AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 50 ವರ್ಷಗಳಲ್ಲಿ ಏಕೈಕ ಗೆಲುವು; ಓವಲ್‌ನಲ್ಲಿ ಭಾರತದ ಪ್ರದರ್ಶನ ಹೇಗಿದೆ?

India vs England Oval Test: ಭಾರತದ ಇಂಗ್ಲೆಂಡ್ ಪ್ರವಾಸದ ಕೊನೆಯ ಟೆಸ್ಟ್ ಪಂದ್ಯ ಓವಲ್ ಮೈದಾನದಲ್ಲಿ ನಡೆಯಲಿದೆ. ಕಳೆದ 50 ವರ್ಷಗಳಲ್ಲಿ ಓವಲ್‌ನಲ್ಲಿ ಭಾರತ ಒಂದೇ ಒಂದು ಟೆಸ್ಟ್ ಪಂದ್ಯ ಮಾತ್ರ ಗೆದ್ದಿದೆ. ಈ ಪಂದ್ಯ ಭಾರತಕ್ಕೆ ಅತ್ಯಂತ ಮುಖ್ಯ, ಏಕೆಂದರೆ ಇದರಿಂದ ಸರಣಿ ಸೋಲಿನಿಂದ ಪಾರಾಗಬಹುದು. 2021ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಗೆದ್ದಿದ್ದ ಭಾರತ, ಈ ಬಾರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಬೇಕಿದೆ.

IND vs ENG: 50 ವರ್ಷಗಳಲ್ಲಿ ಏಕೈಕ ಗೆಲುವು; ಓವಲ್‌ನಲ್ಲಿ ಭಾರತದ ಪ್ರದರ್ಶನ ಹೇಗಿದೆ?
Oval Pitch
ಪೃಥ್ವಿಶಂಕರ
|

Updated on: Jul 30, 2025 | 10:11 PM

Share

ಭಾರತದ ಇಂಗ್ಲೆಂಡ್‌ (India vs England Test) ಪ್ರವಾಸ ಕೊನೆಯ ಹಂತಕ್ಕೆ ಬಂದು ನಿಂತಿದೆ. ಜುಲೈ 31 ರಿಂದ ಆರಂಭವಾಗಲಿರುವ ಕೊನೆಯ ಟೆಸ್ಟ್ ಪಂದ್ಯ ಓವಲ್ ಮೈದಾನದಲ್ಲಿ (Oval Test Match) ನಡೆಯಲಿದ್ದು, ಈ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿ ನಿಂತಿವೆ. ಆತಿಥೇಯ ಇಂಗ್ಲೆಂಡ್​ಗಿಂತ ಟೀಂ ಇಂಡಿಯಾಕ್ಕೆ ಈ ಪಂದ್ಯ ಬಹಳ ಮುಖ್ಯವಾಗಿದೆ. ಏಕೆಂದರೆ ಈ ಪಂದ್ಯದ ಗೆಲುವು ಭಾರತ ತಂಡವನ್ನು ಸರಣಿ ಸೋಲಿನಿಂದ ಪಾರು ಮಾಡಲಿದೆ. ಆದಾಗ್ಯೂ ಈ ಮೈದಾನದಲ್ಲಿ ಭಾರತದ ಪ್ರದರ್ಶನವನ್ನು ಗಮನಿಸಿದರೆ, ಗಿಲ್ ಪಡೆ ಹಿನ್ನಡೆ ಅನುಭವಿಸಿದೆ ಎನ್ನಬಹುದು. ಏಕೆಂದರೆ, ಈ ಮೈದಾನದಲ್ಲಿ ಕಳೆದ 50 ವರ್ಷಗಳಲ್ಲಿ ಭಾರತ ಕೇವಲ ಒಂದು ಟೆಸ್ಟ್ ಅನ್ನು ಮಾತ್ರ ಗೆದ್ದಿರುವುದು ಟೀಂ ಇಂಡಿಯಾಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

50 ವರ್ಷಗಳಲ್ಲಿ ಏಕೈಕ ಗೆಲುವು

ಕಳೆದ 50 ವರ್ಷಗಳಲ್ಲಿ ಓವಲ್‌ನಲ್ಲಿ ಟೀಂ ಇಂಡಿಯಾ ಏಕೈಕ ಗೆಲುವು ಸಾಧಿಸಿದೆ. 2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಟೀಂ ಇಂಡಿಯಾಕ್ಕೆ 50 ವರ್ಷಗಳ ನಂತರ ಮೊದಲ ಗೆಲುವು ಸಿಕ್ಕಿತ್ತು. ಇದು 1971 ರ ನಂತರ ಓವಲ್‌ನಲ್ಲಿ ಟೀಂ ಇಂಡಿಯಾ ಸಾಧಿಸಿದ ಮೊದಲ ಟೆಸ್ಟ್ ಗೆಲುವಾಗಿತ್ತು. ಅಂದರೆ, ಬರೋಬ್ಬರಿ 50 ವರ್ಷಗಳ ನಂತರ ಟೀಂ ಇಂಡಿಯಾ ಈ ಮೈದಾನದಲ್ಲಿ ಗೆಲುವು ಸಾಧಿಸಿತ್ತು.

ಓವಲ್‌ನಲ್ಲಿ ತಂಡದ ಒಟ್ಟಾರೆ ದಾಖಲೆ ಹೇಗಿದೆ?

1936 ರಿಂದ ಭಾರತ ಓವಲ್‌ನಲ್ಲಿ 15 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ, ಟೀಮ್ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದಿದೆ. 2021 ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗ ಟೀಂ ಇಂಡಿಯಾ ಕೊನೆಯ ಗೆಲುವು ಸಾಧಿಸಿತು. ಉಳಿದಂತೆ ಭಾರತ 6 ಟೆಸ್ಟ್‌ಗಳನ್ನು ಸೋತಿದ್ದರೆ, ಏಳು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 1971 ರಲ್ಲಿ ಈ ಮೈದಾನದಲ್ಲಿ ಭಾರತ ತನ್ನ ಮೊದಲ ಗೆಲುವು ಸಾಧಿಸಿದೆ. ಇಲ್ಲಿ ಮೂರು ಬಾರಿ ಇನ್ನಿಂಗ್ಸ್ ಸೋಲನ್ನು ಎದುರಿಸಿದೆ.

IND vs ENG: ಕುಲ್ದೀಪ್​, ಬುಮ್ರಾ ಆಡ್ತಾರಾ? ಗಂಭೀರ್ ವಿವಾದ ಬಗ್ಗೆ ಗಿಲ್ ಹೇಳಿದ್ದೇನು?

ಕಳೆದ ಬಾರಿ WTC ಫೈನಲ್‌ನಲ್ಲಿ ಸೋಲು

ಜೂನ್ 2023 ರಲ್ಲಿ ಕೆನ್ನಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕೊನೆಯ ಬಾರಿಗೆ WTC ಫೈನಲ್ ಆಡಿತು. ಈ ಪಂದ್ಯದಲ್ಲಿ 209 ರನ್‌ಗಳಿಂದ ಸೋತಿತ್ತು. ಇದಕ್ಕೂ ಮುನ್ನ 2021 ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಇದೇ ಇಂಗ್ಲೆಂಡ್‌ ವಿರುದ್ಧ ಗೆಲುವು ದಾಖಲಿಸಿತ್ತು. ಇದೀಗ ಓವಲ್‌ನಲ್ಲಿ ನಾಲ್ಕು ವರ್ಷಗಳ ನಂತರ ಮತ್ತೊಂದು ಗೆಲುವು ದಾಖಲಿಸುವ ಮೂಲಕ ದಾಖಲೆಯನ್ನು ಸೃಷ್ಟಿಸುವ ಅವಕಾಶ ಟೀಂ ಇಂಡಿಯಾಕ್ಕಿದೆ. ಇದಕ್ಕೆ ಪೂರಕವಾಗಿ ಟೀಂ ಇಂಡಿಯಾದ ಆಟಗಾರರು ಫಾರ್ಮ್‌ನಲ್ಲಿರುವುದು ಒಳ್ಳೆಯ ಸಂಕೇತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!