IND vs ENG: ಮೊದಲ ಟೆಸ್ಟ್​ಗೆ ಮಳೆ ಅಡ್ಡಿಯಾಗದಿದ್ದರೆ ಭಾರತ ಆ ಪಂದ್ಯವನ್ನೂ ಗೆದ್ದು ಬಿಡುತ್ತಿತ್ತು; ಮೈಕೆಲ್ ಅಥರ್ಟನ್

| Updated By: ಪೃಥ್ವಿಶಂಕರ

Updated on: Aug 21, 2021 | 7:19 PM

IND vs ENG: ಭಾರತದ ಆಡುವ ರೀತಿ, ಗೆಲ್ಲುವ ಇಚ್ಛೆ ಮತ್ತು ಕಷ್ಟದ ಸಮಯದಲ್ಲಿ ತಮ್ಮನ್ನು ತಾವು ನಿಭಾಯಿಸುವ ಸಾಮರ್ಥ್ಯವನ್ನು ನೋಡಿದ ನಂತರ, ನಾಟಿಂಗ್ಹ್ಯಾಮ್ ಟೆಸ್ಟ್​ನಲ್ಲಿಯೂ ಭಾರತ ಗೆಲ್ಲಬಹುದೆಂದು ಎಲ್ಲರಿಗೂ ಅನಿಸಿತ್ತು.

IND vs ENG: ಮೊದಲ ಟೆಸ್ಟ್​ಗೆ ಮಳೆ ಅಡ್ಡಿಯಾಗದಿದ್ದರೆ ಭಾರತ ಆ ಪಂದ್ಯವನ್ನೂ ಗೆದ್ದು ಬಿಡುತ್ತಿತ್ತು; ಮೈಕೆಲ್ ಅಥರ್ಟನ್
ಸಂಕ್ಷಿಪ್ತ ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್: 191/10 (61.3) (ಶಾರ್ದೂಲ್ ಠಾಕೂರ್ 57). ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 290/10 (84) (ಓಲಿ ಪೋಪ್ 81, ಉಮೇಶ್ ಯಾದವ್ 76/3). ಭಾರತ ಎರಡನೇ ಇನ್ನಿಂಗ್ಸ್: 466/10 (148.2) (ರೋಹಿತ್ ಶರ್ಮಾ 127, ಶಾರ್ದೂಲ್ ಠಾಕೂರ್ 60). ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 210/10 (92.2) (ಹಸೀಬ್ ಹಮೀದ್ 63, ಉಮೇಶ್ ಯಾದವ್ 60/3, ಜಸ್​ಪ್ರೀತ್ ಬುಮ್ರಾ 27/2)
Follow us on

ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಭಾರತ 1-0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಈ ಮುನ್ನಡೆ ಸಾಧಿಸಿದೆ, ಆದರೆ ಮಳೆ ಅಡ್ಡಿಯಾಗದಿದ್ದರೆ ಈ ಮುನ್ನಡೆ 2-0 ಆಗಿರುತ್ತಿತ್ತು. ಟ್ರೈಟ್ ಬ್ರಿಡ್ಜ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರತಕ್ಕೆ ಗೆಲ್ಲಲು 157 ರನ್​ಗಳ ಅಗತ್ಯವಿತ್ತು ಮತ್ತು ಒಂಬತ್ತು ವಿಕೆಟುಗಳು ಭಾರತದ ಕೈಲಿತ್ತು. ಆದರೆ ಮಳೆಯಿಂದಾಗಿ ದಿನದ ಪಂದ್ಯವನ್ನು ಆಡಲಾಗಲಿಲ್ಲ. ಹೀಗಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಈ ಸಮಯದಲ್ಲಿ ಇಂಗ್ಲೆಂಡ್ ವಿರುದ್ಧ 2-0 ಮುನ್ನಡೆ ಸಾಧಿಸುತ್ತಿತ್ತು. ಇಂಗ್ಲೆಂಡಿನ ಮಾಜಿ ನಾಯಕ ಮೈಕೆಲ್ ಅಥರ್ಟನ್ ಕೂಡ ಇದನ್ನೇ ಹೇಳಿದ್ದಾರೆ. ಅವರು ಇಂಗ್ಲೆಂಡ್ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನೂ ನೀಡಿದ್ದಾರೆ.

ಭಾರತ ಗೆಲ್ಲುವ ಅವಕಾಶವಿತ್ತು
ಈ ಬಗ್ಗೆ ಮಾತನಾಡಿರುವ ಅಥರ್ಟನ್ ಭಾರತದ ಆಡುವ ರೀತಿ, ಗೆಲ್ಲುವ ಇಚ್ಛೆ ಮತ್ತು ಕಷ್ಟದ ಸಮಯದಲ್ಲಿ ತಮ್ಮನ್ನು ತಾವು ನಿಭಾಯಿಸುವ ಸಾಮರ್ಥ್ಯವನ್ನು ನೋಡಿದ ನಂತರ, ನಾಟಿಂಗ್ಹ್ಯಾಮ್ ಟೆಸ್ಟ್​ನಲ್ಲಿಯೂ ಭಾರತ ಗೆಲ್ಲಬಹುದೆಂದು ಎಲ್ಲರಿಗೂ ಅನಿಸಿತ್ತು. ಆದರೆ ಮಳೆ ಅದಕ್ಕೆ ಅವಕಾಶ ಕೊಡಲಿಲ್ಲ. ಮಳೆಯಾಗದಿದ್ದರೆ ಭಾರತ ಮೊದಲ ಟೆಸ್ಟ್​ನಲ್ಲೂ ಜಯ ಸಾಧಿಸುತ್ತಿತ್ತು ಎಂದು ಅಥರ್ಟನ್ ಹೇಳಿದ್ದಾರೆ.

ಇಂಗ್ಲೆಂಡ್ ಬಗ್ಗೆ ಹೇಳಿದ್ದಿದು
ಇಂಗ್ಲೆಂಡಿಗೆ ಸಂಬಂಧಿಸಿದಂತೆ, ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ ಆದರೆ ಕೆಲವು ಶ್ರೇಷ್ಠ ಕ್ರಿಕೆಟಿಗರಾದ – ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಇವರುಗಳಿಲ್ಲದೆ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ ಎಂದಿದ್ದಾರೆ.