ಸೋಲಿನ ಪಾಠ… ಫೈನಲ್ ಪಂದ್ಯಕ್ಕೆ ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್​!

India vs New zealand: ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್ ಮ್ಯಾಚ್​ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

ಸೋಲಿನ ಪಾಠ... ಫೈನಲ್ ಪಂದ್ಯಕ್ಕೆ ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್​!
T20 World Cup 2026

Updated on: Mar 08, 2026 | 10:23 AM

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಿಚ್ ರೆಡಿಯಾಗಿದೆ. ಅದು ಸಹ 70% ಕೆಂಪು ಮಣ್ಣು ಮತ್ತು 30% ಕಪ್ಪು ಮಣ್ಣಿನಿಂದ ಕೂಡಿದ ಪಿಚ್ ಎಂಬುದು ವಿಶೇಷ. ಅಂದರೆ ಈ ಬಾರಿ ಮಿಶ್ರ ಮಣ್ಣಿನ ಪಿಚ್​ನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಅದರಂತೆ ಇದೀಗ ಮಿಶ್ರಿತ ಮಣ್ಣಿನ ಪಿಚ್ ಸಿದ್ಧವಾಗಿದ್ದು, ಈ ಪಿಚ್​ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ.

ಮಿಶ್ರ ಮಣ್ಣಿನ ಪಿಚ್: ಈ ಪಂದ್ಯಕ್ಕಾಗಿ ಅಹಮದಾಬಾದ್​ನ ಮೈದಾನದ 6ನೇ ಪಿಚ್​ ಅನ್ನು ಬಳಸಲಾಗುತ್ತಿದೆ. ಈ ಪಿಚ್​ ಅನ್ನು ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ (70% ಕೆಂಪು ಮತ್ತು 30% ಕಪ್ಪು ಮಣ್ಣು) ನಿರ್ಮಿಸಲಾಗಿದೆ.

ವೇಗ ಮತ್ತು ಬೌನ್ಸ್: ಈ ಪಿಚ್​ನಲ್ಲಿ ಶೇ.70 ರಷ್ಟು ಕೆಂಪು ಮಣ್ಣು ಇರುವುದರಿಂದ ಪಿಚ್ ಗಟ್ಟಿಯಾಗಿರುತ್ತದೆ. ಇದರಿಂದ ಚೆಂಡು ವೇಗವಾಗಿ ಮತ್ತು ನಿಖರವಾದ ಬೌನ್ಸ್‌ನೊಂದಿಗೆ ಬ್ಯಾಟ್‌ಗೆ ಬರುತ್ತದೆ. ಇದು ಬ್ಯಾಟರ್‌ಗಳಿಗೆ ಶಾಟ್‌ಗಳನ್ನು ಆಡಲು ತುಂಬಾ ಸುಲಭ ಮಾಡಿಕೊಡುತ್ತದೆ.

ಬ್ಯಾಟಿಂಗ್ ಸ್ವರ್ಗ: ಈ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಂತೆ ಹೈ-ಸ್ಕೋರಿಂಗ್ ಪಂದ್ಯ ನಿರೀಕ್ಷಿಸಲಾಗಿದೆ.

ಪಿಚ್ ಸ್ಥಿರತೆ: ಈ ಪಿಚ್​ನಲ್ಲಿ ಶೇ.30 ರಷ್ಟು ಕಪ್ಪು ಮಣ್ಣು ಬಳಸಿರುವುದರಿಂದ ಪಿಚ್ ಬೇಗನೆ ಬಿರುಕು ಬಿಡುವುದಿಲ್ಲ. ಇದು ಪಂದ್ಯದ ಉದ್ದಕ್ಕೂ ಪಿಚ್ ಒಂದೇ ಸಮನಾಗಿ ಇರುವಂತೆ ನೋಡಿಕೊಳ್ಳುತ್ತದೆ, ಇದರಿಂದ ಬ್ಯಾಟಿಂಗ್ ಮಾಡುವುದು ಎರಡೂ ಇನ್ನಿಂಗ್ಸ್‌ಗಳಲ್ಲಿ ಸುಲಭವಾಗುತ್ತದೆ.

ವೇಗದ ಬೌಲರ್‌ಗಳಿಗೆ ಸಹಕಾರಿ: ಕೆಂಪು ಮಣ್ಣಿನ ಕಾರಣದಿಂದಾಗಿ ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಉತ್ತಮ ಸ್ವಿಂಗ್ ಮತ್ತು ಕ್ಯಾರಿ ಸಿಗಲಿದೆ.

ಸ್ಪಿನ್ನರ್‌ಗಳಿಗೆ ಸವಾಲು: ಈ ರೀತಿಯ ಮಿಶ್ರಿತ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಸ್ಪಿನ್ ಆಗುವುದಿಲ್ಲ. ಹಾಗಾಗಿ ಸ್ಪಿನ್ನರ್‌ಗಳು ವಿಕೆಟ್ ಪಡೆಯಲು ಹೆಚ್ಚು ಶ್ರಮಪಡಬೇಕಾಗುತ್ತದೆ.

ಹೈ-ಸ್ಕೋರಿಂಗ್ ಪಂದ್ಯ: ಫೈನಲ್ ಪಂದ್ಯಕ್ಕೆ ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗುವಂತಹ ಪಿಚ್ ಅನ್ನೇ ನಿರ್ಮಿಸಲಾಗಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ರನ್​ ಮಳೆ ನಿರೀಕ್ಷಿಸಬಹುದು. ಅದರಲ್ಳೂ 200+ ಸ್ಕೋರ್​ ಗಳಿಸುವುದು ಇಲ್ಲಿ ಕಷ್ಟವೇನಲ್ಲ.

ಟಾಸ್ ನಿರ್ಣಾಯಕ: ಇಬ್ಬನಿಯ ಪ್ರಭಾವದಿಂದಾಗಿ ಟಾಸ್ ಗೆದ್ದ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹಿಂದಿನ ದಾಖಲೆ: ಅಹಮದಾಬಾದ್​ನಲ್ಲಿ ಆಡಲಾದ ಕೊನೆಯ ಪಂದ್ಯದಲ್ಲಿ ಕೆನಡಾ ವಿರುದ್ಧ ಸೌತ್ ಆಫ್ರಿಕಾ 213 ರನ್ ಗಳನ್ನು ಕಲೆಹಾಕಿದ್ದರು. ಹೀಗಾಗಿ ಮಿಶ್ರಿತ ಮಣ್ಣಿನ ಪಿಚ್​ನಲ್ಲಿ ಈ ಬಾರಿ ಕೂಡ ಬೃಹತ್ ಸ್ಕೋರ್​ ನಿರೀಕ್ಷಿಸಬಹುದು.

ಇದನ್ನೂ ಓದಿ: ಸದ್ದಡಗಿಸುವುದೇ ನಮ್ಮ ಗುರಿ: ಮಿಚೆಲ್ ಸ್ಯಾಂಟ್ನರ್

ಸೋಲಿನ ಪಾಠ: 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಬಳಸಿದ ನಿಧಾನಗತಿಯ ಕಪ್ಪು ಮಣ್ಣಿನ ಪಿಚ್‌ಗಿಂತ ಇದು ಭಿನ್ನವಾಗಿದೆ. ಭಾರತೀಯ ಬ್ಯಾಟರ್‌ಗಳ ಆಕ್ರಮಣಕಾರಿ ಆಟಕ್ಕೆ ಪೂರಕವಾಗಲೆಂದೇ ಈ ಬಾರಿ ಕೆಂಪು ಮಣ್ಣಿನ ಮಿಶ್ರಣವನ್ನು ಬಳಸಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ಆಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.

Published On - 10:20 am, Sun, 8 March 26

Follow Us