Updated on: Jan 30, 2023 | 9:22 PM
ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ನಡುವಣ 2ನೇ ಪಂದ್ಯವು ವಿಶೇಷ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತ್ತು.
100 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿಮುಟ್ಟುವ ಮೂಲಕ ರೋಚಕ ಜಯ ಸಾಧಿಸಿತ್ತು. ವಿಶೇಷ ಎಂದರೆ 239 ಎಸೆತಗಳಲ್ಲಿ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಒಂದೇ ಒಂದು ಸಿಕ್ಸ್ ಮೂಡಿಬಂದಿರಲಿಲ್ಲ.
ಅದರಲ್ಲೂ ಇದೇ ಮೊದಲ ಬಾರಿಗೆ ಸಿಕ್ಸ್ ಬಾರಿಸದೇ ಟೀಮ್ ಇಂಡಿಯಾ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. ಅದು ಕೂಡ 119 ಎಸೆತಗಳನ್ನು ಎದುರಿಸುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಒಟ್ಟು 6 ಫೋರ್ಗಳನ್ನು ಬಾರಿಸಿದರೆ, ಟೀಮ್ ಇಂಡಿಯಾ ಬ್ಯಾಟರ್ಗಳು 8 ಫೋರ್ ಬಾರಿಸಿ ಮಿಂಚಿದ್ದರು. ಇದಾಗ್ಯೂ ಉಭಯ ತಂಡಗಳಿಂದ ಸಿಕ್ಸ್ ಮಾತ್ರ ಮೂಡಿಬಂದಿರಲಿಲ್ಲ. ಇದು ಕೂಡ ಟಿ20 ಕ್ರಿಕೆಟ್ನ ಒಂದು ದಾಖಲೆ.
ಇದಕ್ಕೂ ಮುನ್ನ 2012ರಲ್ಲಿ ಕೀನ್ಯಾ ಹಾಗೂ ಐರ್ಲೆಂಡ್ ನಡುವಣ ಪಂದ್ಯದಲ್ಲಿ ಉಭಯ ತಂಡಗಳು 240 ಎಸೆತಗಳನ್ನು (20/20 ಓವರ್) ಎದುರಿಸಿ ಒಂದೇ ಒಂದು ಸಿಕ್ಸ್ ಬಾರಿಸದೇ ಪಂದ್ಯವನ್ನು ಅಂತ್ಯಗೊಳಿಸಿದ್ದರು.
ಇದೀಗ ನ್ಯೂಜಿಲೆಂಡ್ ಹಾಗೂ ಟೀಮ್ ಇಂಡಿಯಾ 239 ಎಸೆತಗಳನ್ನು (20/19.5 ಓವರ್) ಆಡಿ ಒಂದೇ ಒಂದು ಸಿಕ್ಸ್ ಬಾರಿಸದೇ ಪಂದ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಉಭಯ ತಂಡಗಳು ವಿಶೇಷ ದಾಖಲೆಯನ್ನು ನಿರ್ಮಿಸಿದೆ.