಲಾಯಿತು.
ಬುಮ್ರಾ ಮತ್ತು ಶಮಿ ಮೊದಲ ಎರಡು ಓವರ್‌ಗಳಲ್ಲಿ ಇಂಗ್ಲೆಂಡ್ ತಂಡದ ಆರಂಭಿಕರಿಬ್ಬರನ್ನೂ ಪೆವಿಲಿಯನ್ಗೆ ಕಳುಹಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಇಂಗ್ಲೆಂಡ್ ಎರಡು ವಿಕೆಟ್ ಗೆ ಒಂದು ರನ್ ಗಳಿಸಿತು. ಶಮಿ ಶೀಘ್ರದಲ್ಲೇ ಭಾರತಕ್ಕೆ ಹಸೀಬ್ ಹಮೀದ್ ವಿಕೆಟ್ ನೀಡುತ್ತಿದ್ದರು, ಆದರೆ ರೋಹಿತ್ ಶರ್ಮಾ ಸ್ಲಿಪ್‌ಗಳಲ್ಲಿ ಅವರ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು.
ರೂಟ್ ಮತ್ತು ಬಟ್ಲರ್ ಅಸಮಾಧಾನಗೊಂಡರು
ಆದಾಗ್ಯೂ, ಹಮೀದ್ ಕೇವಲ ಒಂಬತ್ತು ರನ್ ಗಳಿಸಿದ್ದರಿಂದ ಈ ತಪ್ಪು ಭಾರತಕ್ಕೆ ಹೆಚ್ಚು ದುಬಾರಿಯಾಗಲಿಲ್ಲ. ನಂತರ ಬೇರ್‌ಸ್ಟೊ ವಿರುದ್ಧ ಇಶಾಂತ್ ಮಾಡಿದ ನಂಬಲರ್ಹ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಆದರೆ ಡಿಆರ್‌ಎಸ್‌ನಲ್ಲಿನ ನಿರ್ಧಾರವು ಭಾರತದ ಪರವಾಗಿ ಹೋಯಿತು. ಚಹಾ ಸಮಯಕ್ಕೆ ಮುಂಚೆಯೇ ಈ ವಿಕೆಟ್ ಸಿಕ್ಕಿತು. ಈ ಕಾರಣದಿಂದಾಗಿ ಸ್ಕೋರ್ ನಾಲ್ಕು ವಿಕೆಟ್ಗೆ 67 ರನ್ ಆಗಿತ್ತು.
ಭಾರತದ ಗೆಲುವಿನ ಹಾದಿಯಲ್ಲಿ ಕ್ಯಾಪ್ಟನ್ ಜೋ ರೂಟ್ ದೊಡ್ಡ ಅಡ್ಡಿಯಾಗಿದ್ದರು. ಆದರೆ ಟೀ ವಿರಾಮದ ನಂತರ ಜಸ್‌ಪ್ರೀತ್ ಬುಮ್ರಾ ರೂಟ್ ಬಲಿ ಪಡೆದರು. ಜೋಸ್ ಬಟ್ಲರ್ ಕೂಡ ಬೇಗ ಔಟಾಗುವುದರಲಿದ್ದರು. ಆದರೆ ಕೊಹ್ಲಿಗೆ ಅವರ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಮೊಯೀನ್ ಅಲಿಯ ಜೊತೆಯಲ್ಲಿ ಅವರು ಸುಮಾರು 16 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಿದರು. ನಂತರ ಮೊಯೀನ್ ಅಲಿ (13) ಮತ್ತು ಸ್ಯಾಮ್ ಕುರ್ರನ್ (0) ಅವರನ್ನು ಮೊಹಮ್ಮದ್ ಸಿರಾಜ್ ಸತತ ಎರಡು ಎಸೆತಗಳಲ್ಲಿ ಬಲಿಪಡೆದರು.
ಶಮಿ- ಬುಮ್ರಾ ಅರ್ಧಶತಕದ ಜೊತೆಯಾಟ
ಆರಂಭದಲ್ಲೇ ವಿಕೆಟ್ ಕಳೆದುಕೊಮಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಬಯಸದೆ ಬಂದ ಭಾಗ್ಯದಂತೆ ಶಮಿ ಮತ್ತು ಬುಮ್ರಾ ಆಸರೆಯಾಗಿದ್ದಾರೆ. ಈ ಇಬ್ಬರು ಜೊತೆಗೂಡಿ 77 ರನ್ಗಳ ಜೊತೆಯಾಟ ಆಡಿದ್ದಾರೆ. ಅಲ್ಲದೆ ಮೊಯೀನ್ ಅಲಿ ಓವರ್‌ನ ಎರಡನೇ ಎಸೆತದಲ್ಲಿ ಜೋ ರೂಟ್ ಬುಮ್ರಾ ಕ್ಯಾಚ್ ಕೈಬಿಟ್ಟರು. ಇದು ಕೂಡ ಭಾರತಕ್ಕೆ ನೆರವಾಯಿತು. ಜಸ್‌ಪ್ರೀತ್ ಬುಮ್ರಾ ಅದೇ ಓವರ್‌ನ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು ಮತ್ತು ಇದರೊಂದಿಗೆ ಬುಮ್ರಾ ಮತ್ತು ಶಮಿ ಅರ್ಧಶತಕದ ಜೊತೆಯಾಟವು ಪೂರ್ಣಗೊಂಡಿತು.
ಶಮಿ ಎರಡನೇ ಅರ್ಧ ಶತಕ
ಮೊಹೀನ್ ಅಲಿ ಅವರ ಓವರ್‌ನಲ್ಲಿ ಮೊಹಮ್ಮದ್ ಶಮಿ ಅರ್ಧಶತಕ ಪೂರೈಸಿದರು. ಓವರ್ ನ ಮೂರನೇ ಎಸೆತದಲ್ಲಿ ಶಮಿ ಎರಡನೇ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿ ಒಂದು ಬೌಂಡರಿ ಬಾರಿಸಿದರು. ಅದೇ ಸಮಯದಲ್ಲಿ, ಅವರು ತಮ್ಮ ಮುಂದಿನ ಬಾಲ್‌ನಲ್ಲಿ 92 ಮೀಟರ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಶಮಿಗೆ ಎರಡನೇ ಅರ್ಧ ಶತಕವಾಗಿದೆ. ಅವರು 57 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 50 ರನ್ ಪೂರೈಸಿದರು.
Published On - 11:11 pm, Mon, 16 August 21