AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಶನ್ ಬದಲು ವೈಭವ್​ಗೆ ಚಾನ್ಸ್; 2ನೇ ಟಿ20ಗೆ ಭಾರತದ ಪ್ಲೇಯಿಂಗ್ 11

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ T20 ಪಂದ್ಯಕ್ಕೆ ಇಶಾನ್ ಕಿಶನ್ ಗಾಯದಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುವ ಈ ಪಂದ್ಯದಲ್ಲಿ ತಂಡದ ಸಂಭಾವ್ಯ ಬದಲಾವಣೆಗಳು ಮತ್ತು ಹೊಸ ಆಟಗಾರರ ಪ್ರವೇಶ ಕುತೂಹಲ ಮೂಡಿಸಿದೆ.

ಕಿಶನ್ ಬದಲು ವೈಭವ್​ಗೆ ಚಾನ್ಸ್; 2ನೇ ಟಿ20ಗೆ ಭಾರತದ ಪ್ಲೇಯಿಂಗ್ 11
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Oct 23, 2026 | 10:04 PM

Share

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯವೂ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ಗೆಲುವು ಸಾಧಿಸಿತ್ತು. ಹೀಗಾಗಿ, ಎರಡನೇ ಪಂದ್ಯಕ್ಕೂ ಅದೇ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸುವ ಸಾಧ್ಯತೆ ಇತ್ತು. ಆದರೆ, ಇಶಾನ್ ಕಿಶನ್ ಗಾಯಗೊಂಡಿರುವುದರಿಂದ ತಂಡದಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ತೊಡೆಸಂದು ಗಾಯದ ಸಮಸ್ಯೆಯಿಂದ ಇಶಾನ್ ಕಿಶನ್ ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಅವರ ಬದಲಿಗೆ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ.

ವೈಭವ್ ಸೂರ್ಯವಂಶಿ ಅಭ್ಯಾಸದಲ್ಲಿ ಭಾಗಿ

ಎರಡನೇ ಟಿ20 ಪಂದ್ಯಕ್ಕೂ ಮುನ್ನ ಕ್ರೈಸ್ಟ್‌ಚರ್ಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಐಚ್ಛಿಕ ಅಭ್ಯಾಸ ನಡೆಸಿದರು. ಈ ವೇಳೆ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಮೈದಾನದಲ್ಲಿ ಬೆವರು ಹರಿಸಿದರು. ಆದಾಗ್ಯೂ ಇಶಾನ್ ಕಿಶನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇವರ ಜೊತೆಗೆ ಪ್ರಿನ್ಸ್ ಯಾದವ್, ಶಿವಂ ದುಬೆ, ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಕೂಡ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಆಡುವ ಹನ್ನೊಂದರ ಬಳಗದಲ್ಲಿ ಎಷ್ಟು ಬದಲಾವಣೆ?

ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕಡಿಮೆ. ಇಶಾನ್ ಕಿಶನ್ ಬದಲಿಗೆ ಒಬ್ಬ ಆಟಗಾರನನ್ನು ಕಣಕ್ಕಿಳಿಸುವುದಷ್ಟೇ ತಂಡದ ಮುಂದಿರುವ ಆಯ್ಕೆಯಾಗಿದೆ. ಈ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಸೂಕ್ತ ಆಯ್ಕೆಯಾಗಬಹುದು. ಒಂದು ವೇಳೆ ವೈಭವ್‌ಗೆ ಅವಕಾಶ ಸಿಕ್ಕರೆ, ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಯಾಗಬಹುದು. ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಆಗ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.

ಟೀಂ ಇಂಡಿಯಾಕ್ಕೆ ಹಿನ್ನಡೆ: 2ನೇ ಟಿ20 ಪಂದ್ಯದಿಂದ ಇಶಾನ್ ಕಿಶನ್ ಔಟ್!

ಎರಡನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಹನ್ನೊಂದರ ಬಳಗ

ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Fri, 23 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ