IND vs PAK: ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು; ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Oct 24, 2022 | 10:28 AM

T20 World Cup 2022: ಆಟಗಾರರನ್ನು ಸಮಾಧಾನ ಪಡಿಸಲು ಮುಂದಾದ ಬಾಬರ್ ಅಜಮ್, ನಾವು ಖಂಡಿತವಾಗಿಯೂ ಸೋತಿದ್ದು ಒಂದೇ ಒಂದು ಪಂದ್ಯ, ಟಿ20 ವಿಶ್ವಕಪ್ ಅಲ್ಲ ಎಂದು ಹೇಳಿದ್ದಾರೆ. ಆದರೆ, ಇದಾದ ಬಳಿಕವೂ ಪಾಕಿಸ್ತಾನಿ ಆಟಗಾರರ ಮುಖದಿಂದ ನಗು ಕಾಣಲಿಲ್ಲ.

IND vs PAK: ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು; ವಿಡಿಯೋ ನೋಡಿ
ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು
Follow us on

ಮೆಲ್ಬೋರ್ನ್ ಮೈದಾನದಲ್ಲಿ ಟೀಂ ಇಂಡಿಯಾ (Team India) ಒಂದು ದಿನ ಮುಂಚಿತವಾಗಿಯೇ ದೀಪಾವಳಿ ಆಚರಿಸಿದೆ. ತನ್ನ ಮೊದಲ ಟಿ20 ವಿಶ್ವಕಪ್‌ (T20 World Cup 2022) ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸುವುದರೊಂದಿಗೆ ರೋಹಿತ್ (Rohit Sharma) ಸೈನ್ಯ ಕೋಟ್ಯಾಂತರ ಅಭಿಮಾನಿಗಳಿಗೆ ದೀಪಗಳ ಹಬ್ಬದ ಗಿಫ್ಟ್ ನೀಡಿದೆ. ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ಪಾಕ್ ತಂಡ ತಾನು ಮಾಡಿಕೊಂಡ ಎಡವಟ್ಟುಗಳಿಂದಲೇ ಈ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು. ಈ ಗೆಲುವಿನ ಬಳಿಕ ಟೀಂ ಇಂಡಿಯಾ ಸಂತಸದ ಅಲೆಯಲ್ಲಿ ಮಿಂದೆದ್ದರೆ, ಎದುರಾಳಿ ತಂಡದ ಆಟಗಾರರು ಹತಾಶೆಯಲ್ಲಿ ಮೈದಾನದಿಂದ ಹೊರನಡೆದರು. ಡ್ರೆಸ್ಸಿಂಗ್ ರೂಂನಲ್ಲಿ ಸೋಲಿನ ಶಾಕ್​ನಿಂದ ಹೊರಬರಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಪಾಕ್ ಆಟಗಾರರ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ವಾಸ್ತವವಾಗಿ ಕೊನೆಯ ಹಂತದವರೆಗೂ ಗೆಲುವು ನಮ್ಮದೆ ಎಂದು ಬೀಗುತ್ತಿದ್ದ ಪಾಕ್ ಪಡೆಗೆ ಹಾರ್ದಿಕ್ ಹಾಗೂ ಕೊಹ್ಲಿ ನೀಡಿದ ಶಾಕ್ ಹೇಗಿತ್ತೆಂದರೆ, ಕೊನೆಯ ಓವರ್​ಗಳಲ್ಲಿ ಪಾಕ್ ಆಟಗಾರರು ಮೈದಾನದಲ್ಲೇ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದು ಎಲ್ಲರಿಗೂ ಕಣ್ಣಿಗೆ ಕಟ್ಟುವಂತೆ ಕಾಣುತ್ತಿತ್ತು.

ಇನ್ನು ಸೋಲಿನ ಬಳಿಕ ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ಹೋದ ಪಾಕ್ ತಂಡದ ಆಟಗಾರರ ಸ್ಥಿತಿ ಹೇಳತೀರದಾಗಿತ್ತು. ಸೋಲಿನ ಶಾಕ್​ನಿಂದ ಹೊರಬರಲಾಗದೆ ನರಳುತ್ತಿದ್ದ ಪಾಕ್ ಆಟಗಾರರು ಡ್ರೆಸ್ಸಿಂಗ್ ಕೋಣೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಇನ್ನು ಕೆಲವರು ಗದ್ದಕ್ಕೆ ಕೈಕೊಟ್ಟಿದ್ದರೆ, ಕೆಲವರು ಸಪ್ಪೆ ಮೊರೆಯಲ್ಲಿದ್ದರು. ತನ್ನ ಆಟಗಾರರಿಗೆ ಸ್ಫೂರ್ತಿ ತುಂಬಲು ತಂಡದ ಮುಖ್ಯ ಕೋಚ್ ಹಾಗೂ ನಾಯಕ ಮುಂದಾದರಾದೂ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: IND vs PAK: ಕಿಂಗ್ ಕೊಹ್ಲಿ ವಿರಾಟ ರೂಪ ; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಪಿಸಿಬಿ ವಿಡಿಯೋದಲ್ಲಿ ಏನಿದೆ?

ಪಾಕ್ ಕ್ರಿಕೆಟ್ ಮಂಡಳಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಪಾಕಿಸ್ತಾನಿ ಆಟಗಾರರ ಮುಖದಲ್ಲಿನ ಹತಾಶೆ ಎಷ್ಟು ಪ್ರಬಲವಾಗಿದೆಯೆಂದರೆ, ಅವರ ಮುಂದೆ ನಾಯಕ ಬಾಬರ್ ಅಜಮ್ ಅವರ ಉತ್ಸಾಹವೂ ತಣ್ಣಗಾಗಿದೆ. ಆಟಗಾರರನ್ನು ಸಮಾಧಾನ ಪಡಿಸಲು ಮುಂದಾದ ಬಾಬರ್ ಅಜಮ್, ನಾವು ಖಂಡಿತವಾಗಿಯೂ ಸೋತಿದ್ದು ಒಂದೇ ಒಂದು ಪಂದ್ಯ, ಟಿ20 ವಿಶ್ವಕಪ್ ಅಲ್ಲ ಎಂದು ಹೇಳಿದ್ದಾರೆ. ಆದರೆ, ಇದಾದ ಬಳಿಕವೂ ಪಾಕಿಸ್ತಾನಿ ಆಟಗಾರರ ಮುಖದಿಂದ ನಗು ಕಾಣಲಿಲ್ಲ.

ರೌಫ್ ಸೊಕ್ಕು ಮುರಿದ ಕೊಹ್ಲಿ

19ನೇ ಓವರ್ ಎಸೆಯುವುದಕ್ಕೂ ಮುನ್ನ ಮಾರಕ ದಾಳಿಯ ಖುಷಿಯಲ್ಲಿದ್ದ ರೌಫ್ ಕೂಡ ಗೆಲುವಿನ ವಿಶ್ವಾಸದಲ್ಲೇ ದಾಳಿಗಿಳಿದರು. ಆದರೆ, ಕೊಹ್ಲಿ ಸಿಡಿಸಿದ ಆ ಎರಡು ಸಿಕ್ಸರ್ ರೌಫ್ ಜಂಗ್ಗ ಬಲವನ್ನೇ ಅಡಗಿಸಿತು. ಕೊಹ್ಲಿಯ ಆ ರೌದ್ರಾವತಾರ ಕಂಡ ರೌಫ್ ಕೂಡ ತಲೆಯನ್ನು ಮೇಲೆತ್ತಲಾಗದೆ ಮೈದಾನದಲ್ಲಿ ಮೌನವಾಗಿಬಿಟ್ಟರು. ಅಂತಿಮ ಓವರ್ ಎಸೆಯುವುದಕ್ಕೂ ಮುನ್ನ 3 ಓವರ್ ಬೌಲ್ ಮಾಡಿದ್ದ ರೌಫ್, ಟೀಂ ಇಂಡಿಯಾದ ಪ್ರಮುಖ 2 ವಿಕೆಟ್ ತೆಗೆದು ಮಿಂಚಿದ್ದರು. ಅಲ್ಲದೆ 19ನೇ ಓವರ್​ನ ಮೊದಲ 4 ಎಸೆತಗಳಲ್ಲೂ ರೌಫ್ ಹೆಚ್ಚಿನ ರನ್ ಬಿಟ್ಟುಕೊಟ್ಟಿರಲಿಲ್ಲ. ಆದರೆ ಕೊನೆಯ ಎರಡೂ ಎಸೆತಗಳು ಮಾತ್ರ ಪಾಕ್ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದವು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ