ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಆಕರ್ಷಕ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಅವರು ಬ್ಯಾಟ್ ಮಾತ್ರವಲ್ಲದೆ ಚೆಂಡಿನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸೌತಾಂಪ್ಟನ್‌ನಲ್ಲಿ ನಡೆದ ಮೊದಲ T20 ಪಂದ್ಯದಲ್ಲಿ, ಆಲ್‌ರೌಂಡರ್ ಅದ್ಭುತ ಅರ್ಧಶತಕವನ್ನು ಗಳಿಸಿದಲ್ಲದೆ, ಬೌಲಿಂಗ್‌ನಲ್ಲಿ 4 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಮೊದಲ T20 ನಲ್ಲಿ ಟೀಮ್ ಇಂಡಿಯಾದ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್ನಲ್ಲಿ 51 ರನ್ ಮೂಲಕ ಅರ್ಧಶತಕ ಗಳಿಸಿದ್ದ ಹಾರ್ದಿಕ್ ನಂತರ 33 ರನ್ ನೀಡಿ 4 ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನದ ಜೊತೆಗೆ ಅವರು ತಮ್ಮ ಹೆಸರಿನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಮ್ಮ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದರು. ಇದರೊಂದಿಗೆ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ 50 ರನ್ ಗಳಿಸಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಪಂದ್ಯದಲ್ಲಿ ಅರ್ಧಶತಕದ ಜತೆಗೆ 4 ವಿಕೆಟ್ ಕಬಳಿಸಿದ ವರ್ಚಸ್ಸು ಟೀಂ ಇಂಡಿಯಾದ ಇತಿಹಾಸದಲ್ಲಿ ಯಾವೊಬ್ಬ ಆಟಗಾರನೂ ಮಾಡಿಲ್ಲ. ಪಾಂಡ್ಯ ಈ ದಾಖಲೆಯ ಸಮೀಪದಲ್ಲಿರುವ ಏಕೈಕ ಆಟಗಾರ ಯುವರಾಜ್ ಸಿಂಗ್.
ಯುವಿ ಒಂದು ಪಂದ್ಯದಲ್ಲಿ ಮೂರು ವಿಕೆಟ್ ಮತ್ತು ಐವತ್ತು ರನ್ ಗಳಿಸಿದರು. ಆದರೆ, ಈ ವಿಚಾರದಲ್ಲಿ ಹಾರ್ದಿಕ್ ಯುವಿಯನ್ನು ಹಿಂದಿಕ್ಕಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಒಂದೇ ಪಂದ್ಯದಲ್ಲಿ 4 ವಿಕೆಟ್ ಹಾಗೂ 50+ ರನ್ ಗಳಿಸಿದ ಆಟಗಾರರ ಹೇಳಬೇಕೆಂದರೆ, ಡ್ವೇನ್ ಬ್ರಾವೋ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಬ್ರಾವೋ, 2009 ರಲ್ಲಿ ಭಾರತದ ವಿರುದ್ಧ ಅಜೇಯ 66 ಮತ್ತು 4 ವಿಕೆಟ್ ಗಳಿಸಿದರು.
ಇವರ ನಂತರ ಮೊಹಮ್ಮದ್ ಹಫೀಜ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 2011ರಲ್ಲಿ ಜಿಂಬಾಬ್ವೆ ವಿರುದ್ಧ 71 ರನ್ ಹಾಗೂ 4 ವಿಕೆಟ್ ಪಡೆದಿದ್ದರು. ಇದಲ್ಲದೇ ಶೇನ್ ವ್ಯಾಟ್ಸನ್ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಸಹಿತ 59 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಹಾರ್ದಿಕ್ ಯಾವುದೇ ತೊಂದರೆಯಿಲ್ಲದೆ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.
ಬ್ಯಾಟ್‌ನೊಂದಿಗೆ ತಮ್ಮ ಪರಾಕ್ರಮದ ನಂತರ, ಪಾಂಡ್ಯ ಬೌಲಿಂಗ್ನಲ್ಲೂ ಪರಾಕ್ರಮ ಮೆರೆದರು. ಪಾಂಡ್ಯ ತಮ್ಮ ಮೊದಲ ಓವರ್‌ನಲ್ಲಿ ಇಬ್ಬರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದಾದ ಬಳಿಕ ಇಂಗ್ಲೆಂಡ್ ಒಂದು ಹೆಜ್ಜೆ ಹಿಂದೆ ಸರಿದಿದ್ದು, ನಂತರ ಆಂಗ್ಲ ತಂಡಕ್ಕೆ ಪಂದ್ಯದಲ್ಲಿ ಚೇತರಿಸಿಕೊಳ್ಳುವ ಅವಕಾಶ ಸಿಗಲಿಲ್ಲ. ಡೇವಿಡ್ ಮಲಾನ್, ಲಿವಿಂಗ್‌ಸ್ಟೋನ್, ಓಪನರ್ ಜೇಸನ್ ರಾಯ್ ಮತ್ತು ಸ್ಯಾಮ್ ಕರನ್ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಈ ಅದ್ಭುತ ಸಾಧನೆಯನ್ನು ಮಾಡಿದರು.