India vs England: ವಿರಾಟ್ ಕೊಹ್ಲಿ ತೆಗೆದುಕೊಂಡ ಆ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಾಯಿಸಿತು

India vs England: ಅಂಪೈರ್ ನಾಟೌಟ್ ಎಂಬ ತೀರ್ಮಾನ ನೀಡಿದರು. ರಿವ್ಯೂ ತೆಗೆದುಕೊಳ್ಳುವ ಆಯ್ಕೆ ಭಾರತಕ್ಕಿತ್ತಾದರೂ ವಿರಾಟ್ ಕೊಹ್ಲಿ ಯೋಚನೆಯಲ್ಲಿ ತೊಡಗಿದರು. ಯಾಕಂದ್ರೆ ಈ ಸರಣಿಯಲ್ಲಿ ಕೊಹ್ಲಿ ರಿವ್ಯೂ ಸಿಸ್ಟಮ್ ಅನೇಕ ಬಾರಿ ವಿಫಲವಾಗಿದೆ.

India vs England: ವಿರಾಟ್ ಕೊಹ್ಲಿ ತೆಗೆದುಕೊಂಡ ಆ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಾಯಿಸಿತು
Virat Kohli
Follow us
| Updated By: Vinay Bhat

Updated on: Aug 17, 2021 | 7:38 AM

ಕ್ರಿಕೆಟ್ ಕಾಶಿ ಲಾರ್ಡ್ಸ್ (Lords) ಮೈದಾನದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ತಂಡ ಐತಿಹಾಸಿಕ ಜಯ ಸಾಧಿಸಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೊಹ್ಲಿ (Virat Kohli) ಪಡೆಯ ಗೆಲುವಿಗೆ ಪ್ರಮುಖ ಕಾರಣ ಬೌಲರ್​ಗಳು. ಕೇವಲ ಬೌಲಿಂಗ್​ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲಿ ತಮ್ಮ ಪ್ರದರ್ಶನ ತೋರಿದ ಮೊಹಮ್ಮದ್ ಶಮಿ ಮತ್ತು ಜಸ್​ಪ್ರೀತ್ ಬುಮ್ರಾ ಭಾರತಕ್ಕೆ ಗೆಲುವಿನ ಬಾಗಿಲು ತೆರೆದಿಟ್ಟಿದ್ದು ಸುಳ್ಳಲ್ಲ.

ಭಾರತ ನೀಡಿದ್ದ 272 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್​ 1 ರನ್​ಗೆ 2 ವಿಕೆಟ್ ಕಳೆದುಕೊಂಡಿತು. ನಂತರ ಬಂದ ಹಸೀಬ್ ಅಮೀದ್ 45 ಎಸೆತಗಳಲ್ಲಿ 9 ರನ್​ಗೆ ಔಟ್ ಆದರು. ಆದರೆ, 4ನೇ ವಿಕೆಟ್ ಭಾರತಕ್ಕೆ ಮುಖ್ಯವಾಯಿತು. ಜಾನಿ ಬೈರ್​ಸ್ಟೋ ಅವರನ್ನು ಪೆವಿಲಿಯನ್​ಗೆ ಅಟ್ಟಲು ಭಾರತ ಹರಸಾಹಸ ನಡೆಸುತ್ತಿತ್ತು. ಇದೇ ಸಂದರ್ಭ 22ನೇ ಓವರ್​ನಲ್ಲಿ ಇಶಾಂತ್ ಶರ್ಮಾರನ್ನು ಕರೆತಂದ ಕೊಹ್ಲಿ ಕೊನೆಯ ಎಸೆತದಲ್ಲಿ ಎಲ್​ಬಿಗೆ ಮನವಿ ಮಾಡಲಾಯಿತು.

ಆದರೆ, ಅಂಪೈರ್ ನಾಟೌಟ್ ಎಂಬ ತೀರ್ಮಾನ ನೀಡಿದರು. ರಿವ್ಯೂ ತೆಗೆದುಕೊಳ್ಳುವ ಆಯ್ಕೆ ಭಾರತಕ್ಕಿತ್ತಾದರೂ ವಿರಾಟ್ ಕೊಹ್ಲಿ ಯೋಚನೆಯಲ್ಲಿ ತೊಡಗಿದರು. ಯಾಕಂದ್ರೆ ಈ ಸರಣಿಯಲ್ಲಿ ಕೊಹ್ಲಿ ರಿವ್ಯೂ ಸಿಸ್ಟಮ್ ಅನೇಕ ಬಾರಿ ವಿಫಲವಾಗಿದೆ. ಹೀಗಿದ್ದರೂ ಕೊಹ್ಲಿ ಧೈರ್ಯದಿಂದ ರಿವ್ಯೂ ಮೊರೆ ಹೋದರು. ಥರ್ಡ್ ಅಂಪೈರ್ ಪರೀಕ್ಷಿಸಿ ಇದು ಪರ್ಫೆಕ್ಟ್ ಔಟ್ ಎಂಬ ತೀರ್ಮಾನ ನೀಡಿದರು.

ಅಪಾಯಕಾರಿಯಾಗಿ ಗೋಚರಿಸಿದ್ದ ಬೈರ್​ಸ್ಟೋ ಅವರಿಗೆ ಕೊಹ್ಲಿ ತೆಗೆದುಕೊಂಡ ಆ ಒಂದು ತೀರ್ಮಾನ ಮಾರಕವಾಗಿ ಪರಿಣಮಿಸಿತು. ಇತ್ತ ಭಾರತಕ್ಕೆ ಮತ್ತಷ್ಟು ವಿಶ್ವಾಸ ತುಂಬಿತು. ಇಲ್ಲಿದೆ ಆ ವಿಡಿಯೋ ನೋಡಿ…

ಎರಡನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಕೆ. ಎಲ್ ರಾಹುಲ್ ಅವರ 129 ಮತ್ತು ರೋಹಿತ್ ಶರ್ಮಾ ಅವರ 83 ರನ್​ಗಳ ನೆರವಿನಿಂದ 364 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 5 ವಿಕೆಟ್ ಕಿತ್ತರು. ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ​ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ಅಜೇಯ 180 ರನ್​ಗಳ ಸಹಾಯದಿಂದ 391 ರನ್ ಗಳಿಸಿತು. ಭಾರತ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರು.

27 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಕಳಪೆ ಆರಂಭ ಪಡೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ (61) ಹಾಗೂ ಚೇತೇಶ್ವರ್ ಪೂಜಾರ (45) ಶತಕದ ಜೊತೆಯಾಟ ಆಡಿ ಕೊಂಚ ಚೇತರಿಕೆ ನೀಡಿದ್ದರು. ಆದರೆ, 209 ರನ್​ಗೆ 8 ವಿಕೆಟ್ ಕಳೆದುಕೊಂಡು ಭಾರತಕ್ಕೆ ಸೋಲಿನ ಕರೆಛಾಯೆ ಕಾಣಿಸಿಕೊಂಡ ಸಂದರ್ಭ ಆಸರೆಯಾಗಿದ್ದು ಶಮಿ ಮತ್ತು ಬುಮ್ರಾ.

ಒಂದೆಡೆ ಇಂಗ್ಲೆಂಡ್ ಆಟಗಾರರಿಂದ ಸ್ಲೆಡ್ಜಿಂಗ್, ಮತ್ತೊಂದೆಡೆ ವೇಗದ ಬೌಲರ್​ಗಳಿಂದ ಅಪಾಯಕಾರಿ ಬೌಲಿಂಗ್. ಆದರೂ ಶಮಿ ಮತ್ತು ಬುಮ್ರಾ ಸಂಯಮ ಕಳೆದುಕೊಳ್ಳಲಿಲ್ಲ. ಇಬ್ಬರೂ ಸೇರಿ 9ನೇ ವಿಕೆಟ್​ಗೆ 89 ರನ್​ಗಳ ಮುರಿಯದ ಜೊತೆಯಾಟ ನೀಡಿದರು. ಶಮಿ ಅರ್ಧಶತಕ ಕೂಡ ಭಾರಿಸಿದರು. ಇವರಿಬ್ಬರು ಭಾರತವನ್ನ ಸೋಲಿನಿಂದ ಪಾರು ಮಾಡಿದ್ದಲ್ಲದೇ ಗೆಲುವಿನ ಸಾಧ್ಯತೆ ಒದಗಿಸಿಕೊಟ್ಟರು.

272 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ಭಾರತೀಯ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕನಿಷ್ಠ ಡ್ರಾ ಮಾಡುವಲ್ಲೂ ಯಶಸ್ವಿಯಾಗದ ರೂಟ್ ಪಡೆ 120 ರನ್​ಗೆ ಸರ್ವಪತನ ಕಂಡಿತು. ಸಿರಾಜ್ 4 ಹಾಗೂ ಬುಮ್ರಾ 3 ವಿಕೆಟ್ ಕಿತ್ತರು. ಭಾರತ 151 ರನ್​ಗಳ ಅಮೋಘ ಜಯದೊಂದಿಗೆ 1-0 ಮುನ್ನಡೆ ಸಾಧಿಸಿದೆ.

IND vs ENG: ಲಾರ್ಡ್ಸ್‌ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ ಭಾರತ! ಇಂಗ್ಲೆಂಡ್ ವಿರುದ್ಧ 151 ರನ್​​ಗಳ ಗೆಲುವು.. ಮಿಂಚಿದ ವೇಗಿಗಳು

ಅಫ್ಘಾನಿಸ್ತಾನದ ಈಗಿನ ಸ್ಥಿತಿ ರಶೀದ್ ಖಾನ್ ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ: ಕೆವಿನ್ ಪೀಟರ್ಸನ್

(India vs England This time Virat Kohli not failed DRS call to send Jonny Bairstow on second Test)

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್