ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 21 ರನ್ಗಳ ಜಯ ಸಾಧಿಸಿದರೆ ಲಕ್ನೋದಲ್ಲಿ ನಡೆದ ದ್ವಿತೀಯ ಮ್ಯಾಚ್ನಲ್ಲಿ ಟೀಮ್ ಇಂಡಿಯಾ (Team India) 6 ವಿಕೆಟ್ಗಳ ರೋಚಕ ಗೆಲುವು ಕಂಡಿತು. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ. ಹೀಗಾಗಿ ತೃತೀಯ ಟಿ20 ಮೇಲೆ ಎಲ್ಲರ ಕಣ್ಣಿದ್ದು, ಗೆದ್ದ ತಂಡ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ವಿಶೇಷ ಎಂದರೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಭಾರತ ಇದುವರೆಗೆ ಸರಣಿ ಸೋಲು ಅನುಭವಿಸಿಲ್ಲ. ಇದೇ ದಾಖಲೆಯನ್ನು ಈ ಸರಣಿಯಲ್ಲೂ ಮುಂದುವರೆಸುತ್ತಾ ನೋಡಬೇಕಿದೆ. ಹಾಗಾದರೆ ತೃತೀಯ ಟಿ20 ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?.
ಭಾರತ vs ನ್ಯೂಜಿಲೆಂಡ್ ಮೂರನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?
ಈ ಪಂದ್ಯವು ಬುಧವಾರ, ಫೆಬ್ರವರಿ 1 ರಂದು ನಡೆಯಲಿದೆ.
ತೃತೀಯ ಟಿ20 ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟಿ20 ಪಂದ್ಯವು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಈ ಪಂದ್ಯವು ಎಷ್ಟು ಗಂಟೆಗೆ ಶುರುವಾಗಲಿದೆ?
ಭಾರತ vs ನ್ಯೂಜಿಲೆಂಡ್ ಮೂರನೇ ಟಿ20 ಪಂದ್ಯವು ಸಂಜೆ 07:00 ಗಂಟೆಗೆ ಪ್ರಾರಂಭವಾಗುತ್ತದೆ.
ಯಾವ ಚಾನೆಲ್ನಲ್ಲಿ ನೇರಪ್ರಸಾರ ವೀಕ್ಷಿಸಬಹುದು?
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಬಹುತೇಕ ಚಾನೆಲ್‌ಗಳಲ್ಲಿ ಭಾರತ vs ನ್ಯೂಜಿಲೆಂಡ್ ತೃತೀಯ ಟಿ20 ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಇನ್ನು ಡಿಸ್ನಿ ಹಾಟ್ಸ್ಟಾರ್ ಆ್ಯಪ್ನಲ್ಲೂ ಲೈವ್ ಸ್ಟ್ರೀಮ್ ಇರಲಿದೆ.
ICC Rankings 2023: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1
ಮೂರನೇ ಟಿ20ಗೆ ಭಾರತ ತಂಡದಲ್ಲಿ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಇನ್ನೂ ಸುಧಾರಿಸಿಲ್ಲ. ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಬಿಟ್ಟರೆ ಇತರರಿಂದ ಉತ್ತಮ ಕೊಡುಗೆ ಬರುತ್ತಿಲ್ಲ. ರಾಹುಲ್ ತ್ರಿಪಾಠಿ ತಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ದೀಪಕ್ ಹೂಡ ಕಡೆಯಿಂದ ಕೂಡ ನಿರೀಕ್ಷಿತ ಮಟ್ಟಿನ ಬ್ಯಾಟಿಂಗ್ ಕಾಣಿಸುತ್ತಿಲ್ಲ. ಏಕದಿನದಲ್ಲಿ ಅಬ್ಬರಿಸಿದ ಶುಭ್ಮನ್ ಗಿಲ್ ಕೂಡ ಟಿ20 ಯಲ್ಲಿ ಮಂಕಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ಆಗುತ್ತಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಪೃಥ್ವಿ ಶಾಗೆ ಅವಕಾಶ ನೀಡುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ