
ಬೆಂಗಳೂರು (ಜೂ. 22): ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಶುಕ್ರವಾರ ಆರಂಭವಾದ ಈ ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಯಶಸ್ವಿ ಜೈಸ್ವಾಲ್, ನಾಯಕ ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಅವರ ಶತಕಗಳ ಸಹಾಯದಿಂದ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿತು. ಟೀಮ್ ಇಂಡಿಯಾ ಅಂತಿಮ ಹಂತದಲ್ಲಿ 41 ರನ್‌ಗಳ ಒಳಗೆ ತನ್ನ ಕೊನೆಯ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಪಂದ್ಯದ ಎರಡನೇ ದಿನದಾಟಕ್ಕೆ ಕೊಂಚ ಮಳೆ ಅಡ್ಡಿಡಪಸಿದರೂ ಇಂಗ್ಲೆಂಡ್ 3 ವಿಕೆಟ್‌ಗಳಿಗೆ 209 ರನ್ ಗಳಿಸಿದೆ.
ಭಾರತ ಇನ್ನೂ 262 ರನ್‌ಗಳ ಮುನ್ನಡೆಯಲ್ಲಿದೆ. ಓಲಿ ಪೋಪ್ ಭಾರತದ ವಿರುದ್ಧ ಶತಕ ಗಳಿಸಿದ್ದಾರೆ. ಅವರು 100 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರಿತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ ಏಕೈಕ ಬೌಲರ್ ಅವರು.
ಎರಡನೇ ದಿನ ಭಾರತ ತಂಡ ಆಂಗ್ಲರ 3 ವಿಕೆಟ್‌ಗಳನ್ನು ಕಬಳಿಸಿತು ಮತ್ತು ಎಲ್ಲಾ ಮೂರು ವಿಕೆಟ್‌ಗಳನ್ನು ಜಸ್ಪ್ರಿತ್ ಬುಮ್ರಾ ಒಬ್ಬರೇ ಪಡೆದರು. ಅವರನ್ನು ಹೊರತುಪಡಿಸಿ, ಭಾರತ ಪರ ಬೇರೆ ಯಾವುದೇ ಬೌಲರ್ 1 ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಜಸ್ಪ್ರಿತ್ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲಿ ಸೋಲಿಸಿದ ರೀತಿ ಇದೇ ಮಾದರಿಯಲ್ಲಿತ್ತು. ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರ ಇದೇ ರೀತಿಯ ಪ್ರದರ್ಶನವನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ.
IND vs ENG 1st Test: ಮೂರನೇ ದಿನ ನಿರ್ಣಾಯಕ: ಇಂದು ನಿರ್ಧಾರವಾಗುತ್ತೆ ಮೊದಲ ಟೆಸ್ಟ್‌ನ ವಿನ್ನರ್
ಜಸ್ಪ್ರಿತ್ ಬುಮ್ರಾ ಅವರ 2024 ರ ಅಂಕಿಅಂಶಗಳು ಅದ್ಭುತವಾಗಿವೆ
2024 ರಿಂದ ಜಸ್ಪ್ರಿತ್ ಬುಮ್ರಾ ಭಾರತೀಯ ತಂಡಕ್ಕಾಗಿ 15 ಸರಾಸರಿಯಲ್ಲಿ 76 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೇ ಸಮಯದಲ್ಲಿ, ಇತರ ಭಾರತೀಯ ವೇಗಿಗಳು 33.6 ಸರಾಸರಿಯಲ್ಲಿ 75 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅಂಕಿಅಂಶಗಳು ಜಸ್ಪ್ರಿತ್ ಬುಮ್ರಾ ಟೀಮ್ ಇಂಡಿಯಾಕ್ಕೆ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಜಸ್ಪ್ರಿತ್ ಬುಮ್ರಾ ಈ ಇಂಗ್ಲೆಂಡ್ ಪ್ರವಾಸದಲ್ಲಿ ಎಲ್ಲಾ ಐದು ಟೆಸ್ಟ್‌ಗಳನ್ನು ಆಡಿದರೆ, ಸರಣಿಯನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಇತಿಹಾಸ ರಚಿಸುವ ಸಾಧ್ಯತೆಗಳು ತುಂಬಾ ಹೆಚ್ಚಿರುತ್ತವೆ.
ಸದ್ಯ ಜಸ್ಪ್ರಿತ್ ಬುಮ್ರಾ ಹೊರತುಪಡಿಸಿ, ಇತರ ಎಲ್ಲಾ ಭಾರತೀಯ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಭಾರತ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿತು ಮತ್ತು ಮೂರು ಕ್ಯಾಚ್‌ಗಳನ್ನು ತಪ್ಪಿಸಿಕೊಂಡಿತು. ಇವೆಲ್ಲವೂ ಬುಮ್ರಾ ಅವರ ಎಸೆತದಲ್ಲಿ ನಡೆಯಿತು. ಬುಮ್ರಾ ಕೂಡ ನೋ ಬಾಲ್‌ನಲ್ಲಿ ಒಂದು ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ಶಾರ್ದುಲ್ ಠಾಕೂರ್ ವಿರುದ್ಧ ಆಂಗ್ಲ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಗಳಿಸಿದರು. ಮೂರನೇ ದಿನವೂ ಇತರೆ ಬೌಲರ್‌ಗಳು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ