ತಿರುವನಂತಪುರಂನಲ್ಲಿ 94% ಮಳೆ; ಟೀಂ ಇಂಡಿಯಾದ 2ನೇ ಅಭ್ಯಾಸ ಪಂದ್ಯವೂ ರದ್ದಾಗುವ ಸಾಧ್ಯತೆ..!

|

Updated on: Oct 02, 2023 | 9:47 AM

IND vs NED Thiruvananthapuram Weather Report: ತಿರುವನಂತಪುರಂನಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿಗಳು ಹೇಳಿವೆ. ಆರ್ದ್ರತೆಯ ಮಟ್ಟವು ಸುಮಾರು 94% ಇದ್ದು, ಹೆಚ್ಚು ಗಾಳಿ ಬೀಸಲು ಸಾಧ್ಯತೆಗಳಿಲ್ಲ. ಹೀಗಾಗಿ ಮಳೆಯ ಸಾಧ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹವಾಮಾನ ವರದಿ ತಿಳಿಸಿದೆ.

ತಿರುವನಂತಪುರಂನಲ್ಲಿ  94% ಮಳೆ; ಟೀಂ ಇಂಡಿಯಾದ 2ನೇ ಅಭ್ಯಾಸ ಪಂದ್ಯವೂ ರದ್ದಾಗುವ ಸಾಧ್ಯತೆ..!
ಪ್ರಾತಿನಿಧಿಕ ಚಿತ್ರ
Follow us on

ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾದ ನಂತರ ಟೀಂ ಇಂಡಿಯಾ ಇದೀಗ ನೆದರ್ಲೆಂಡ್ಸ್ (IND vs NED) ವಿರುದ್ಧ ತನ್ನ ಎರಡನೇ ವಿಶ್ವಕಪ್ ಅಭ್ಯಾಸ ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ನಡುವೆ ಅಕ್ಟೋಬರ್ 3 ರಂದು (ಸೋಮವಾರ) ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ (Greenfield International Stadium in Thiruvananthapuram) ಈ ಅಭ್ಯಾಸ ಪಂದ್ಯ ನಡೆಯಲ್ಲಿದೆ. ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ತಿರುವನಂತಪುರಂಗೆ ಬಂದಿಳಿದಿವೆ. ಆದರೆ ಈ ಪಂದ್ಯಕ್ಕೂ ಮಳೆಯ ಆತಂಕ ಎದುರಾಗಿದ್ದು, ಭಾರತ ಎರಡೂ ಅಭ್ಯಾಸ ಪಂದ್ಯಗಳನ್ನು ಆಡಲು ಸಾಧ್ಯವಾಗದೆ ವಿಶ್ವಕಪ್​ಗೆ ಎಂಟ್ರಿಕೊಡುವ ಸಾಧ್ಯತೆಗಳಿವೆ. ಸದ್ಯಕ್ಕೆ ಸಿಕ್ಕಿರುವ ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನದಂದು ತಿರುವನಂತಪುರಂನಲ್ಲಿ 94% ಮಳೆಯಾಗಲಿದೆ (Rain) ಎಂದು ವರದಿಯಾಗಿದೆ.

ಮಳೆಯ ಸಾಧ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ

ತಿರುವನಂತಪುರಂನಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿಗಳು ಹೇಳಿವೆ. ಆರ್ದ್ರತೆಯ ಮಟ್ಟವು ಸುಮಾರು 94% ಇದ್ದು, ಹೆಚ್ಚು ಗಾಳಿ ಬೀಸಲು ಸಾಧ್ಯತೆಗಳಿಲ್ಲ. ಹೀಗಾಗಿ ಮಳೆಯ ಸಾಧ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹವಾಮಾನ ವರದಿ ತಿಳಿಸಿದೆ. ಪ್ರಸ್ತುತ ತಿರುವನಂತಪುರಂನಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿ ನಡೆಯಬೇಕಿದ್ದ ಅಭ್ಯಾಸ ಪಂದ್ಯಗಳಲ್ಲಿ ಭಾಗಶಃ ಪಂದ್ಯಗಳು ಮಳೆಗಾಹುತಿಯಾಗಿವೆ.

‘ಮೂರು ವಿಶ್ವಕಪ್‌ಗಳಲ್ಲೂ ಹೀಗೆ ಆಗಿದೆ’; ಬೇಸರ ಹೊರಹಾಕಿದ ಯುಜ್ವೇಂದ್ರ ಚಹಲ್‌

ಪಂದ್ಯದ ವೀಕ್ಷಣೆ ಹೇಗೆ?

ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಪಂದ್ಯವನ್ನು ನೇರವಾಗಿ ವೀಕ್ಷಿಸಲು ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ನ ವಿವಿದ ಚಾನೆಲ್​ಗಳನ್ನು ಟ್ಯೂನ್ ಮಾಡಬಹುದಾಗಿದೆ. ಅಲ್ಲದೆ ಪಂದ್ಯವನ್ನು ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಪಿಚ್ ವರದಿ

ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನ ಪಿಚ್ ಬೌಲರ್‌ಗಳಿಗೆ ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಹಾಗೂ ವೇಗದ ಬೌಲರ್‌ಗಳ ಹೆಚ್ಚು ಸಹಕಾರಿಯಾಗಿದೆ. ಆದಾಗ್ಯೂ, ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣವು ವೇಗಿಗಳಿಗೆ ಕೊಂಚ ಹೆಚ್ಚು ನೆರವಾಗಲಿದೆ. ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಟಾಸ್-ವಿಜೇತ ನಾಯಕನು ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ

ನೆದರ್ಲ್ಯಾಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಶರೀಜ್ ಅಹ್ಮದ್, ಆರ್ಯನ್ ದತ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಲೋಗನ್ ವ್ಯಾನ್ ಬೀಕ್, ರಿಯಾನ್ ಕ್ಲೈನ್, ಸಿಬ್ರಾಂಡ್, ಎಂಗೆಲ್‌ಬ್ರೆಚ್ಟ್ನ್, ಎಂಗೆಲ್‌ಬ್ರೆಚ್ಟ್ ಸಾಕಿಬ್ ಜುಲ್ಫಿಕರ್, ಬಾಸ್ ಡಿ ಲೀಡೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ